ಕನ್ನಡಪ್ರಭ ವಾರ್ತೆ ಕಾರ್ಕಳ
ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಸಕಾಲಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ದೊರಕುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣೆಗಳು ನಡೆಸಿ ಬಡ ಹಾಗೂ ಮಧ್ಯಮ ವರ್ಗಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಮಣಿಪಾಲ ಆಸ್ಪತ್ರೆಗಳು ಆರೋಗ್ಯದ ಕಾಳಜಿಗೆ ಮಹತ್ವ ನೀಡುತ್ತಿವೆ ಎಂದರು.ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ಮಾತನಾಡಿ, ಅಜೆಕಾರು ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡರೆ ರೋಗಿಗಳು ಸಕಾಲ ಚಿಕೆತ್ಸೆಗಳಿಗೆ ದೂರದ ನಗರಗಳಿಗೆ ಅಲೆಯಬೇಕಾಗಿಲ್ಲ ಎಂದರು.
ಶಿಬಿರಗಳಲ್ಲಿ ತೊಡಗಿಸಿಕೊಂಡ ಗ್ರಾಮ ವ್ಯಾಪ್ತಿಗಳ ಎಲ್ಲ ಇಸಿಜಿ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶ್ರಮಿಸಿದ ದಾದಿಯರು ಹಾಗೂ ವೈದ್ಯರ ಸೇವೆಗಳನ್ನು ಕೊಂಡಾಡಿದರು. ಶಿಬಿರ ಆಯೋಜಿಸಿದ ಆಯೋಜಕರಿಗೆ ಧನ್ಯವಾದ ವಿತ್ತರು.ಮಲೇಕಾ ಮಣಿಪಾಲದ ಡೀನ್ ಡಾ. ಉಲ್ಲಾಸ್ ಕಾಮತ್, ಡಾ.ಶರತ್ ರಾವ್ ಅವರನ್ನು ಪರಿಚಯಿಸಿದರು. ಡಾ.ನಿರಂಜನ್, ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ ಬಲ್ಲಾಳ್, ಅಜೆಕಾರು ಶಾರದೋತ್ಸವ ಸಮಿತಿಯ ಸಂದೀಪ್ ಶೆಟ್ಟಿ, ನಡಿಮಾರು ಜಯರಾಜ್ ಹೆಗ್ಡೆ, ಪ್ರದೀಪ್ ಹೆಗ್ಡೆ, ಅಜೆಕಾರು ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಶೆಣೈ ಇದ್ದರು.ಡಾ.ಪದ್ಮನಾಭ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸುಭಾಶ್ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಪಾಟ್ಕರ್ ವಂದಿಸಿದರು.ಶಿಬಿರದಲ್ಲಿ 750ಕ್ಕೂ ಅಧಿಕ ಶಿಬಿರಾರ್ಥಿಗಳು, 500ಕ್ಕೂ ಅಧಿಕ ಇಸಿಜಿ, 47 ನುರಿತ ವೈದ್ಯರು, 20 ಸಮುದಾಯ ಅಧಿಕಾರಿಗಳು, 100 ಸ್ವಯಂಸೇವಕರು, 30 ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.