ಅಕ್ಕಮಹಾದೇವಿ ಕನ್ನಡದ ಮೊದಲ ಕವಯಿತ್ರಿ: ಡಾ. ಗೋರು ಚನ್ನಬಸಪ್ಪ

KannadaprabhaNewsNetwork |  
Published : Apr 20, 2024, 01:00 AM IST
 ನಾಡೋಜ ಡಾ. ಗೋರು ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಬದುಕನ್ನು ಅರ್ಥೈಸಿಕೊಳ್ಳುವ ನಡೆ-ನುಡಿಗಳ ಅನುಭವದ ಮಾತುಗಳನ್ನು ವಚನ ಸಾಹಿತ್ಯದ ರೂಪದಲ್ಲಿ ಇಡೀ ಜಗತ್ತಿಗೆ ಸಾರಿದ್ದಾರೆ

ಕನ್ನಡಪ್ರಭ ವಾರ್ತೆ ಭಾಲ್ಕಿ

ಶಿವಶರಣೆ ಅಕ್ಕಮಹಾದೇವಿಯು ಭಕ್ತಿ, ಜ್ಞಾನ ಮತ್ತು ವೈರಾಗ್ಯದ ಸಾಕಾರ ಮೂರ್ತಿಯಾಗಿದ್ದಳು. ಜತೆಗೆ ಕನ್ನಡದ ಮೊದಲ ಕವಿಯತ್ರಿಯು ಆಗಿದ್ದಳು ಎಂದು ಹಿರಿಯ ಚಿಂತಕ ನಾಡೋಜ ಡಾ. ಗೋರು ಚನ್ನಬಸಪ್ಪ ಹೇಳಿದರು.

ನಗರದ ಭಾಲ್ಕಿ ಹಿರೇಮಠ ಸಂಸ್ಥಾನ ಹಮ್ಮಿಕೊಂಡಿದ್ದ ವೈರಾಗ್ಯ ನಿಧಿ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ಮತ್ತು ಡಾ. ಚನ್ನಬಸವ ಪಟ್ಟದೇವರ 25ನೇ ಸ್ಮರಣೋತ್ಸವದ ಅಕ್ಕನ ವಚನೇತರ ಸಾಹಿತ್ಯ ಅನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಅಕ್ಕಮಹಾದೇವಿಯದು ಸ್ವತಂತ್ರ, ನಿರ್ಭೀತ ನಿಲುವಾಗಿತ್ತು. ಅವಳ ತತ್ವ ಸಿದ್ಧಾಂತ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕಪಡಿಸಿಕೊಳ್ಳಲು ಸಾಧ್ಯ, ವಚನ ಸಂವಿಧಾನ ವಿಶ್ವವ್ಯಾಪಿ ಸಂವಿಧಾನ ಈ ಸಾಹಿತ್ಯ ಮಾನವೀಯ ಮೌಲ್ಯ ಹೇಳುತ್ತದೆ. ನಡೇ ಮತ್ತು ನುಡಿ ಒಂದಾಗಿದರೇ ಆತನ ನಿಜವಾದ ಶರಣ ಎಂದು ತಿಳಿಸಿದರು.

ಹಿರಿಯ ಸಾಹಿತಿ ಡಾ. ಕಲ್ಯಾಣರಾವ ಪಾಟೀಲ ಮಾತನಾಡಿ, 12ನೇ ಶತಮಾನದಲ್ಲಿ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಕೃಷಿ ಮಾಡಿದವರಲ್ಲಿ ಅಕ್ಕಮಹಾದೇವಿ ಪಾತ್ರ ಪ್ರಮುಖವಾಗಿದೆ. ಬದುಕನ್ನು ಅರ್ಥೈಸಿಕೊಳ್ಳುವ ನಡೆ-ನುಡಿಗಳ ಅನುಭವದ ಮಾತುಗಳನ್ನು ವಚನ ಸಾಹಿತ್ಯದ ರೂಪದಲ್ಲಿ ಇಡೀ ಜಗತ್ತಿಗೆ ಸಾರಿದ್ದಾರೆ. ಅಂದಿನ ಸ್ಥಿತಿಗತಿಯಲ್ಲಿ ಸಮಾಜದಲ್ಲಿನ ಮೌಢ್ಯ, ಜಾತೀಯತೆ ಹಾಗೂ ಕಂದಾಚಾರ ತಮ್ಮ ಬರವಣಿಗೆ ಮೂಲಕ ಜಾಗೃತಿಗೊಳಿಸಿ ಹೋಗಲಾಡಿಸುವಲ್ಲಿ ಅಕ್ಕಮಹಾದೇವಿ ಪಾತ್ರ ಪ್ರಮುಖವಾದದ್ದು. ಇತಿಹಾಸದ ಪುಟಗಳಲ್ಲಿ ಅಕ್ಕಮಾದೇವಿ ಅಜರಾಮರ. ಸಾಹಿತಿಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಅವರು ಸ್ಫೂರ್ತಿದಾಯಕ ಎಂದರು.

ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಗುರುಬಸವ ಪಟ್ಟದೇವರು ಕಾರ್ಯಕ್ರಮದ ಅಧ್ಯಕ್ಷತೆ ಡಾ. ಜಗನ್ನಾಥ ಹೆಬ್ಬಾಳೆ, ಸಂಗಮೇಶ ಅಣದೂರೆ, ಬಸವರಾಜ ಬಿಜ್ಜವವಾಡೆ, ದಿಲೀಪಕುಮಾರ ಡೊಂಗರಗೆ ಸೋಮಶೇಖರ್ ಪಾಟೀಲ, ರಾಜಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ಸಿದ್ಧಯ್ಯ ಕಾವಡಿಮಠ, ವಿಶ್ವನಾಥಪ್ಪ ಬಿರಾದಾರ, ಕಂಟೆಪ್ಪ ಗಂದಿಗೂಡೆ, ಚಂದ್ರಶೇಖರ ಬನ್ನಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಾ.ಬಸವಜ್ಯೋತಿ ಸಂಗಮಕರ್ ನಿರೂಪಿಸಿದರು, ಪಾರ್ವತಿ ಧೂಮ್ಮನಸೂರೆ ಶರಣು ಸಮರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು