ಒಕೆ..ಚಂದ್ರಯಾನ-3 ಕುರಿತ ಇಸ್ರೋಯಾನ ಆಲ್ಬಮ್ ಲೋಕಾರ್ಪಣೆ

KannadaprabhaNewsNetwork | Published : Oct 7, 2023 2:15 AM

ಸಾರಾಂಶ

ಸಂಗೀತ್ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ನಿರ್ಮಿಸಲಾಗಿರುವ ಚಂದ್ರಯಾನ-3 ಕುರಿತ ಇಸ್ರೋಯಾನ ಎಂಬ ಆಲ್ಬಮ್ ವಿಡಿಯೋವನ್ನು ಸಿದ್ಧಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ, ತುಮಕೂರು ಸಂಗೀತ್ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ನಿರ್ಮಿಸಲಾಗಿರುವ ಚಂದ್ರಯಾನ-3 ಕುರಿತ ಇಸ್ರೋಯಾನ ಎಂಬ ಆಲ್ಬಮ್ ವಿಡಿಯೋವನ್ನು ಸಿದ್ಧಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಶ್ರೀಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ಡಿ. ಸತೀಶ್ ಕಿತ್ತೂರು ಅವರು ಚಂದ್ರಯಾನ-3 ಇಸ್ರೋಯಾನ ಕುರಿತು ವಿಜ್ಞಾನಿಗಳಿಗೆ ಗೌರವ ಸೂಚಿಸುವಂತಹ ಗೀತೆಯನ್ನು ರಚನೆ ಮಾಡಿದ್ದಾರೆ. ಸಂಗೀತ್, ಶ್ರೀನಿವಾಸ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜತೆಗೆ 8-10 ಜನರ ತಂಡ ತಮ್ಮ ಕಂಠದಾನ ಮಾಡಿದ್ದು, ಇವರೆಲ್ಲರೂ ಒಟ್ಟಾಗಿ ಸೇರಿ ಧ್ವನಿಸುರುಳಿಯನ್ನು ಮಾಡಿದ್ದಾರೆ ಎಂದರು. ಚಂದ್ರಯಾನದ ವಿಜ್ಞಾನಿಗಳ ಕೊಡುಗೆ ಏನು ನಮ್ಮ ದೇಶಕ್ಕೆ ಎಂಬುದು ತಿಳಿಯಲಿದೆ. ಅವರಿಂದ ಇನ್ನು ಹೆಚ್ಚಿನ ಸಾಧನೆಯಾಗಲಿ ಎಂದು ಹಾರೈಸುತ್ತೇನೆ ಎಂದರು. ನಬೋ ಮಂಡಲದಲ್ಲಿ ಅವೆಲ್ಲವೂ ಕೆಲಸ ಮಾಡಲು ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಿದೆ. ಅವರ ಗುರಿಗಳೆಲ್ಲವೂ ಕೂಡ ಯಶಸ್ವಿಯಾಗಲಿ ಎಂದು ಆಶಿಸಿದರು. ಡಿ.ಸತೀಶ್ ಕಿತ್ತೂರು, ಸಂಗೀತ್ ಶ್ರೀನಿವಾಸ್ ಮತ್ತು ತಂಡ ಒಂದು ಉತ್ತಮವಾದ ಗಾಯನ ರಚಿಸಿ ಹಾಡಿದ್ದಾರೆ. ಈ ಮೂಲಕ ಇಸ್ರೋ ಅಧ್ಯಕ್ಷ ಸೋಮನಾಥ್ ಮತ್ತವರ ತಂಡದವರಿಗೆ ಹಾಗೂ ವಿಜ್ಞಾನಿಗಳಿಗೆ ಗೌರವ ನೀಡುವ ಕೆಲಸ ಮಾಡಿದ್ದಾರೆ. ಈ ವಿಶೇಷವಾದ ಧ್ವನಿ ಸುರಳಿಯನ್ನು ಎಲ್ಲರೂ ಕೇಳಿ ಸಂತೋಷಪಟ್ಟು ಪ್ರೋತ್ಸಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಸಂಗೀತ್ ಶ್ರೀನಿವಾಸ್, ಡಾ. ಕೃಷ್ಣಮೂರ್ತಿ, ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ, ಡಿ. ಸತೀಶ್ ಕಿತ್ತೂರು, ಡ್ಯಾನಿಯಲ್, ಗಾಯಕರಾದ ಮಲ್ಲಿಕಾರ್ಜುನ್, ಹೃತಿಕ್, ರಾಧಿಕಾ ಹಾಲೇಶ್, ಮೇಘನ, ಹರೀಶ್, ತೇಜು ಉಪಸ್ಥಿತರಿದ್ದರು.

Share this article