ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವ್ಯಾಪಾರ ಸಬಲೀಕರಿಸಲು, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲಿಕ್ಕಾಗಿ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ ಎಂದು ದೂರಿದರು.
ಕಾರ್ಖಾನೆಗಳ ವ್ಯಾಖ್ಯಾನದಲ್ಲಿ ಕಾರ್ಮಿಕರ ಮಿತಿ ಹೆಚ್ಚಳದಿಂದ ಗುತ್ತಿಗೆ ಕಾರ್ಮಿಕರ ಪರವಾನಿಗೆಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದಾಗಿ ಶೇ.90ರಷ್ಟು ಕಾರ್ಮಿಕರಿಗೆ ವೇತನ, ಇಎಸ್‌ಐ, ಪಿಎಫ್, ಗ್ರಾಚುಟಿ ಹಾಗೂ ಬೋನಸ್‌ಗಳಿಂದ ಹೊರಗುಳಿಯುತ್ತಾರೆ ಎಂದರು.ಕಾರ್ಮಿಕರು ಹಕ್ಕೊತ್ತಾಯಗಳು ಈಡೇರದಿದ್ದಾಗ ಮಾಡುತ್ತಿದ್ದ ಮುಷ್ಕರವನ್ನು ಮಾಡಿದರೆ ಅದಕ್ಕೆ ದಂಡ, ಜೈಲು ಮತ್ತು ಅನಿರ್ಧಿಷ್ಟ ವೇತನ ಕಡಿತ ಮಾಡಲಾಗುತ್ತದೆ. 300ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳು ಮಾತ್ರ ಸ್ಥಾಯಿ ಆದೇಶಗಳಿರುತ್ತವೆ. 300 ಕಾರ್ಮಿಕರಿರುವ ಕಾರ್ಖಾನೆಗಳು ಯಾವಾಗ ಬೇಕಾದರೂ ಮುಚ್ಚಿಕೊಂಡು ಹೋಗಲು ಅನುಮತಿ ಕೊಡಲಾಗಿದೆ. ಈ ರೀತಿಯಾಗಿ ಬಂಡವಾಳಗಾರರ ಹಿತ ಕಾಯಲು ಮತ್ತು ಬಂಡವಾಳಗಾರರ ಸಂಪತ್ತನ್ನು ರಕ್ಷಿಸಲು ಪ್ರಬುತ್ವಗಳು ಟೊಂಕಕಟ್ಟಿ ಅನುವು ಮಾಡಿಕೊಡಲಾಗಿದೆ ಎಂದರು.
ನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ವಿಬಿಜಿ ರಾಮ್-ಜಿ ಕಾಯ್ದೆ ರದ್ದುಗೊಳಿಸಬೇಕು. ಭೂಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ವಿದ್ಯುತ್‌ಶಕ್ತಿ ಖಾಸಗೀಕರಣ ಮಾಡಬಾರದು, ವಿಮಾ ತಿದ್ದುಪಡಿ ಕಾಯ್ದೆ ಮತ್ತು ಶಾಂತಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಎಂ.ನಾರಾಯಣ್ ಮಾತನಾಡಿ, ಫೆ.12ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ನಮ್ಮ ಸಮಿತಿ ಸಂಪೂರ್ಣ ಬೆಂಬಲಿಸಲಿದೆ. ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಜನವಿರೋಧಿ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿದೆ. ಈ ಎಲ್ಲಾ ಜನವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಕೆ.ಎಲ್.ಅಶೋಕ್, ಇಟ್ಟೂರು ರಾಜು, ಕಸೆಟ್ಟಿ ರುದ್ರೇಶ್, ಕೆ.ರಾಘವೇಂದ್ರ, ಹನುಮಮ್ಮ, ಜಿ.ಎನ್.ಷಡಾಕ್ಷರಿ, ಸಿ.ಚಂದ್ರಪ್ಪ, ಜಗದೀಶ್, ರಂಗಸ್ವಾಮಿ, ಷಣ್ಮುಖಪ್ಪ, ಹಾಲೇಶಪ್ಪ ಉಪಸ್ಥಿತರಿದ್ದರು.