ಕಡೂರಿನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Mar 30, 2026, 12:30 AM IST
29ಕೆಕೆಡಿಯು1. | Kannada Prabha

ಸಾರಾಂಶ

ಕಡೂರುಪಟ್ಟಣದಲ್ಲಿ ಏಪ್ರಿಲ್ 10,11, ಮತ್ತು 12 ರಂದು ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ನಡೆದಿವೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಸಮ್ಮೇಳನಾಧ್ಯಕ್ಷರಿಗೆ ಸಾರೋಟಿನ ಮೆರವಣಿಗೆ ಮೂಲಕ ಸ್ವಾಗತ । ಬರಗೂರು ರಾಮಚಂದ್ರಪ್ಪ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದಲ್ಲಿ ಏಪ್ರಿಲ್ 10,11, ಮತ್ತು 12 ರಂದು ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ನಡೆದಿವೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಭಾನುವಾರ ಪಟ್ಟಣದ ಕನ್ನಡ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಮ್ಮೇಳನದ ಆರಂಭದ ಏಪ್ರಿಲ್ 10 ರ ಶುಕ್ರವಾರ ಸಂಜೆ ಸಮ್ಮೇಳನಾಧ್ಯಕ್ಷರಾದ ಜಯಮ್ಮನವರನ್ನು ಸಾರೋಟಿನ ಮೆರವಣಿಯಲ್ಲಿ ಚಂದ್ರಮೌಳೇಶ್ವರ ದೇವಾಲಯದಿಂದ ಕೆಎಲ್ ವಿ ವೃತ್ತ, ಮರವಂಜಿ ವೃತ್ತ, ಶ್ರೀಬಸವೇಶ್ವರ ವೃತ್ತದ ಮೂಲಕ ಸಮ್ಮೇಳನ ನಡೆವ ಸರಕಾರಿ ಪದವಿ ಪೂರ್ವ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣಕ್ಕೆ ಕರೆತರಲಾಗುವುದು. ಅಂದು ಸಂಜೆ 6 - 9 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

11ರ ಶನಿವಾರ ಬೆಳಿಗ್ಗೆ ಸಮ್ಮೇಳನಾಧ್ಯಕ್ಷೆ ಎಂ. ಜಯಮ್ಮನವರನ್ನು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಗುವುದು. 9ಗಂಟೆಗೆ ನಾಡೋಜ ಬರಗೂರು ರಾಮಚಂದ್ರಪ್ಪನವರು ಸಮ್ಮೇಳನ ಉಧ್ಘಾಟಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಎಲ್. ಶಂಕರ್ ಮತ್ತು ಮಾಜಿ ಶಾಸಕ ವೈ ಎಸ್.ವಿ. ದತ್ತ ಉಪನ್ಯಾಸ ನೀಡಲಿದ್ದಾರೆ. ಕವಿತಾ ಮಿತ್ರ ಭಾಗವಹಿಸಲಿದ್ದಾರೆ. ಕೃಷಿಗೋಷ್ಠಿ, ಕವಿಗೋಷ್ಠಿ ಮತ್ತು ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.

12 ನೇ ಭಾನುವಾರ ಬೆಳಿಗ್ಗೆ 9 ರಿಂದ 11 ಗಂಟೆಗೆ ಜಾನಪದ ಕಲಾ ಪ್ರಾಕಾರಗಳ ಪ್ರದರ್ಶನ, ಸೋನೆ ಪದ, ವೀರಗಾಸೆ ,ಡೊಳ್ಳು, ಕೋಲಾಟ ಹಾಗು ಮಹಿಳಾಗೋಷ್ಠಿ ಜತೆಗೆ ಅನೇಕ ಗೋಷ್ಠಿಗಳು ಸಂಜೆವರೆಗೂ ನಡೆಯಲಿದೆ. ಮಾದಾರ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮ ಮತ್ತು ಸಾಹಿತ್ಯ ಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗು ಪುಸ್ತಕಗಳ ಬಿಡುಗಡೆ, 4 ಗಂಟೆಗೆ ಭಹಿರಂಗ ಅಧಿವೇಶನ ನಡೆಯಲಿದೆ ಎಂದರು. ಏ. 10,11.12ರಂದು ಮೂರು ದಿನಗಳ ಸಮ್ಮೇಳನದ ಯಶಸ್ಸಿಗೆ ಎಲ್ಲ ರೀತಿಯ ವವಸ್ಥೆಗಳು ನಡೆದಿದ್ದು, 40 ಪುಸ್ತಕ ಮಳಿಗೆ ಗಳು ತೆರೆಯಲಾಗುತ್ತಿದ್ದು, ವಸ್ತು ಪ್ರದರ್ಶನವೂ ನಡೆಯಲಿದೆ. ಬರುವ ಜನರಿಗೆ ಮೂರು ದಿನಗಳ ಕಾಲ ಊಟ, ಕಾಫಿ ತಿಂಡಿ, ವಸತಿ ಕಲ್ಪಿಸಲಾಗುವುದು ಎಂದರು. ಜಿಲ್ಲೆಯ ಎಲ್ಲ ಕನ್ನಡದ ಮನಸ್ಸುಗಳು ಭಾಗವಹಿಸಬೇಕು ಎಂದು ಶ್ರೀನಿವಾಸ್ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ಪದಾಧಿಕಾರಿಗಳಾದ ಎಚ್, ಎಂ. ಲೋಕೇಶ್, ಪಿ ಎ. ರಾಜಪ್ಪ, ಸವಿತಾ ರಮೇಶ್, ಸೀಗೇಹಡ್ಲು ಹರೀಶ್, ಪುರಸಭೆ ಸದಸ್ಯರಾದ ಮರುಗುದ್ದಿ ಮನು, ಯಾಸೀನ್, ಸಿಂಗಟಗೆರೆ ಸಿದ್ದಪ್ಪ, ಗೆದ್ಲೆಹಳ್ಳಿ ಜಗದೀಶ್, ಮಂಜುನಾಥ್, ಜಿಲ್ಲೆಯ ಸಾಹಿತ್ಯ ಘಟಕಗಳ ಪದಾಧಿಕಾರಿಗಳು ಮತ್ತಿತರರು ಇದ್ದರು.

-- ಬಾಕ್ಸ್ ಸುದ್ದಿಗೆ--ಸ್ವಾಗತ ಸಮಿತಿ ಅಧ್ಯಕ್ಷರಾಗಿ ಭಂಡಾರಿ ಶ್ರೀನಿವಾಸ್, ಪೋಷಕರಾಗಿ ಶಾಸಕ ಕೆ. ಎಸ್. ಆನಂದ್, ಉಪಾಧ್ಯಕ್ಷರಾಗಿ ವೈ. ಎಸ್. ವಿ. ದತ್ತ, ಬೆಳ್ಳಿ ಪ್ರಕಾಶ್ ಹಾಗೂ ಮಹಾ ಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ .ಜಾರ್ಜ್ ಇರಲಿದ್ದಾರೆ. ಅಲ್ಲದೆ ಕಸಾಪದ ಚಿಕ್ಕಮಗಳೂರು, ತರೀಕೆರೆ ಮೂಡಿಗೆರೆ, ಶೃಂಗೇರಿ ಶಾಸಕರು. ವಿ.ಪ. ಸದಸ್ಯರಾದ ಸಿ. ಟಿ. ರವಿ, ಎಸ್. ಎಲ್. ಭೋಜೇಗೌಡ, ಡಾ ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ಸೂರಿ ಶ್ರೀನಿವಾಸ್ ಇದ್ದಾರೆ.

29ಕೆಕೆಡಿಯು1.

ಕಡೂರಿನ ಕನ್ನಡ ಭವನದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನದಲ್ಲಿ ಶ್ರೀರಾಮನವಮಿ ವೈಭವ ಸಾಮೂಹಿಕ ಯಜ್ಞ
ಅಗ್ನಿ ಬನ್ನಿರಾಯ ಜಯಂತಿಗೆ ಸರ್ಕಾರದ ಒತ್ತು