ತರೀಕೆರೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಜೂನ್ 1 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಪರಶುರಾಮಪ್ಪ ತಿಳಿಸಿದ್ದಾರೆ.
ಜೂ.1 ರಿಂದ ತರೀಕೆರೆ, ಅಜ್ಜಂಪುರಗಳಲ್ಲಿ ಶಾಲೆ ಆರಂಭ । ಹಾಜರಾತಿ ನಿರ್ವಹಣಾ ವ್ಯವಸ್ಥೆ ಜಾರಿ
ಕನ್ನಡಪ್ರಭ ವಾರ್ತೆ ತರೀಕೆರೆ
2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಜೂನ್ 1 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಪರಶುರಾಮಪ್ಪ
ತಿಳಿಸಿದ್ದಾರೆ.ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ 224 ಸರ್ಕಾರಿ ಶಾಲೆ, 16 ಅನುದಾನಿತ ಶಾಲೆ, 31 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 271 ಶಾಲೆಗಳು ಏಕಕಾಲದಲ್ಲಿ ಪ್ರಾರಂಭ ವಾಗಲಿದೆ. ಈ ಶಾಲೆಗಳ ಒಟ್ಟು 21,350 ಮಕ್ಕಳು ಶಾಲೆಗೆ ಮರುಪ್ರವೇಶ ಪಡೆಯಲಿದ್ದಾರೆ.
ಜೂನ್ 1 ರಂದು ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ಅಂದೇ ಪೋಷಕರ ಮಹಾ ಸಭೆಯನ್ನು ಆಯಾ ಶಾಲೆಗಳಲ್ಲಿ ಆಯೋಜಿಸಲಾಗಿದೆ. ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಜರಿದ್ದು ಸಿಹಿ ವಿತರಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಪಠ್ಯಪುಸ್ತಕ ಸಮವಸ್ತ್ರ ವಿತರಣೆ:
ಎರಡೂ ತಾಲೂಕುಗಳಲ್ಲಿ ಎಲ್ಲಾ ಶಾಲೆಗಳ ತರಗತಿಗಳು, ಶೌಚಾಲಯಗಳಲ್ಲಿ ಮತ್ತು ಶಾಲೆಯ ಅವರಣ ಸ್ವಚ್ಚಗೊಳಿಸಲಾಗಿದೆ. ಮಧ್ಯಾಹ್ನದ ಉಪಹಾರ ಯೋಜನೆಯಂತೆ ಮಕ್ಕಳಿಗೆ ಕೆನೆಭರಿತ ಹಾಲು, ಮೊಟ್ಟೆ, ರಾಗಿಮಾಲ್ಟ್ ಬಾಳೆಹಣ್ಣು, ಬಿಸಿಯೂಟ ವಿತರಿಸುವ ವ್ಯವಸ್ಥೆ ಮಾಸಲಾಗಿದೆ. ಜೂನ್ 1 ರಂದೇ ಮಕ್ಕಳಿಗೆ ಪಠ್ಯಪುಸ್ತಕ, 2 ಜೊತೆ ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಿಸಲ ಈಗಾಗಲೇ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಶಾಲೆಗಳಿಗೆ ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ.ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ದಾಖಲಾತಿ ಆಂದೋಲನ ಕೈಗೊಂಡು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಪೋಷಕರ ಮನವೊಲಿಸುವ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುವ ವಿವಿಧ ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ಆಂದೋಲನದಲ್ಲಿ ತಿಳಿಸಲಾಗುತ್ತಿದೆ. ಶಾಲೆ ಅಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಇಲಾಖಾ ಮಾರ್ಗದರ್ಶನದಂತೆ ಅನುಷ್ಠಾನ ಗೊಳಿಸುವ ಸಲುವಾಗಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಮುಖ್ಯೋಪಾಧ್ಯಾಯರಿಗೆ, ಸಿ.ಆರ್.ಪಿ.ಬಿ.ಆರ್.ಪಿ., ಇಸಿಒಗಳಿಗೆ ತಾಲೂಕು ಮಟ್ಟದ ಸಭೆ ಏರ್ಪಡಿಸಿ 26-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ವಿವರಿಸಿದರು.
ಹಾಜರಾತಿ ಕಡ್ಡಾಯ:
ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದು ಅದರ ಪ್ರಕಾರ ಡಿಜಿಟಲ್ ಹಾಜರಾತಿ ಆಪ್ ಅಳವಡಿಸಿ ಅದರಂತೆ ಬೆಳಿಗ್ಗೆ 9.30ಕ್ಕೆ ಚೆಕ್-ಇನ್ ಮತ್ತು ಸಂಜೆ 4.30ಕ್ಕೆ ಚೆಕ್-ಔಟ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲ ಶಿಕ್ಷಕರು ಶಾಲೆಯಲ್ಲಿದ್ದು ಮಕ್ಕಳೊಂದಿಗೆ ಪಾಠ ಪ್ರವಚನ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆಟಪಾಠಗಳಂತ ಚಟುವಟಿಕೆಯಲ್ಲಿ ತೊಡಗಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ 670 ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರು, 201 ಪ್ರೌಢ ಶಾಲೆ ಶಿಕ್ಷಕರು ಕರ್ತವ್ಯದಲ್ಲಿದ್ದು ಶಾಲಾ ಶೈಕ್ಷಣಿಕ ವ್ಯವಸ್ಥೆ ಜಾರಿಗೆ ಸಂಪೂರ್ಣ ಸನ್ನದ್ದರಾಗಿದ್ದು ಖಾಲಿ ಹುದ್ದೆಗಳಿಗೆ ಜೂನ್ ಮೊದಲ ವಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಮಾಡಿಕೊಡ ಲಾಗುವುದು. ಹಾಗಾಗಿ ಎಲ್ಲ ಶಿಕ್ಷಕರು, ಪೋಷಕರು, ಸಮುದಾಯ ಮತ್ತು ಜನಪ್ರತಿನಿಧಿಗಳ ಸಹಕಾರ ದೊಂದಿಗೆ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.-
29ಕೆಟಿಆರ್.ಕೆ.15ಃ
ತರೀಕೆರೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಮಾರ್ಗದರ್ಶನ ಸಭೆ ಏರ್ಪಡಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.