ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಖಂಡಿತವಾಗಿ ಕಾಡಲಿದೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಅವರು ಸಾಮಾಜಿಕ ನ್ಯಾಯ, ಸಮಾನತೆಗೆ, ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಇನ್ನು ಮುಂದೆಯೂ ರಾಜ್ಯದ ಸೇವೆ ಮಾಡಲಿ ಎಂದು ಆಶಿಸುತ್ತೇನೆ

(ಸುಧಾಕರ್‌ ಮಗ್‌ಶಾಟ್‌)

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ ಎಂದು ಹೇಳಿರುವುದು ಡಿ.ಕೆ. ಶಿವಕುಮಾರ್‌ ಅವರಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದು ಸಂಸದ ಡಾ.ಕೆ. ಸುಧಾಕರ್‌ ವಿಶ್ಲೇಷಿಸಿದ್ದಾರೆ.

ಸಂಸದರು ಶುಕ್ರವಾರ ವಿವಿಧೆಡೆ ಅನೇಕ ಅಭಿವೃದ್ಧಿ ಕಾಮಗಾರಿ, ಉದ್ಘಾಟನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಖಂಡಿತವಾಗಿ ಕಾಡಲಿದೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಅವರು ಸಾಮಾಜಿಕ ನ್ಯಾಯ, ಸಮಾನತೆಗೆ, ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಇನ್ನು ಮುಂದೆಯೂ ರಾಜ್ಯದ ಸೇವೆ ಮಾಡಲಿ ಎಂದು ಆಶಿಸುತ್ತೇನೆ ಎಂದು ಸುಧಾಕರ್‌ ಹೇಳಿದ್ದಾರೆ.

ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ ಎಂದು ಹೇಳಿರುವುದು ಡಿ.ಕೆ.ಶಿವಕುಮಾರ್‌ ಅವರಿಗೆ ಎಚ್ಚರಿಕೆಯ ಘಂಟೆಯಾಗಿದೆ. ಏಕೆಂದರೆ ಸಿದ್ದರಾಮಯ್ಯನವರು ಸುಮ್ಮನೆ ಕೂರುವವರಲ್ಲ. ಭಿನ್ನಾಭಿಪ್ರಾಯವಿರುವ ಶಾಸಕರು ಅಭಿಯಾನ ಮಾಡಿದರೆ ಅದರ ಕೇಂದ್ರವಾಗಿ ಸಿದ್ದರಾಮಯ್ಯ ಇರುತ್ತಾರೆ ಎಂದರು.ಡಿ.ಕೆ.ಶಿವಕುಮಾರ್‌ ಅವರು ಹೋರಾಟ, ಸಂಘಟನೆ ಮಾಡಿದ್ದು, ಈಗ ಸಿಎಂ ಸ್ಥಾನವನ್ನು ದಕ್ಕಿಸಿಕೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಅವರಿಂದ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ರಿಯಲ್‌ ಎಸ್ಟೇಟ್‌ ಎನ್ನುವುದು ಕಳ್ಳತನ ಅಥವಾ ದರೋಡೆಯಲ್ಲ. ಅನ್ಯಾಯ ಮಾಡದೆ ಆ ವೃತ್ತಿಯನ್ನು ಮಾಡಬೇಕು. ಅವರೊಬ್ಬರೇ ಅಲ್ಲ, ಅನೇಕರು ಆ ವೃತ್ತಿ ಮಾಡುತ್ತಿದ್ದಾರೆ. ಹಾಗಾಗಿ ಆ ವಿಚಾರದಲ್ಲಿ ಯಾರೂ ಟೀಕೆ ಮಾಡಬಾರದು. ಅವರು ಮುಖ್ಯಮಂತ್ರಿಯಾದ ಆರು ತಿಂಗಳ ಬಳಿಕ ಆಡಳಿತದ ವೈಖರಿಯನ್ನು ವಿಶ್ಲೇಷಿಸಬೇಕು ಎಂದರು.

ಈಗ ಇರುವ ಸಚಿವರು ಮಾಜಿಗಳಾಗಿದ್ದಾರೆ. ಹೊಸ ತಂಡ ಕಟ್ಟಿಕೊಳ್ಳಲು ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್‌ ಎಷ್ಟು ಅವಕಾಶ ನೀಡಲಿದೆ ಎಂದು ನೋಡಬೇಕಿದೆ. ಕಾಂಗ್ರೆಸ್‌ನಲ್ಲಿ ಮೂರು ನಾಲ್ಕು ಕ್ಯಾಂಪ್‌ಗಳು ಇರುತ್ತವೆ. ಹೈಕಮಾಂಡ್‌, ಜಾತಿ ಎಂಬಂತೆ ಕ್ಯಾಂಪ್‌ಗಳಿರುತ್ತವೆ. ಇವೆಲ್ಲ ಸವಾಲುಗಳನ್ನು ಮೀರಿ ಅವರು ಆಡಳಿತ ನಡೆಸಬೇಕಿದೆ ಎಂದು ಸಂಸದ ಡಾ. ಸುಧಾಕರ್‌ ಹೇಳಿದರು.