- ಬೆಳ್ಳೂರಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಬೆಳ್ಳೂರಿನಲ್ಲಿ ಫೆ.21 ಹಾಗೂ 22 ರಂದು ನಡೆಯುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ತಿಳಿಸಿದರು.
ಭಾನುವಾರ ಬೆಳ್ಳೂರಿನ ಪ್ರೌಢ ಶಾಲಾ ಆವರಣದಲ್ಲಿ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಕಸಾಪ ಅಜೀವ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಕಳಿಸಲಾಗುವುದು. ದೇಣಿಗೆ ನೀಡಿ ದವರ ಮನೆಗಳಿಗೆ ಈಗಾಗಲೇ ಪತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಹ್ವಾನ ಪತ್ರಿಕೆ ಹಂಚುವ ಕಾರ್ಯ ನಡೆಸ ಬೇಕಿದೆ. ಕಸಾಪ ಸದಸ್ಯರು, ಸ್ವಾಗತ ಸಮಿತಿ ಹಾಗೂ ಉಪ ಸಮಿತಿ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಬೆಳ್ಳೂರಿನ ಸಾಹಿತ್ಯ ಸಮ್ಮೇಳನ ಹೆಚ್ಚು ಅರ್ಥಗರ್ಭಿತವಾಗಿ ನಡೆಸಲು ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡದ ಹಬ್ಬವಾದ ಸಮ್ಮೇಳನದಲ್ಲಿ 9 ಪುಸ್ತಕ ಬಿಡುಗಡೆ ಯಾಗಲಿದೆ. ಸಮ್ಮೇಳನಾ ಧ್ಯಕ್ಷರ ಮೆರವಣಿಗೆಯಲ್ಲಿ 2 ಎತ್ತಿನಗಾಡಿ, ಬ್ರಹ್ಮಾವರದ ಚಂಡೆ, ಮಂಗಳವಾದ್ಯ, ಭಜನೆ, ಕೋಲಾಟ, ಸ್ತಬ್ಧ ಚಿತ್ರ, ಪುಸ್ತಕ ಮಳಿಗೆ ಇದೆ. ನರಸಿಂಹರಾಜಪುರದ ಜೊತೆಗೆ ಕೊಪ್ಪ ಹಾಗೂ ಶೃಂಗೇರಿ ಕನ್ನಡ ಅಭಿಮಾನಿಗಳು ಕೈ ಜೋಡಿಸಲಿದ್ದಾರೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಸೀತೂರು, ಬೆಳ್ಳೂರು ಭಾಗದಲ್ಲಿ ಜಾನಪದ ಕಲಾವಿ ದರಿದ್ದಾರೆ. ಜಿಲ್ಲಾ ಮಟ್ಟದ ಸಮ್ಮೇಳನದ ರೀತಿಯಲ್ಲಿ ಸಿದ್ಧತೆ ನಡೆದಿದೆ. ಪ್ರಕೃತಿ ಮಡಿಲಲ್ಲಿರುವ ಬೆಳ್ಳೂರಿನ ಹಿರಿಮೆ ಈ ಸಮ್ಮೇಳನದಿಂದ ಇನ್ನಷ್ಟು ಹೆಚ್ಚಲಿದೆ ಎಂದರು.