ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಂಪ್ಲಿಯಲ್ಲಿ ಸಕಲ ಸಿದ್ಧತೆ

KannadaprabhaNewsNetwork | Published : Mar 21, 2025 12:35 AM

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರ ಆರಂಭಗೊಳ್ಳುತ್ತಿದ್ದು, ಈ ಕುರಿತು ಕಂಪ್ಲಿ ತಾಲೂಕಿನಲ್ಲಿ ಅಧಿಕಾರಿಗಳು ಪರೀಕ್ಷಾ ಸಿದ್ಧತೆಯನ್ನು ಗುರುವಾರ ಕೈಗೊಂಡರು. ಒಟ್ಟಾರೆ 2179 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಂಪ್ಲಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಕ್ರವಾರ ಆರಂಭಗೊಳ್ಳುತ್ತಿದ್ದು, ಈ ಕುರಿತು ತಾಲೂಕಿನಲ್ಲಿ ಅಧಿಕಾರಿಗಳು ಪರೀಕ್ಷಾ ಸಿದ್ಧತೆಯನ್ನು ಗುರುವಾರ ಕೈಗೊಂಡರು.

ಪಟ್ಟಣದ ನಾಲ್ಕು ಕೇಂದ್ರ, ತಾಲೂಕಿನ ಎಮ್ಮಿಗನೂರು ಮತ್ತು ಸುಗ್ಗೇನಹಳ್ಳಿಗಳಲ್ಲಿ ತಲಾ ಒಂದೊಂದು ಸೇರಿ ಒಟ್ಟು ಆರು ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಒಟ್ಟಾರೆ 2179 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪಟ್ಟಣದ ಷಾ. ಮಿಯಾಚಂದ್ ಸರ್ಕಾರಿ ಸಂಯುಕ್ತ ಪಿಯು ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 300 ವಿದ್ಯಾರ್ಥಿ ಪರೀಕ್ಷಾರ್ಥಿಗಳಿದ್ದು, ಮುಖ್ಯ ಅಧೀಕ್ಷಕರಾಗಿ ಸುಜಾತಾ, ಕಸ್ಟೋಡಿಯನ್ ಮುದುಕಪ್ಪ ಮೊಬೈಲ್ ಅಧಿಕಾರಿ ಸಿಆರ್‌ಪಿ ರೇಣುಕಾರಾಧ್ಯ ಕಾರ್ಯನಿರ್ವಹಿಸಲಿದ್ದಾರೆ. ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 289 ಪರೀಕ್ಷಾರ್ಥಿಗಳಿದ್ದು, ಮುಖ್ಯ ಅಧೀಕ್ಷಕರಾಗಿ ಬಸವರಾಜ ಪಾಟೀಲ್, ಕಸ್ಟೋಡಿಯನ್ ಕೆ. ಬಸವರಾಜ, ಮೊಬೈಲ್ ಅಧಿಕಾರಿಯಾಗಿ ಸಿಆರ್‌ಪಿ ದೊಡ್ಡಬಸಪ್ಪ, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 450 ಪರೀಕ್ಷಾರ್ಥಿಗಳಿದ್ದು, ಮುಖ್ಯ ಅಧೀಕ್ಷಕಿಯಾಗಿ ಗಾಯತ್ರಿದೇವಿ, ಕಸ್ಟೋಡಿಯನ್ ಆಗಿ ಲಕ್ಕಣ್ಣ, ಮೊಬೈಲ್ ಅಧಿಕಾರಿಯಾಗಿ ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ, ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 380 ಪರೀಕ್ಷಾರ್ಥಿಗಳಿದ್ದು, ಮುಖ್ಯ ಅಧೀಕ್ಷಕಿಯಾಗಿ ಎಚ್. ಶಕುಂತಲಾ, ಕಸ್ಟೋಡಿಯನ್ ರಾಮಚಂದ್ರರಾವ್ ಮೊಬೈಲ್ ಅಧಿಕಾರಿಯಾಗಿ ಸಿಆರ್‌ಪಿ ವೀರೇಶಪ್ಪ, ತಾಲೂಕಿನ ಸುಗ್ಗೇನಹಳ್ಳಿಯ ವಿದ್ಯಾಭಾರತಿ ಶಾಲೆ ಪರೀಕ್ಷಾ ಕೇಂದ್ರದಲ್ಲಿ 410 ಪರೀಕ್ಷಾರ್ಥಿಗಳಿದ್ದು, ಮುಖ್ಯ ಅಧೀಕ್ಷಕರಾಗಿ ಹುಲುಗಪ್ಪ, ಕಸ್ಟೋಡಿಯನ್ ಶ್ರೀಕಾಂತ, ಮೊಬೈಲ್ ಅಧಿಕಾರಿಯಾಗಿ ಸಿಆರ್‌ಪಿ ಭೂಮೇಶ್ವರ, ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ 350 ಪರೀಕ್ಷಾರ್ಥಿಗಳಿದ್ದು, ಪರೀಕ್ಷಾ ಅಧೀಕ್ಷಕರಾಗಿ ನಂದಕಿಶೋರ್, ಕಸ್ಟೋಡಿಯನ್ ಡಾ. ಸುನೀಲ್, ಮೊಬೈಲ್ ಅಧಿಕಾರಿಯಾಗಿ ರಮೇಶ ಪೂಜಾರಿ ಕಾರ್ಯನಿರ್ವಹಿಸಲಿದ್ದಾರೆ.

Share this article