ತರೀಕೆರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

KannadaprabhaNewsNetwork | Published : Mar 21, 2025 12:35 AM

ಸಾರಾಂಶ

ತರೀಕೆರೆ: ಏನಾದರೂ ಸಮಸ್ಯೆಯಿದ್ದರೆ ಶಾಖಾಧಿಕಾರಿಗಳ ಬಳಿಗೆ ಬಂದು ಅಂಗಲಾಚಿ ಲೈನ್‌ಮೆನ್‌ಗಳನ್ನು ಕರೆದುಕೊಂಡು ಹೋಗಬೇಕಾದ ದುಸ್ಥಿತಿಯಿದೆ. ಆಯಾ ಶಾಖಾಧಿಕಾರಿಗಳು ಸಾರ್ವಜನಿಕರು, ರೈತರನ್ನೊಳಗೊಂಡು ಲೈನ್‌ಮೆನ್‌ಗಳ ಸಭೆ ನಡೆಸಬೇಕು. ಲೈನ್‌ಮೆನ್‌ಗಳು ಕೆಲಸ ಮಾಡುತ್ತಿಲ್ಲ ಎನ್ನುವ ದೂರಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ತಿಳಿಸಿದರು.

ತರೀಕೆರೆ: ಏನಾದರೂ ಸಮಸ್ಯೆಯಿದ್ದರೆ ಶಾಖಾಧಿಕಾರಿಗಳ ಬಳಿಗೆ ಬಂದು ಅಂಗಲಾಚಿ ಲೈನ್‌ಮೆನ್‌ಗಳನ್ನು ಕರೆದುಕೊಂಡು ಹೋಗಬೇಕಾದ ದುಸ್ಥಿತಿಯಿದೆ. ಆಯಾ ಶಾಖಾಧಿಕಾರಿಗಳು ಸಾರ್ವಜನಿಕರು, ರೈತರನ್ನೊಳಗೊಂಡು ಲೈನ್‌ಮೆನ್‌ಗಳ ಸಭೆ ನಡೆಸಬೇಕು. ಲೈನ್‌ಮೆನ್‌ಗಳು ಕೆಲಸ ಮಾಡುತ್ತಿಲ್ಲ ಎನ್ನುವ ದೂರಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ತಿಳಿಸಿದರು.ಗುರುವಾರ ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಟಿಸಿಗಳು ಸುಟ್ಟು ಹೋದ ಸಂದರ್ಭದಲ್ಲಿ ಲೈನ್‌ಮೆನ್‌ಗಳಿಗೆ ತಿಳಿಸಿದರೆ ಗಮನಹರಿಸುವುದಿಲ್ಲ. ನಮಗೆ ಸಮಯವಿಲ್ಲ ಎಂದು ಉತ್ತರ ನೀಡುತ್ತಾರೆ ಎಂದು ದೂರಿದರು.

ಗುಳ್ಳದಮನೆ ಗ್ರಾಮದ ಸಿದ್ದಯ್ಯ ಮಾತನಾಡಿ, ರಾತ್ರಿ ಸಮಯದಲ್ಲಿ ವಿದ್ಯುತ್ ನಿಲುಗಡೆ ಯಿಂದ ಕತ್ತಲೆಯಲ್ಲಿ ಕಾಡಾನೆಗಳು ದಾಂಧಲೆ ನಡೆಸಲಿವೆ. ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಬಾರದು. ಬೆಳಕಿದ್ದರೆ ಕಾಡಾನೆಗಳು ಬರುವುದು ಕಡಿಮೆ ಎಂದು ತಿಳಿಸಿದರು.ದಿನಕ್ಕೆ ಹಲವು ಬಾರಿ ಕರೆಂಟ್ ತೆಗೆಯಲಾಗುತ್ತದೆ. ಯರದಂಕಲು ಗ್ರಾಮದಲ್ಲಿ 60 ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್ ವೈರ್‌ಗಳು ಈಗಲೂ ಇದ್ದು, ಸಮಸ್ಯೆಯಾಗುವ ಮೊದಲು ಬದಲಾಯಿಸಬೇಕು. ದೋರನಾಳು ಗ್ರಾಮದಿಂದ ನಂದಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿರುವ ಟಿಸಿಗಳಿಗೆ ಅಳವಡಿಸಿರುವ ವೈರ್‌ಗಳು ಆಗಾಗ ತುಂಡಾಗಿ ಬೀಳುತ್ತಿವೆ. ಹೊಸ ವೈರ್ ಅಳವಡಿಸಬೇಕೆಂದು ರೈತ ರುದ್ರಯ್ಯ ಮತ್ತು ಧನಂಜಯ ತಿಳಿಸಿದರು.ಮೆಸ್ಕಾಂ ಇಇ ಲಿಂಗರಾಜು ಮಾತನಾಡಿ, ರೈತರ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಂಪ್‌ಸೆಟ್‌ಗಳಿಗೆ ಆಟೋ ಸ್ಟಾಟರ್ ಅಳವಡಿಕೆಯಿಂದ ಟಿಸಿಗಳು ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.ಸಭೆಯಲ್ಲಿ ಮೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್, ಎಇಇ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್ ಇತರರು ಭಾಗವಹಿಸಿದ್ದರು.20ಕೆಟಿಆರ್.ಕೆ.15ಃ

ತರೀಕೆರೆಯಲ್ಲಿ ಏರ್ಪಾಡಾಗಿದ್ದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್, ಎಇಇ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್ ಭಾಗವಹಿಸಿದ್ದರು.

Share this article