ಕನ್ನಡಪ್ರಭ ವಾರ್ತೆ ಬೀದರ್
ಭಾಲ್ಕಿ ತಾಲೂಕಿನ ಬಸವನಗರದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ 6 ರಿಂದ 14 ವರ್ಷದ ಮಕ್ಕಳಿಗಾಗಿ ಆಯೋಜಿಸಿರುವ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳು ರಜೆಯ ದಿನಗಳನ್ನು ಸ್ನೇಹಿತರೊಂದಿಗೆ ಕಳೆಯದೆ ಮೊಬೈಲ್‌ನಲ್ಲಿ ಆಟವಾಡುವುದರ ಮೂಲಕ ಕಾಲ ಕಳೆಯುತ್ತಿದ್ದು, ಇದರಿಂದ ಮಕ್ಕಳಿಗೆ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬೇಸಿಗೆ ಶಿಬಿರದಿಂದ ಮಕ್ಕಳು ವಿವಿಧ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸೂರ್ಯ ಫೌಂಡೇಶನ್ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.ಸೂರ್ಯ ಫೌಂಡೇಶನ್ ಸಂಯೋಜಕರಾದ ಗುರುನಾಥ ರಾಜಗೀರಾ ಮಾತನಾಡಿ, ಫೌಂಡೇಶನ್ ಸಂಸ್ಥಾಪಕ ಜಯಪ್ರಕಾಶ ಅಗ್ರವಾಲ್ ಮಾರ್ಗದರ್ಶನದಲ್ಲಿ ಮತ್ತು ಬೀದರ್ ಜಿಲ್ಲೆಯವರೆ ಆದ ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ನೇತೃತ್ವದಲ್ಲಿ ನಿರಂತರವಾಗಿ ಜಿಲ್ಲೆಯಲ್ಲಿ ಅನೇಕ ತರಹದ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಬರಲಾಗುತ್ತಿದೆ. ಅದರಲ್ಲಿ ಈ ಬೇಸಿಗೆ ಶಿಬಿರವು ಪ್ರಮುಖವಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ, ರಮೇಶ ಅರಾಳೆ, ಸಂಗಮೇಶ ದಾನಿ ಸೇರಿದಂತೆ ಇತರರಿದ್ದರು.