ಎಲ್ಲಾ ಶ್ರದ್ಧಾ ಕೇಂದ್ರಗಳೂ ಸ್ವಚ್ಛವಾಗಿರಬೇಕು: ಸುಧೀರ್‌ ಕುಮಾರ್‌

KannadaprabhaNewsNetwork |  
Published : Aug 13, 2024, 12:48 AM IST
ನರಸಿಂಹರಾಜಪುರ ತಾಲೂಕಿನ ಕಮಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆಯನ್ನು ಧ.ಗ್ರಾ.ಯೋಜನೆಯ ಕುದುರೆಗುಂಡಿ ವಲಯದ ನಾಗರಮಕ್ಕಿ ಒಕ್ಕೂಟದ ಸದಸ್ಯರು ಶ್ರದ್ದಾ  ಕೇಂದ್ರದ ಸ್ವಚ್ಛತಾ ಅಭಿಯಾನದಡಿ ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಕುದುರೆಗುಂಡಿ ವಲಯದ ಮೇಲ್ವೀಚಾರಕ ಸುದೀರ್ ಕುಮಾರ್ ಮಾತನಾಡಿದರು | Kannada Prabha

ಸಾರಾಂಶ

ಧರ್ಮಸ್ಥಳದಂತೆ ರಾಜ್ಯದ ಎಲ್ಲಾ ಶ್ರದ್ಧಾ ಕೇಂದ್ರಗಳೂ ಸ್ವಚ್ಛವಾಗಿಡಬೇಕು ಎಂಬುದು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಕನಸಾಗಿದೆ ಎಂದು ಧ.ಗ್ರಾ.ಯೋಜನೆ ಕುದುರೆಗುಂಡಿ ವಲಯದ ಮೇಲ್ವಿಚಾರಕ ಸುಧೀರ್‌ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಧರ್ಮಸ್ಥಳದಂತೆ ರಾಜ್ಯದ ಎಲ್ಲಾ ಶ್ರದ್ಧಾ ಕೇಂದ್ರಗಳೂ ಸ್ವಚ್ಛವಾಗಿಡಬೇಕು ಎಂಬುದು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಕನಸಾಗಿದೆ ಎಂದು ಧ.ಗ್ರಾ.ಯೋಜನೆ ಕುದುರೆಗುಂಡಿ ವಲಯದ ಮೇಲ್ವಿಚಾರಕ ಸುಧೀರ್‌ ಕುಮಾರ್ ತಿಳಿಸಿದರು.

ಭಾನುವಾರ ಕಮಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಧ.ಗ್ರಾ.ಯೋಜನೆ ಕುದುರೆಗುಂಡಿ ವಲಯದ ನಾಗರ ಮಕ್ಕಿ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಸ್ವಚ್ಛತೆಗೆ ಧರ್ಮಸ್ಥಳಕ್ಕೆ ಪ್ರಶಸ್ತಿ ನೀಡಿತ್ತು. ಇದರಿಂದ ಸ್ಫೂರ್ತಿ ಪಡೆದ ಡಾ.ವೀರೇಂದ್ರ ಹೆಗಡೆ ರಾಜ್ಯದ ಎಲ್ಲಾ ಶಾಲೆ, ದೇವಸ್ಥಾನ, ಬಸ್‌ ನಿಲ್ದಾಣ ಸೇರಿದಂತೆ ಶ್ರದ್ಧಾ ಕೇಂದ್ರವನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ.

ಆ. 8 ರಿಂದ 14 ರ ವರೆಗೆ ಧ.ಗ್ರಾ.ಯೋಜನೆ ಸ್ವಸಹಾಯ ಸಂಘದ ಸದಸ್ಯರು, ಶೌರ್ಯ ವಿಪತ್ತು ತಂಡದವರು, ಒಕ್ಕೂಟದ ಪದಾಧಿಕಾ ರಿಗಳು, ದೇವಸ್ಥಾನದ ಸಮಿತಿ ಸೇರಿ ಸ್ವಚ್ಛಗೊಳಿಸುತ್ತಿದ್ದಾರೆ. ಜನವರಿಯಲ್ಲಿ ಬರುವ ಮಕರ ಸಂಕ್ರಾಂತಿ ಸಂದರ್ಭ ದಲ್ಲೂ ಶ್ರದ್ಧಾ ಕೇಂದ್ರದ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುತ್ತದೆ. ವರ್ಷಕ್ಕೆ 2 ಬಾರಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳ ಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಾಗರಕ್ಕಿ ಒಕ್ಕೂಟದ ಅಧ್ಯಕ್ಷ ಮನೋಹರ್‌, ಉಪಾಧ್ಯಕ್ಷ ಈಶ್ವರ್‌, ಕೋಶಾಧಿಕಾರಿ ವಿಜೇಂದ್ರ, ಗ್ರಾಪಂ ಸದಸ್ಯೆ ಸುಜಾತಾ, ಆಶಾ ಕಾರ್ಯಕರ್ತೆ ಮಾಲಿನಿ, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಅಶ್ವಿನಿ, ಸೇವಾ ಪ್ರತಿನಿಧಿ ಪ್ರಕಾಶ, ಶೌರ್ಯ ವಿಪತ್ತು ತಂಡದ ಪ್ರತಿನಿಧಿ ರಾಘವೇಂದ್ರ, ಶಾಲೆ ಎಸ್‌ ಡಿಎಂಸಿ ಅಧ್ಯಕ್ಷ ರವಿ ಮತ್ತಿತರರು ಇದ್ದರು. ನಂತರ ಕಮಲಾಪುರ ಗಣಪತಿ ದೇವಸ್ಥಾನ ಸ್ವಚ್ಛಗೊಳಿಸಲಾಯಿತು. ನಂತರ ಧ.ಗ್ರಾ.ಯೋಜನೆಯಿಂದ ದೇವಸ್ಥಾನಕ್ಕೆ ಸ್ವಚ್ಛತಾ ಪರಿಕರವಿತರಿಸಲಾಯಿತು.

ಭಾನುವಾರ ಕುದುರೆಗುಂಡಿ ವಲಯ ವ್ಯಾಪ್ತಿಯವ ಕುದುರೆಗುಂಡಿ ಅಶ್ವಗಂಡೇಶ್ವರ ದೇವಸ್ಥಾನ, ಬನವಾಡಿ ಜಟಿಕೇಶ್ವರ ದೇವಸ್ಥಾನ, ಹಾತೂರು ಸಿದ್ದೇಶ್ವರ ದೇವಸ್ಥಾನ, ಮಲ್ಲಂದೂರು ಹೊನ್ನಮೇಶ್ವರಿ ದೇವಸ್ಥಾನದಲ್ಲೂ ಧ.ಗ್ರಾ.ಯೋಜನೆ ಸದಸ್ಯರು ಸ್ವಚ್ಛಗೊಳಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು