ಉಚಿತ ಸಾಮೂಹಿಕ ವಿವಾಹಕ್ಕೆ ಚಂದಾವಸೂಲಿ ಆರೊಪ

KannadaprabhaNewsNetwork | Published : Oct 16, 2023 1:45 AM

ಸಾರಾಂಶ

ಚಿತ್ತಾಪುರ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ವೀರಶೈವ ಸಮಾಜದವರು ಬಸವ ಉತ್ಸವ ಸಮಿತಿ ಮಾಡಿಕೊಂಡು ಕಡು ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಸಾಮೂಹಿಕ ವಿವಾಹವನ್ನು ಮಾಡಿಕೊಂಡು ಬರುತ್ತಿದ್ದು ಇದರ ಎಲ್ಲಾ ಖರ್ಚು ವೆಚ್ಚವನ್ನು ಬಸವ ಉತ್ಸವ ಸಮಿತಿ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಯಾವುದೇ ರೀತಿಯ ದೇಣಿಗೆಯನ್ನು ಪಡೆಯುವುದಿಲ್ಲಾ. ಆದರೆ ಮಣಿಕಂಠ ರಾಠೋಡ ಅವರು ಸುಳ್ಳು ಮಾಹಿತಿ ಪಡೆದು ದೇಣಿಗೆ ಪಡೆದು ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ ಎಂದು ಸುಳ್ಳು ಆರೊಪ ಮಾಡಿದ್ದಾರೆ ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಬಂಕಲಗಾ ಹೇಳಿದರು.
ಮಣಿಕಂಠ ರಾಠೋಡ ತಮ್ಮ ಹೇಳಿಕೆ ವಾಪಸ್ಸು ಪಡೆದು ಬಹಿರಂಗ ಕ್ಷಮೆಗೆ ಒತ್ತಾಯ ಕನ್ನಡಪ್ರಭ ವಾರ್ತೆ ಚಿತ್ತಾಪುರ ಚಿತ್ತಾಪುರ ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ವೀರಶೈವ ಸಮಾಜದವರು ಬಸವ ಉತ್ಸವ ಸಮಿತಿ ಮಾಡಿಕೊಂಡು ಕಡು ಬಡವರಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತ ಸಾಮೂಹಿಕ ವಿವಾಹವನ್ನು ಮಾಡಿಕೊಂಡು ಬರುತ್ತಿದ್ದು ಇದರ ಎಲ್ಲಾ ಖರ್ಚು ವೆಚ್ಚವನ್ನು ಬಸವ ಉತ್ಸವ ಸಮಿತಿ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಯಾವುದೇ ರೀತಿಯ ದೇಣಿಗೆಯನ್ನು ಪಡೆಯುವುದಿಲ್ಲಾ. ಆದರೆ ಮಣಿಕಂಠ ರಾಠೋಡ ಅವರು ಸುಳ್ಳು ಮಾಹಿತಿ ಪಡೆದು ದೇಣಿಗೆ ಪಡೆದು ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ ಎಂದು ಸುಳ್ಳು ಆರೊಪ ಮಾಡಿದ್ದಾರೆ ಎಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಬಂಕಲಗಾ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಉತ್ಸವ ಸಮಿತಿಯವರು ಸಾಮೂಹಿಕ ವಿವಾಹದ ವೇಳೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಿದಲ್ಲಿ ಮಾತ್ರ ಸ್ವೀಕರಿಸುತ್ತೇವೆ. ಆದರೆ ಎಂದು ಯಾರಲ್ಲಿಯೂ ಮನೆ ಮನೆಗೆ ತೆರಳಿ ದೇಣಿಗೆ ಪಡೆದಿರುವದಿಲ್ಲಾ. ಮಣಿಕಂಠ ರಾಠೋಡ ರವರು ಬಿಜೆಪಿ ಪಕ್ಷದ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿ ಬಸವ ಜಯಂತಿಯಂದು ನಡೆಯುವ ಸಾಮೂಹಿಕ ವಿವಾಹಕ್ಕೆ ಚಂದಾ ಪಟ್ಟಿಯನ್ನು ಮನೆ ಮನೆಗೆ ತೆರಳಿ ವಸೂಲಿ ಮಾಡುತ್ತಾರೆ ಅಲ್ಲದೇ ಕಳೆದ ವರ್ಷ ಸಾಮೂಹಿಕ ವಿವಾಹ ಏಕೆ ಮಾಡಲಿಲ್ಲಾ ಎಂದು ಪ್ರಶ್ನಿಸಿದ್ದರು. ಕಳೆದ ವರ್ಷ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿ ಮಾಡುವ ಮೊದಲು ವಿವಾಹ ನೊಂದಣೆ ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಿ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಒಂದು ತಿಂಗಳ ಕಾಲ ಯಾವದೇ ಜೊಡಿಯು ವಿವಾಹ ನೊಂದಣೆ ಮಾಡಿಕೊಳ್ಳದ ಕಾರಣ ಕಳೆದ ವರ್ಷ ಸಾಮೂಹಿಕ ವಿವಾಹ ಮಾಡಿರಲಿಲ್ಲಾ ಈ ವರ್ಷ ಮತ್ತೆ ಸಾಮೂಹಿಕ ವಿವಾಹ ನಡೆಸುತ್ತೇವೆ ಯಾವುದೊ ಸುಳ್ಳು ಮಾಹಿತಿ ಪಡೆದು ಇಂತಹ ಆರೊಪ ಮಾಡುವ ಮೊದಲು ಸತ್ಯಾ ಸತ್ಯತೆ ತಿಳಿದು ಮಾತನಾಡಬೇಕು ಹಾಗೂ ಬಸವ ಉತ್ಸವ ಸಮಿತಿಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ವಿನೋದ ಗುತ್ತೆದಾರ, ಅಶೋಕ ನಿಪ್ಪಾಣಿ, ಚಂದ್ರಶೇಖರ ಸಾತನೂರ, ಪ್ರಭು ಬೊಮ್ಮನಳ್ಳಿ, ಬಸವರಾಜ ಚಿಣಮಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

Share this article