ಜೂಜಾಡುತ್ತಿದ್ದ ೧೨ ಜನ ಪೊಲೀಸ್‌ ವಶ

KannadaprabhaNewsNetwork | Published : Oct 16, 2023 1:45 AM

ಸಾರಾಂಶ

ತಾಲೂಕಿನ ನಗರಂಗೆರೆ ಗ್ರಾಮದ ಕೆರೆದಡದಲ್ಲಿ ಜೂಜಾಟವಾಡುತ್ತಿದ್ದ ಸುಮಾರು ೧೨ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಅವರಿಂದ ಜೂಜಾಟದ ಗಣ ೧೧೧೫೦ರು.ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಳ್ಳಕೆರೆ: ತಾಲೂಕಿನ ನಗರಂಗೆರೆ ಗ್ರಾಮದ ಕೆರೆದಡದಲ್ಲಿ ಜೂಜಾಟವಾಡುತ್ತಿದ್ದ ಸುಮಾರು ೧೨ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಅವರಿಂದ ಜೂಜಾಟದ ಗಣ ೧೧೧೫೦ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಇನ್ಸ್ ಪೆಕ್ಟರ್‌ ಆರ್.ಎಫ್.ದೇಸಾಯಿ, ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿ ಪ್ರವೀಣ್ ಮತ್ತು ವಿಶಾಲ್ ತಂಡ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೂಜಾಟವಾಡುತ್ತಿದ್ದ ಗಾನಪ್ಪನಹಟ್ಟಿ ಸಿರಿಯಣ್ಣ, ಜಯಣ್ಣ, ರಾಜು, ನಗರಂಗೆರೆಯ ನೂರುವುಲ್ಲಾ, ಬಬೀವುಲ್ಲಾ, ನಾಸೀರ್ ಸೇರಿದಂತೆ ಒಟ್ಟು ೧೨ ಜನರನ್ನು ಜೂಜಾಟ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Share this article