ಸರ್ಕಾರಿ ಶಾಲೆ/ ಕಚೇರಿ ಸಿಬ್ಬಂದಿಗೆ ಕಿರುಕುಳ ಆರೋಪ

KannadaprabhaNewsNetwork |  
Published : Aug 02, 2026, 02:45 AM IST
 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಚಡಚಣ ನಿವಾಸಿ ಅಣ್ಣಪ್ಪ ಪೂಜಾರಿ ಪತ್ರಕರ್ತ ಹಾಗೂ ಕೆ.ಆರ್.ಎಸ್ ಪಕ್ಷದವನೆಂದು ಹೇಳಿಕೊಂಡು ಸರ್ಕಾರಿ ಶಾಲೆ/ ಕಚೇರಿಗಳಿಗೆ ಹೋಗಿ ನೌಕರರಿಗೆ ಕಿರುಕುಳ ನೀಡುತ್ತಿದ್ದು, ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಚಡಚಣ ನಿವಾಸಿ ಅಣ್ಣಪ್ಪ ಪೂಜಾರಿ ಪತ್ರಕರ್ತ ಹಾಗೂ ಕೆ.ಆರ್.ಎಸ್ ಪಕ್ಷದವನೆಂದು ಹೇಳಿಕೊಂಡು ಸರ್ಕಾರಿ ಶಾಲೆ/ ಕಚೇರಿಗಳಿಗೆ ಹೋಗಿ ನೌಕರರಿಗೆ ಕಿರುಕುಳ ನೀಡುತ್ತಿದ್ದು, ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ, ಎಸ್.ಎಸ್.ಪಾಟೀಲ ಸರ್ಕಾರಿ ಶಾಲೆ ಹಾಗೂ ಕಚೇರಿಗಳಿಗೆ ತಾನು ಪತ್ರಕರ್ತ ಹಾಗೂ ಕೆ.ಆರ್.ಎಸ್ ಪಕ್ಷದವನೆಂದು ಹೇಳಿಕೊಂಡು ನೌಕರರು ಕರ್ತವ್ಯದಲ್ಲಿದ್ದಾಗ ಆಗಮಿಸಿ ಹೆದರಿಸಿ ಶಾಲೆ, ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಾನೆ. ನೌಕರರಿಗೆ ಏಕವಚನದಲ್ಲಿ ಸಂಭೋದಿಸುತ್ತ, ಅವಾಚ್ಯ ಶಬ್ಧ ಬಳಸುತ್ತ ನೌಕರರ, ಮಹಿಳಾ ನೌಕರರ ಮಾನಹಾನಿಯಾಗುವ ರೀತಿ ವರ್ತಿಸುತ್ತಿದ್ದಾನೆ. ಶಾಲೆಯಲ್ಲಿನ ತರಗತಿ ಕೋಣೆಗಳ ವಿಡಿಯೋ ಚಿತ್ರೀಕರಣ ಮಾಡುವುದರ ಜೊತೆಗೆ ಶಾಲೆಯಲ್ಲಿನ ಹೆಣ್ಣುಮಕ್ಕಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾನೆ. ಈತನ ಎಲ್ಲ ವಿಡಿಯೋ ಪರಿಶೀಲಿಸಿ ಪ್ರಕರಣ ದಾಖಲಿಸಿ ನೌಕರರ ಸಮುದಾಯಕ್ಕೆ ನ್ಯಾಯ ಒದಗಿಸುವುದರ ಮೂಲಕ ಶಿಕ್ಷಕರ ಹಾಗೂ ನೌಕರರ ಗೌರವ ಕಾಪಾಡಬೇಕು. ಜಿಲ್ಲೆಯಾದ್ಯಂತ ನಕಲಿ ಪತ್ರಕರ್ತರು ಶಾಲಾ ಆವರಣದಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಶಿಕ್ಷಕರಿಗೆ ಹಾಗೂ ಬಿಸಿ ಊಟ ಹಾಗೂ ಅಡುಗೆ ಸಿಬ್ಬಂದಿಗೆ ಅನವಶ್ಯಕ ಕಿರುಕುಳ ನೀಡುವುದನ್ನು ತಡೆಗಟ್ಟಿ ನ್ಯಾಯ ಒದಗಿಸಬೇಕೆಂಕೆಂದರು.

ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನೌಕರರು ಭಯಪಡಬಾರದು, ಶಾಲೆಗಳಲ್ಲಿ ಅನಧಿಕೃತವಾಗಿ ಪ್ರವೇಶಿಸಿ ವಿಡಿಯೋ ಮಾಡುವುದು ಅಪರಾಧ. ನೌಕರರು ಧೈರ್ಯದಿಂದ ಮುಂದೆ ಬಂದು ಪ್ರಕರಣ ದಾಖಲಿಸಬೇಕು ಎಂದರು.

ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಣಮಂತ ಕೊಣದಿ, ನಗರ ಘಟಕ ಅಧ್ಯಕ್ಷ ಸೈಯ್ಯದ್‌ ಜುಬೇರ್‌ ಕೆರೂರ, ಸುನೀಲ ಯಳಮೇಲಿ, ಎಸ್.ಬಿ. ಪಾಟೀಲ, ಬಿ.ಎಸ್. ಮಜ್ಜಗಿ, ಗುರು ಜೇವೂರ, ಎ.ಎಸ್. ಸೊನ್ನಗಿ, ಕಬೂಲ್ ಕೊಕಟನೂರ, ಅಶೋಕ ಚನಬಸಗೋಳ, ಮಲ್ಲಿಕಾರ್ಜುನ ಟಕ್ಕಳಕಿ, ಅಶೋಕ ಬೂದಿಹಾಳ, ಬಿ.ಎಸ್. ಬಗಲಿ, ಇರ್ಫಾನ ಮಕಾನದಾರ, ಬಸವಂತ ಉಮರಾಣಿ, ವಿಠ್ಠಲ ಕಾಂಬಳೆ, ಮಂಜುನಾಥ ಆರೆಶಂಕರ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು, 500ಕ್ಕೂ ಅಧಿಕ ಶಿಕ್ಷಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯನ ಅಸ್ತಿತ್ವವೇ ಪ್ರಕೃತಿ ಮೇಲಿದೆ
ಡಾ.ಮಹಾಂತ ಶ್ರೀಗಳಿಂದ ಸಮಾಜದಲ್ಲಿ ದೊಡ್ಡ ಪರಿವರ್ತನೆ