ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸ್ವರ್ಣಸಂದ್ರ ಕಾಲೋನಿಯಲ್ಲಿರುವ ಕರ್ನಾಟಕ ಹೌಸಿಂಗ್ ಬೋರ್ಡ್ ವಸತಿಯಲ್ಲಿರುವ ೫೫ ಸ್ವತ್ತುಗಳ ಅಂಚು ಜಾಗಗಳನ್ನು ಗೃಹಮಂಡಳಿ ನಿಗದಿ ಪಡಿಸುವ ದರಕ್ಕೆ ಸ್ವತ್ತುಗಳ ಮಾಲೀಕರು ಒಪ್ಪಿದರೆ ಅವರಿಗೆ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.ಬೆಳಗಾವಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಶಾಸಕ ಪಿ.ರವಿಕುಮಾರ್ ಅವರು ಅಂಚಿನ ಜಾಗವನ್ನು ಆಯಾ ನಿವೇಶನದಾರರಿಗೆ ಮಂಜೂರು ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಸ್ವರ್ಣಸಂದ್ರದಲ್ಲಿ ಮೈಷುಗರ್ ಕಂಪನಿಯಿಂದ ಹಾಗೂ ಇತರೆ ಭೂ ಮಾಲೀಕರಿಂದ ೫೭.೩೩ ಎಕರೆ ಜಮೀನನ್ನು ಖರೀದಿಸಿ ೧೯೫೨-೫೩ನೇ ಸಾಲಿನಿಂದ ಮೂರು ಹಂತಗಳಲಿ ೭೯೯೬ ಎಸ್‌ಐಎಚ್‌ಎಸ್ ಮನೆಗಳನ್ನು ಹಾಗೂ ೬೮ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಪ್ರಸ್ತುತ ಯಾವುದೇ ಸ್ವತ್ತುಗಳು ಖಾಲಿ ಇರುವುದಿಲ್ಲ. ಆದರೆ, ಈ ೫೫ ಸ್ವತ್ತುಗಳಿಗೆ ಹೊಂದಿಕೊಂಡಂತೆ ಅಂಚು ಜಾಗಳು ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.
ಬಡಾವಣೆಯ ನಿವೇಶನಗಳನ್ನು ಈ ಹಿಂದೆ ಚದರ ಮೀ.೭೫೦ ರು.ನಂತೆ ಹಾಗೂ ೭.೪೦*೧೩.೮೦ ಮೀ. ಅಳತೆಯ ಪ್ರತಿ ಮನೆಗೆ ೬೮೫೪ ರು. ದರಕ್ಕೆ ಹಹಂಚಿಕೆ ಮಾಡಲಾಗಿದೆ. ಬಡಾವಣೆಯಲ್ಲಿ ಪ್ರಸ್ತುತ ಉಪ ನೋಂದಣಾಧಿಕಾರಿಗಳ ಬೆಲೆ ಪ್ರತಿ ಚದರ ಮೀ.ಗೆ ೧೭ ಸಾವಿರ ರು. (ಪ್ರತಿ ಚದರಡಿಗೆ ೧೫೭೯.೩೩ ರು.) ಹಾಗೂ ಮಾರುಕಟ್ಟೆ ಬೆಲೆ ಪ್ರತಿ ಚ.ಮೀ. ೩೦ ಸಾವಿರ ರು. (ಪ್ರತಿ ಚದರಡಿಗೆ ೨೭೮೭ ರು.ನಂತೆ ಇರುತ್ತದೆ ಎಂದು ತಿಳಿಸಿದ್ದಾರೆ.ಲಭ್ಯವಿರುವ ೫೫ ಸ್ವತ್ತುಗಳ ಅಂಚುಗಳ ಜಾಗಗಳನ್ನು ಸ್ವತ್ತುಗಳ ಮಾಲೀಕರು ಗೃಹಮಂಡಳಿ ನಿಗದಿಪಡಿಸಬಹುದಾದ ದರಕ್ಕೆ ಒಪ್ಪಿದರೆ ಹಂಚಿಕೆ ಮಾಡಲು ಕ್ರಮ ವಹಿಸುವುದಾಗಿ ಎಂದಿದ್ದಾರೆ.
ಕರ್ತವ್ಯ ಲೋಪ: ಗ್ರಾಪಂ ಪಿಡಿಒ ಅಮಾನತುಕೆ.ಆರ್.ಪೇಟೆ:
ಮನೆ ಖಾತೆ ಬದಲಾವಣೆ ಮಾಡುವ ವಿಚಾರದಲ್ಲಿ ಕರ್ತವ್ಯ ಲೋಪ ಆರೋಪದಡಿ ತಾಲೂಕಿನ ತೆಂಡೇಕೆರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಅವರನ್ನು ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಶೇಖ್ ತನ್ವೀರ್ ಆಸಿಫ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಹಾಗೂ ಪರಿಗಣಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ, ಜಿಲ್ಲಾ ಪಂಚಾಯತ್, ಮಂಡ್ಯ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1975 ರ ನಿಯಮ 10(1) ರಡಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸತೀಶ್‌ಕುಮಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಂಡೇಕೆರೆ ಗ್ರಾಪಂ ಇವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಸದರಿ ಪಿಡಿಒ ಸತೀಶ್ ಕುಮಾರ್ ಸಕ್ಷಮ ಪ್ರಾಧಿಕಾರಿಯಿಂದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡದಂತೆ ಕೂಡ ಆದೇಶಿಸಿದ್ದಾರೆ.