ಟೈರ್‌ಗೆ ಬೆಂಕಿ ಹಚ್ಚಲು ಅವಕಾಶಕೊಡಿ, ಇಲ್ಲವೇ ನನಗೇ ಬೆಂಕಿ ಹಚ್ಚಿ

KannadaprabhaNewsNetwork |  
Published : Jul 31, 2026, 01:30 AM IST
30ಕೆಎಂಎನ್‌ಡಿ-10ಟೈರ್‌ ಹಿಡಿದುಕೊಂಡು ಬೆಂಕಿ ಹಚ್ಚಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಹಿಡಿದುಕೊಂಡಿರುವುದು. | Kannada Prabha

ಸಾರಾಂಶ

ತಮಿಳುನಾಡಿಗೆ ನೀರು ಹರಿಸುವ ನೀರು ನಿರ್ವಹಣಾ ಮಂಡಳಿಯ ಶಿಫಾರಸನ್ನು ವಿರೋಧಿಸಿ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಮಂಡಳಿ ನಡೆಸಿ ಯಾವ ಆದೇಶ ನೀಡುತ್ತದೋ ಎಂದು ರೈತ ಹಿತರಕ್ಷಣಾ ಸಮಿತಿ ಗಮನ ಹರಿಸಿದ್ದು, ಆದೇಶದ ನಂತರ ಹೋರಾಟದ ಸ್ವರೂಪವನ್ನು ಬದಲಿಸಲು ಚಿಂತನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಟೈರ್‌ಗೆ ಬೆಂಕಿ ಹಚ್ಚಲು ಅವಕಾಶ ಕೊಡಿ, ಇಲ್ಲವೇ ನನಗೇ ಬೆಂಕಿ ಹಚ್ಚಿ. ಇದು ಕಾವೇರಿ ನೀರು ಪ್ರಾಧಿಕಾರದ ಆದೇಶ ಹೊರಬಿದ್ದ ನಂತರ ಪ್ರತಿಭಟನಾಕಾರನೊಬ್ಬ ಪೊಲೀಸರಿಗೆ ಸಿಟ್ಟಿನಿಂದ ಹೇಳಿದ ಮಾತು.

ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದಲ್ಲಿ ಟೈರ್‌ಗಳನ್ನು ಇಟ್ಟು ಬೆಂಕಿ ಹಚ್ಚಲು ಯತ್ನಿಸಿದರು. ಪೊಲೀಸರು ಮನವೊಲಿಸಿ ಟೈರ್‌ಗಳನ್ನು ಕಿತ್ತುಕೊಳ್ಳಲು ಮುಂದಾದರು. ಆದರೆ, ಹೋರಾಟಗಾರರಲ್ಲೊಬ್ಬರಾದ ಶಿವಕುಮಾರ ಆರಾಧ್ಯ ಅವರು ಟೈರ್‌ಗಳನ್ನು ತಮ್ಮ ತೋಳಿಗೇರಿಸಿಕೊಂಡು ದೂರ ಓಡಿದರು. ಪೊಲೀಸರೂ ಆತನನ್ನು ಬೆನ್ನಟ್ಟಿ ಹಿಡಿದುಕೊಂಡರು.

ಆ ಸಮಯದಲ್ಲಿ ಬೆಂಕಿ ಹಚ್ಚಲು ಅವಕಾಶ ಕೊಡಿ ಇಲ್ಲವೇ ನನಗೇ ಬೆಂಕಿ ಹಚ್ಚಿ ಎಂದು ಆಕ್ರೋಶಭರಿತರಾಗಿ ಹೇಳಿದರು. ಅಂತಿಮವಾಗಿ ಪೊಲೀಸರ ಟೈರ್‌ಗಳನ್ನು ಆತನಿಂದ ಕಿತ್ತು ದೂರ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

ತಮಿಳುನಾಡಿಗೆ ನೀರು ಹರಿಸುವ ನೀರು ನಿರ್ವಹಣಾ ಮಂಡಳಿಯ ಶಿಫಾರಸನ್ನು ವಿರೋಧಿಸಿ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಮಂಡಳಿ ನಡೆಸಿ ಯಾವ ಆದೇಶ ನೀಡುತ್ತದೋ ಎಂದು ರೈತ ಹಿತರಕ್ಷಣಾ ಸಮಿತಿ ಗಮನ ಹರಿಸಿದ್ದು, ಆದೇಶದ ನಂತರ ಹೋರಾಟದ ಸ್ವರೂಪವನ್ನು ಬದಲಿಸಲು ಚಿಂತನೆ ನಡೆಸಿದೆ.

ಇಂದು ಆರ್‌.ಅಶೋಕ್‌, ವಿಜಯೇಂದ್ರ ನೇತೃತ್ವದಲ್ಲಿ ಕೆಆರ್‌ಎಸ್‌ ಮುತ್ತಿಗೆಕನ್ನಡಪ್ರಭ ವಾರ್ತೆ ಮಂಡ್ಯತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶುಕ್ರವಾರ (ಜು.31) ಬೆಳಗ್ಗೆ 10.30 ಗಂಟೆಗೆ ಕೆಆರ್‌ಎಸ್‌ ಅಣೆಕಟ್ಟೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ವಿಭಾಗದ ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ, ಪ್ರಭಾರಿ ಸ್ವಾಮಿ ಮರುಳಾಪುರ ತಿಳಿಸಿದ್ದಾರೆ.

ಈ ಪ್ರತಿಭಟನೆಗೆ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಶಾಸಕರು, ರಾಜ್ಯ ಪದಾಧಿಕಾರಿಗಳು, ಮೈಸೂರು ವಿಭಾಗದ ಮುಖಂಡರು ಭಾಗವಹಿಸಲಿದ್ದಾರೆ. ಮಂಡ್ಯ, ಮೈಸೂರು ವಿಭಾಗದ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ಪದಾಧಿಕಾರಿಗಳು, ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ, ಬೂತ್ ಮಟ್ಟದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಯಲ್ಲಿ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮ
ಮಾಧ್ಯಮ ಒಂದು ಪ್ರವೃತ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡಲಿ