ಅಳ್ನಾವರ ಅರ್ಬನ್‌ ಬ್ಯಾಂಕ್‌ಗೆ ₹ 1.15 ಕೋಟಿ ನಿವ್ವಳ ಲಾಭ

KannadaprabhaNewsNetwork |  
Published : Apr 04, 2026, 02:30 AM IST
ಹಣ | Kannada Prabha

ಸಾರಾಂಶ

ತಾಂತ್ರಿಕತೆ ಬೆಳೆವಣಿಗೆಗೆ ತಕ್ಕಂತೆ ರಾಷ್ಟ್ರೀಕೃತ ಬ್ಯಾಂಕಿಗೆ ಪೈಪೋಟಿಯಾಗಿ ಅಳ್ನವಾರ ಕೋ-ಆಪ್‌ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಸರಳವಾಗಿ ಆರ್ಥಿಕ ವ್ಯವಹಾರ ದೊರೆಯುವಂತೆ ಮಾಡಲು ಅಗತ್ಯ ಬದಲಾವಣೆ ತರಲಾಗುತ್ತಿದೆ ಎಂದು ಅಧ್ಯಕ್ಷ ಅಧ್ಯಕ್ಷ ಶಿವಲಿಂಗ ಜಕಾತಿ ಹೇಳಿದರು

ಅಳ್ನಾವರ:

ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜತೆಗೆ ಮುಂಬರುವ ದಿನಗಳಲ್ಲಿ ಬ್ಯಾಂಕ್‌ನಿಂದ ಎಟಿಎಂ ಮತ್ತು ಡಿಜಿಟಲ್ ವ್ಯವಹಾರ ಆರಂಭಿಸಲಾಗುವುದು ಎಂದು ಅಳ್ನಾವರ ಅರ್ಬನ ಕೋ-ಆಪ್‌ ಬ್ಯಾಂಕ್‌ ಅಧ್ಯಕ್ಷ ಶಿವಲಿಂಗ ಜಕಾತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕತೆ ಬೆಳೆವಣಿಗೆಗೆ ತಕ್ಕಂತೆ ರಾಷ್ಟ್ರೀಕೃತ ಬ್ಯಾಂಕಿಗೆ ಪೈಪೋಟಿಯಾಗಿ ನಮ್ಮ ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಸರಳವಾಗಿ ಆರ್ಥಿಕ ವ್ಯವಹಾರ ದೊರೆಯುವಂತೆ ಮಾಡಲು ಅಗತ್ಯ ಬದಲಾವಣೆ ತರಲಾಗುತ್ತಿದೆ, ರಿಸರ್ವ್‌ ಬ್ಯಾಂಕಿನ ನಿಯಮಾವಳಿಗಳಿಗೆ ಬದ್ಧವಾಗಿ ಅದರ ಮಾರ್ಗಸೂಚಿ ಅನುಸರಿಸಿಕೊಂಡು ವ್ಯವಹರಿಸುತ್ತಿದ್ದು ೨೦೨೫-೨೬ ನೇ ಸಾಲಿನ ವರ್ಷದಲ್ಲಿ ₹ ೧೧೫ ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಪ್ರಗತಿಯಲ್ಲಿ ಮುಂದುವರಿದಿದೆ ಎಂದು ತಿಳಿಸಿದರು.

ಶೇರುದಾರರಿಗೆ ನೀಡಿದ್ದ ಭರವಸೆಯಂತೆ ಬ್ಯಾಂಕಿನ 2ನೇ ಶಾಖೆಯನ್ನು ಖಾನಾಪೂರ ತಾಲೂಕಿನಲ್ಲಿ ಪ್ರಾರಂಭಿಸಲಾಗಿದೆ. ಜತೆಗೆ ಪಟ್ಟಣದಿಂದ ಹೊರಗೆ ಇನ್ನೊಂದು ಶಾಖೆ ತೆರೆಯಲು ಉದ್ದೇಶಿಸಲಾಗಿದ್ದು ಪರವಾನಗಿ ಕೋರಲು ನಿರ್ಧರಿಸಲಾಗಿದೆ. ೫೧೮೨ ಶೇರು ಸದಸ್ಯರನ್ನು ಹೊಂದಿರುವ ಬ್ಯಾಂಕ್‌ ₹ 2.58 ಕೋಟಿ ಶೇರು ಮೊತ್ತ ಹಾಗೂ ₹ ೯೨.೯೯ ಕೋಟಿ ಠೆವಣಿ ಹೊಂದಿದೆ. ಕಳೆದ ಸಾಲಿಗಿಂತ ಸುಮಾರು ₹ ೧೨ ಕೋಟಿ ಹೆಚ್ಚುವರಿಯಾಗಿ ಠೇವಣಿ ಜಮೆ ಆಗಿದೆ ಎಂದು ಮಾಹಿತಿ ನೀಡಿದರು.

₹ ೬೦.೪೧ ಕೋಟಿ ಸಾಲ ನೀಡಿದ್ದು ಕಳೆದ ಆರ್ಥಿಕ ವರ್ಷದಲ್ಲಿ ₹ ೫೩೦.೧೦ ಕೋಟಿ ವ್ಯವಹಾರ ಮಾಡಿ ₹ ೧೦೬.೫೬ ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ವಿವರಿಸಿದ ಅಧ್ಯಕ್ಷರು, ಬ್ಯಾಂಕ್‌ ಸಂಪೂರ್ಣ ಗಣಕೀಕೃತ ವ್ಯವಸ್ಥೆಯಡಿ ಪಾರದರ್ಶಕ ಮತ್ತು ಶೀಘ್ರ ಸೇವೆ ನೀಡಲು ಶ್ರಮಿಸುತ್ತಿದೆ. ವಾಹನ ಮತ್ತು ವ್ಯಾಪಾರ ಹಾಗೂ ಪ್ರಾಪರ್ಟಿ ಸಾಲ ನೀಡುವ ಮೂಲಕ ಗ್ರಾಹಕರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಾವೇದಅನ್ವರ ತೋಲಗಿ, ವ್ಯವಸ್ಥಾಪಕ ರವೀಂದ್ರ ಪಟ್ಟಣ ಸೇರಿದಂತೆ ನಿರ್ದೇಶಕ ಮಂಡಳಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ
ಯಕ್ಷಧ್ರುವ ಪಟ್ಲ ಫೌಂಡೇಶನ್: ಮಂಗಳೂರು ಘಟಕದ ಅಷ್ಟಮ ಸಂಭ್ರಮ