ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಶ್ರೀ ಕ್ಷೇತ್ರ ಎಡೆಯೂರಿನಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣಕ್ಕೆ ಬೇಕಾದಂತಹ ಮೂಲಭೂತ ಸೌಕರ್ಯದಲ್ಲಿ ಆಹಾರ ಬಹು ಮುಖ್ಯವಾಗಿದೆ. ಮಕ್ಕಳಿಗೆ ಹಸಿವು ಜಾಸ್ತಿಯಾದಾಗ ಶಿಕ್ಷಣದ ಮೇಲೆ ಪ್ರೀತಿ ಕಮ್ಮಿಯಾಗುತ್ತದೆ. ಅದಕ್ಕಾಗಿ ಹಳೆ ವಿದ್ಯಾರ್ಥಿಗಳ ಸಂಘದಿಂದ ಕಾಲೇಜು ವಿದ್ಯಾರ್ಥಿಗಳಿಗೂ ಕೂಡ ಬಿಸಿಯೂಟ ಕೊಡಬೇಕೆಂದು ನಾವು ತೀರ್ಮಾನಿಸಿದ್ದು, ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿದೆ ಎಂದರು.
ಎಡೆಯೂರು, ಬಾಳೆಹೊನ್ನೂರು ಖಾಸಾ ಶಾಖಾಮಠದ ರೇಣುಕಾ ಶಿವಾಚಾರ್ಯ ಮಾತನಾಡಿ, ತಾನು ಕಲಿತ ಶಾಲೆ, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿರುವುದು ನಿಜವಾದ ನಾಗರಿಕನ ಕರ್ತವ್ಯ, ಅದಕ್ಕಾಗಿ ಶ್ರೀ ಸಿದ್ಧಲಿಂಗೇಶ್ವರ ಶಾಲೆಯ ಹಳೆ ವಿದ್ಯಾರ್ಥಿಗಳು ಇಂತಹ ಉತ್ತಮ ಸಾಧನೆಗೆ ಕೈ ಹಾಕಿರುವುದು ಅಭಿನಂದನೀಯ, ದಾಸೋಹ ಪರಂಪರೆಯಲ್ಲಿ ಸಿದ್ಧಲಿಂಗೇಶ್ವರರು ಬಹು ಮುಖ್ಯ ಪಾತ್ರ ವಹಿಸುತ್ತಾರೆ, ಆದ್ದರಿಂದ ಸಿದ್ಧಲಿಂಗೇಶ್ವರ ಕೃಪೆ ಸದಾ ಅವರ ಮೇಲೆ ಇರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ನಗದು ಬಹುಮಾನವನ್ನು ನೀಡುವ ಮುಖಾಂತರ ಅವರನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬೋರೆಗೌಡ, ರಂಗದಾಸಪ್ಪ, ಸಂಘದ ಕಾರ್ಯದರ್ಶಿ ವೈಎಸ್ ಚಂದ್ರಶೇಖರ್, ಮಾಯಣ್ಣಗೌಡ, ಗೌರವಾಧ್ಯಕ್ಷ ರಾಮಕೃಷ್ಣ, ಪ್ರಾಂಶುಪಾಲ ಪುಟ್ಟಸ್ವಾಮಿ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷರಾದ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ದೀಪು ಸೇರಿ ಇತರರು ಇದ್ದರು.----ಶ್ರೀ ಕ್ಷೇತ್ರ ಯಡಿಯೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟನೆ ಮಾಡಿದರು.