
ಕನ್ನಡಪ್ರಭ ವಾರ್ತೆ ಸಿಂಧನೂರು
ವಸತಿ ನಿಲಯದಲ್ಲಿ ಊಟ ಮತ್ತು ಸ್ವಚ್ಛತೆ ಕೊರತೆ, 9 ತಿಂಗಳಿಂದ ಕಿಟ್‍ಗಳ ವಿತರಣೆ ಇಲ್ಲ, ಬಿಸಿ ನೀರಿನ ವ್ಯವಸ್ಥೆ ಇಲ್ಲ, ಕಿಟಕಿಗಳು ಇಲ್ಲ, ಪ್ಯಾನ್‍ಗಳು ಇದ್ದರೂ ಸರಿಯಿಲ್ಲ, ಕೊಠಡಿಗಳಿಗೆ ಬಾಗಿಲುಗಳು ಇಲ್ಲ, ವಾಚ್ ಮ್ಯಾನ್ ಇಲ್ಲ, ಲೈಬ್ರರಿಯಲ್ಲಿ ಬೇಕಾದ ಪುಸ್ತಕಗಳು ಇಲ್ಲ, ಸಿಸಿ ಕ್ಯಾಮೆರಾಗಳು ಇಲ್ಲ, ಯಾವ ಮ್ಯಾಗ ಜೀನ್‍ಗಳು ಇಲ್ಲ, ವಸತಿ ನಿಲಯಕ್ಕೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಕಾಂಪೌಂಡ್ ಇಲ್ಲ, 180ಕ್ಕೂ ಅಧಿಕ ವಿದ್ಯಾರ್ಥಿನಿಯರು ಇರುವ ವಸತಿ ನಿಲಯಕ್ಕೆ ಮುಖ್ಯವಾಗಿ ವಾರ್ಡನ್ ಇಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಿಷಯ ತಿಳಿದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸ್ಥಳಕ್ಕೆ ಬಂದು ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕರು, ಜಿಲ್ಲಾ ಉಪನಿರ್ದೇಶಕರು ಹಾಗೂ ಸಿಇಒ ಅವರ ಜೊತೆಗೆ ದೂರವಾಣಿ ಕರೆಯಲ್ಲಿ ಮಾತನಾಡಿ ಡಿಡಿಯವರೇ ನೀವು ಬಂದು ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಅಲ್ಲಿಯವರೆಗೂ ಪ್ರತಿಭಟನಾನಿರತ ಯಾವೊಬ್ಬ ವಿದ್ಯಾರ್ಥಿಗಳು ಕೂಡ ವಸತಿ ನಿಲಯಕ್ಕೆ ಹೋಗಲ್ಲ ಎಂದು ಪಟ್ಟು ಹಿಡಿದಿ ದ್ದಾರೆ. ವಿದ್ಯಾರ್ಥಿನಿಯರ ಬೇಡಿಕೆಗಳನ್ನು ತಕ್ಷಣವೇ ಈಡೇಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆನಿರತ ಮೂರ್ನಾಲ್ಕು ವಿದ್ಯಾರ್ಥಿನಿಯರು ಅಸ್ತವ್ಯಸ್ತಗೊಂಡರು. ನಂತರ ನಾಡಗೌಡರು ತಮ್ಮ ಕಾರಿನಲ್ಲಿ ಸ್ಥಳೀಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಕೊಟ್ಟು ವೈದ್ಯರಿಗೆ ಫೋನ್ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಇದರಿಂದಾಗಿ ಮಧ್ಯಾಹದ ಊಟ ಸಹಿತ ಮಾಡುವುದಿಲ್ಲ ಎಂದು ಹಠ ಹಿಡಿದು ಕುಳಿತ ಎಲ್ಲ ವಿದ್ಯಾರ್ಥಿನಿಯರಿಗೆ ನಾಡಗೌಡರು ಮೊದಲು ಊಟ ಮಾಡಿ ನಿಮ್ಮ ಸಮಸ್ಯೆ ಡಿಡಿ ಬಂದ ನಂತರ ಕುಳಿತು ಬಗೆಹರಿಸೋಣ ಎಂದಾಗ ಹಾಸ್ಟೆಲ್‍ನಿಂದ ಊಟ ತರಿಸಿಕೊಟ್ಟರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್, ಜೆಡಿಎಸ್ ಯುವ ಮುಖಂಡ ಸುಮಿತ್ ತಡಕಲ್, ಕೆಆರ್‌ಎಸ್ ಪಕ್ಷದ ರಾಜ್ಯ ರೈತ ಮುಖಂಡ ನಿರುಪಾದಿ ಗೋಮರ್ಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಪ್ರದೀಪ್ ಪೂಜಾರಿ ಸೇರಿದಂತೆ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.