ಯುವಕರು ಎದುರಿಸುತ್ತಿರುವ ಸಮಸ್ಯೆ ಕುರಿತು ಬಾದರ್ಲಿ ಜತೆ ಸುದೀರ್ಘ ಚರ್ಚೆ

KannadaprabhaNewsNetwork |  
Published : Oct 01, 2026, 01:30 AM IST
 | Kannada Prabha

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಯುವ ಆಯೋಗ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಹಾಗೂ ಸಿಂಧನೂರು ತಾಲೂಕಿನ ಯುವಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಪ್ರಮುಖ ಮುಖಂಡರು ಮಂಗಳವಾರ ಸಂಜೆ ಎಂಎಲ್‍ಸಿ ಬಸನಗೌಡ ಬಾದರ್ಲಿ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ನಡೆಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕರ್ನಾಟಕ ರಾಜ್ಯದಲ್ಲಿ ಯುವ ಆಯೋಗ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಹಾಗೂ ಸಿಂಧನೂರು ತಾಲೂಕಿನ ಯುವಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಪ್ರಮುಖ ಮುಖಂಡರು ಮಂಗಳವಾರ ಸಂಜೆ ಎಂಎಲ್‍ಸಿ ಬಸನಗೌಡ ಬಾದರ್ಲಿ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ನಡೆಸಿ ಮನವಿ ಸಲ್ಲಿಸಿದರು.

ಸಿಂಧನೂರು ನಗರದ ಅಭಿವೃದ್ಧಿ ಹಾಗೂ ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಎಂಎಲ್‍ಸಿ ಬಸನಗೌಡ ಬಾದರ್ಲಿ ಅವರೊಂದಿಗೆ ಚರ್ಚಿಸಲಾಯಿತು. ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಅವರ ಗಮನಕ್ಕೆ ತರಲಾಯಿತು.

ಚರ್ಚೆಗೆ ಸ್ಪಂದಿಸಿದ ಎಂಎಲ್‍ಸಿ ಬಸನಗೌಡ ಬಾದರ್ಲಿ ಅವರು ನಗರದ ಅಭಿವೃದ್ಧಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ಅಗತ್ಯವಿರುವ ಸಹಕಾರ ಮತ್ತು ಬೆಂಬಲವನ್ನು ಸದಾ ನೀಡುತ್ತೇನೆ. ಯುವ ಆಯೋಗ ಸ್ಥಾಪನೆ ಸೇರಿದಂತೆ ಯುವಕರ ಸಮಸ್ಯೆಗಳ ಪರಿಹಾರ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಭರವಸೆ ನೀಡಿದರು.

ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಸೀಮ್ ಅಹ್ಮದ್ ಮಾತನಾಡಿದರು. ಎಐಎಂಡಿಸಿ ರಾಷ್ಟ್ರೀಯ ವಕ್ತಾರ ಸರ್ಫರಾಜ್ ಖಾನ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲೂಕು ಘಟಕದ ಅಧ್ಯಕ್ಷ ಅಬುಲೈಸ್ ನಾಯಕ್, ಉಪಾಧ್ಯಕ್ಷ ಎಂ.ಡಿ.ಇಸ್ಮಾಯಿಲ್, ಕಾರ್ಯದರ್ಶಿ ನಯೀಮ್ ಇರ್ಫಾನ್, ಕಾನೂನು ಸಲಹೆಗಾರ ಅಜಂ ವಕೀಲ, ಸದಸ್ಯರಾದ ಉಸ್ಮಾನ್ ಖಾನ್, ಪಾಷಾ, ಫಾರೂಕ್ ಅತ್ತಾರ್, ಉಮರ್, ಸೊಹೈಬ್, ತಖೀ ಅಹ್ಮದ್ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನ ದರಕ್ಕಿಂತ ನೀರು ದುಬಾರಿ ಕಾಲ ದೂರವಿಲ್ಲ: ಬೌದ್ಧೆ
ಎನ್‌ಡಿಆರ್‌ಎಫ್ ತಂಡದವರಿಂದ ಮುಂಜಾಗ್ರತೆ ಕುರಿತು ಪ್ರಾತ್ಯಕ್ಷಿಕೆ