ಅಂಬೇಡ್ಕರ್ ಬರೀ ವ್ಯಕ್ತಿಯಲ್ಲ, ದೊಡ್ಡ ಶಕ್ತಿ: ಶಾಸಕ ಡಾ. ಚಂದ್ರು ಕೆ. ಲಮಾಣಿ

KannadaprabhaNewsNetwork |  
Published : Apr 15, 2026, 02:30 AM IST
ಕಾರ್ಯಕ್ರಮವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಡಾ. ಅಂಬೇಡ್ಕರ್ ಅವರು ಶೋಷಿತರ ಬದುಕಿಗೆ ನಿತ್ಯ ಪ್ರಕಾಶಿಸುವ ಸೂರ್ಯ ಇದ್ದಂತೆ. ಶೋಷಿತರು, ಹಿಂದುಳಿದ ವರ್ಗದವರ ಆರಾಧ್ಯ ಪುರುಷನಾಗಿದ್ದು, ಅವರು ಹಾಕಿಕೊಟ್ಟ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.

ಶಿರಹಟ್ಟಿ: ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ. ಪ್ರತಿಯೊಬ್ಬರಿಗೂ ಬಹುದೊಡ್ಡ ಶಕ್ತಿಯಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ನಮಗೆಲ್ಲರಿಗೂ ದೊಡ್ಡ ಶಕ್ತಿಯಾಗಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ೧೧೯ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಯುವಪೀಳಿಗೆ ಪಾಲಿಸುವುದು ಅವಶ್ಯಕವಾಗಿದೆ ಎಂದರು.ಡಾ. ಅಂಬೇಡ್ಕರ್ ಅವರು ಶೋಷಿತರ ಬದುಕಿಗೆ ನಿತ್ಯ ಪ್ರಕಾಶಿಸುವ ಸೂರ್ಯ ಇದ್ದಂತೆ. ಶೋಷಿತರು, ಹಿಂದುಳಿದ ವರ್ಗದವರ ಆರಾಧ್ಯ ಪುರುಷನಾಗಿದ್ದು, ಅವರು ಹಾಕಿಕೊಟ್ಟ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಯುವಜನರಲ್ಲಿ ಹಸಿವಿನ ಕಿಚ್ಚಿಗಿಂತ ಸ್ವಾಭಿಮಾನದ ಕಿಚ್ಚು ಬೆಳೆಯಬೇಕು ಎಂದರು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ, ಆದರ್ಶಗಳು ಯುವಕರಿಗೆ ಮಾರ್ಗದರ್ಶನವಾಗಿದ್ದು, ಅವರ ತತ್ವ ಆದರ್ಶಗಳನ್ನು ಸಾಹಿತ್ಯದ ಮೂಲಕ ತಿಳಿದು ಜಾಗೃತರಾಗಬೇಕು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರ ವಿಚಾರಧಾರೆಗಳು ಇಡೀ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದರು.

ಐ.ಎಸ್. ಮಾದರ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಾನವಕುಲದ ಬೆಳಕು. ೧೮೯೧ರ ಏ. ೧೪ರಂದು ಜನಿಸಿದ ಡಾ. ಬಿ.ಆರ್. ಅಂಬೇಡ್ಕರ ಅವರು ಅಸಮಾನತೆಯು ತಾಂಡವವಾಡುತ್ತಿದ್ದ ಕಾಲದಲ್ಲಿ ತಾನು ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಸಿಗಬಾರದು ಅನ್ನುವ ದೃಷ್ಟಿಯಿಂದ ನಿರಂತರವಾಗಿ ಅಧ್ಯಯನ ಮಾಡಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ನ್ಯಾಯ ಒದಗಿಸಿದರು ಎಂದರು.

ಡಿ.ಕೆ. ಹೊನ್ನಪ್ಪನವರ, ಮೋಹನ್ ಗುತ್ತೆಮ್ಮನವರ, ನಾಗರಾಜ ಲಕ್ಕುಂಡಿ, ಮುತ್ತು ಬಾವಿಮನಿ ಮಾತನಾಡಿದರು. ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ತಾಪಂ ಇಒ ರಾಮಪ್ಪ ದೊಡ್ಡಮನಿ, ಬಿಇಒ ಎಚ್. ನಾಣಕೀ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ, ಶಿವಪ್ಪ ಹದ್ಲಿ, ನೋಂದಣಿ ಇಲಾಖೆಯ ಶರಣಪ್ಪ ಪವಾರ, ರಾಜು ಶಿರಹಟ್ಟಿ, ರವಿ ಗುಡಿಮನಿ, ಮಹಾಂತೇಶ ಗೋಡೆಣ್ಣವರ, ಪ್ರಕಾಶ ಬಡೆಣ್ಣವರ, ಸಂಜೀವ ದೊಡ್ಡಮನಿ, ಗಾಳೆಪ್ಪ ಹರಿಜನ, ಬಸವರಾಜ ವಡವಿ, ಮಾಬೂಸಾಬ ಲಕ್ಷ್ಮೇಶ್ವರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್‌ ವ್ಯಕ್ತಿಯಲ್ಲ ಜಗತ್ತಿನ ಶಕ್ತಿ
ನಾಯಿ, ಬೆಕ್ಕುಗಳಿಗಿಲ್ಲದ ಮೈಲಿಗೆ ಮನುಷ್ಯರಿಗೆ ಏಕೆ?