ಸಾಮಾಜಿಕ ನ್ಯಾಯದ ಹರಿಕಾರ ಅಂಬೇಡ್ಕರ್: ಎಂ.ಮನಿರಾಜು

KannadaprabhaNewsNetwork |  
Published : Apr 20, 2026, 01:15 AM IST
  ಸಿಕೆಬಿ-1  ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಬಾಬಾ ಸಾಹೇಬ ಅಂಬೇಡ್ಕರ್ ಅವರ 135 ನೇ ಜಯಂತಿಯಲ್ಲಿ  ಎಂ.ಮನಿರಾಜು ಅರಿಕೆರೆ ಮಾತನಾಡಿದರು | Kannada Prabha

ಸಾರಾಂಶ

ಅಪ್ರತಿಮ ಜ್ಞಾನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಬದುಕನ್ನು ದಮನಿತ ಸಮುದಾಯಗಳ ಸಬಲೀಕರಣಕ್ಕಾಗಿ ಮೀಸಲಿಟ್ಟರು.

ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ 135ನೇ ಜಯಂತಿ ಉದ್ಘಾಟಿಸಿ ಎಂ.ಮನಿರಾಜು ಅರಿಕೆರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅವಕಾಶ ವಂಚಿತ ಭಾರತೀಯರಿಗೆ ಘನತೆಯ ಬದುಕನ್ನು ಕಲ್ಪಿಸುವ ಏಕೈಕ ಉದ್ದೇಶದಿಂದ ತಮ್ಮಿಡೀ ಬದುಕನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮಾತ್ರ ಎಂದು ಚಿಂತಕ ಹಾಗೂ ಉಪನ್ಯಾಸಕ ಎಂ.ಮನಿರಾಜು ಅರಿಕೆರೆ ತಿಳಿಸಿದರು.

ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ 135ನೇ ಜಯಂತಿಗೆ ದೀಪಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿ, ಅಪ್ರತಿಮ ಜ್ಞಾನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಬದುಕನ್ನು ದಮನಿತ ಸಮುದಾಯಗಳ ಸಬಲೀಕರಣಕ್ಕಾಗಿ ಮೀಸಲಿಟ್ಟರು. ಎಲ್ಲರನ್ನೂ ಒಳಗೊಂಡ ಸದೃಢ ಭಾರತ ನಿರ್ಮಾಣಕ್ಕಾಗಿ ಅಂತಃಕರಣದಿಂದ ಮಿಡಿದರು. ಅವರ ಜೀವನ ವ್ಯಕ್ತಿತ್ವ ಹೋರಾಟ ಮತ್ತು ಕೊಡುಗೆಗಳ ಅರಿವಿನ ಅಗತ್ಯತೆ ಮತ್ತು ಅನಿವಾರ್ಯತೆ ಇಂದು ಹೆಚ್ಚಿದೆ. ಸಂವಿಧಾನದ ಶಕ್ತಿ ಮತ್ತು ಸೌಂದರ್ಯ ಅದರ ಅರಿವಿನಲ್ಲಿಯೇ ಇದೆ ಎಂದರು.

ನಮ್ಮದು ಶ್ರೇಷ್ಠ ಸಂವಿಧಾನ ಎನ್ನುತ್ತೇವೆ. 1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸಿಕೊಂಡ ನಾವು ಈ 76 ವರ್ಷದಲ್ಲಿ 105 ಬಾರಿ ತಿದ್ದುಪಡಿ ಮಾಡಿಕೊಂಡಿದ್ದೇವೆ. ಅಮೆರಿಕದ ಸಂವಿಧಾನಕ್ಕೆ ಹೋಲಿಸಿದರೆ ಭಾರತದ ಸಂವಿಧಾನಕ್ಕೆ ಆದಷ್ಟು ತಿದ್ದುಪಡಿ ಬೇರೆ ಯಾವುದಕ್ಕೂ ಆಗಿಲ್ಲದಿರುವುದು ದುರ್ದೈವ ಎಂದರು.ವಕೀಲ ಶ್ರೀರಾಮಪುರ ನರಸಿಂಹಮೂರ್ತಿ ಮಾತನಾಡಿ, ದೇಶ ಮತ್ತು ದೇಶವಾಸಿಗಳ ಭವಿಷ್ಯಕ್ಕಾಗಿ ಸಂವಿಧಾನದ ಮೂಲಕ ಹೊಸ ಭಾಷ್ಯ ಬರೆದ ಧೀಮಂತ ನಾಯಕ ಅಂಬೇಡ್ಕರಾಗಿದ್ದಾರೆ. ಅವರ ಆದರ್ಶದ ಬದುಕು ನಮ್ಮದಾಗಲಿ. ದೇಶಕ್ಕೆ ಹೊರೆಯಾಗದ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನಕ್ಕೆ ಬದ್ಧವಾಗಿ ಬಳಸೋಣ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಶೋಷಣೆ ಮುಕ್ತ ಸಮಾಜ ಕಟ್ಟೋಣ ಎಂದರು.

ಪ್ರಾಂಶುಪಾಲ ಸಿಎಂ ಮುನಿಕೃಷ್ಣಪ್ಪ ಮಾತನಾಡಿ, ಭಾರತ ಇಂದು ಏನಾದರೂ ಸಾಧಿಸಿದೆ ಎಂದರೆ ಆ ಸಾಧನೆಯಲ್ಲಿ ಅಂಬೇಡ್ಕರರ ಕೊಡುಗೆ ಇದೆ. ಸರ್ವರಿಗೆ ಸಮಬಾಳು ಸಮಪಾಲು ಕೊಡಲು ಶ್ರಮಿಸಿದ, ಸಾಮಾಜಿಕ ನ್ಯಾಯದ ಅಗತ್ಯವನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟ ಮಹಾಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು. ಅಂಬೇಡ್ಕರ್ ಎಂಬ ಜ್ಞಾನ ಸೂರ್ಯ ಭಾರತದಲ್ಲಿ ಉದಯವಾಗಲಿಲ್ಲವೆಂದಿದ್ದರೆ ಭಾರತದ ಮಹಿಳೆಯರಿಗೆ, ಕಾರ್ಮಿಕರಿಗೆ, ಶೋಷಿತರಿಗೆ, ಅಶಕ್ತರಿಗೆ ಒಟ್ಟಾರೆ ಬಹುಜನ ಭಾರತಕ್ಕೆ ಮುಕ್ತಿ ಎಂಬುದು ದೊರೆಯುತ್ತಿರಲಿಲ್ಲ ಎಂದರುಗೋಲ್ಡನ್ ಗ್ಲಿಮ್ಸ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ಬೃಹತ್ ಕೇಕನ್ನು ಕತ್ತರಿಸಿ ಸಿಹಿ ಹಂಚುವ ಮೂಲಕ ಜ್ಞಾನ ಸೂರ್ಯನ ಜಯಂತಿಗೆ ಹೊಸ ಭಾಷ್ಯ ಬರೆದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ಭಾಷಣ ಸಭಿಕರನ್ನು ತನ್ಮಯಗೊಳಿಸಿತು. ಈ ವೇಳೆ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿ ಸಮೂಹ ಹಾಜರಿದ್ದು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.

ಸಿಕೆಬಿ-1 ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಯಲ್ಲಿ ಎಂ.ಮನಿರಾಜು ಅರಿಕೆರೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ತಿರಸ್ಕರಿಸಲು ಕರೆ
ಸಿದ್ಧಾರ್ಥ ಕೆಪಿಎಲ್‌ ಸೀಸನ್ 2ರ ಉದ್ಘಾಟನೆ