ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದು, ಅವರ ತತ್ವ, ಸಿದ್ಧಾಂತ ಮತ್ತು ಆದರ್ಶವನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಹೇಳಿದರು.ಇಲ್ಲಿನ ಎ.ಕೆ. ಕಾಲನಿಯಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವರಾಂ ಅವರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆಯದೇ ಹೋಗಿದ್ದರೆ ಎಲ್ಲರಿಗೂ ಸಮಾನವಾಗಿ ಬದುಕು ಸಾಗಿಸುವ ಅವಕಾಶ ಇರುತ್ತಿರಲಿಲ್ಲ. ಎಲ್ಲರೂ ಸಮಾನವಾಗಿ ಜೀವಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಕಾರಣ. ಇಂದು ನಾವುಗಳು ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ನೀಡಿದ್ದಾರೆ. ನಮಗೆ ಸಂವಿಧಾನದ ಅಡಿಯಲ್ಲಿ ಬದುಕುವ ದಾರಿ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಸಮಾನತೆ ನೀಡಿದ್ದಾರೆ. ಪ್ರತಿಯೊಬ್ಬರೂ ಕಾನೂನನ್ನು ಗೌರವಿಸುವ ಮೂಲಕ ಜೀವನ ಸಾಗಿಸಬೇಕಾಗಿದೆ ಎಂದು ಹೇಳಿದರು.ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಎಲ್. ನಾಗರಾಜ ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ಮುಖಂಡ ಡಿ. ರಾಘವೇಂದ್ರ ಶೆಟ್ಟಿ, ಪಪಂ ಮುಖ್ಯಾಧಿಕಾರಿ ಎಂ. ಖಾಜಾ, ಸ್ಥಳೀಯ ಮುಖಂಡರಾದ ಎಲ್. ಜಗನ್ನಾಥ, ಸಿ. ಮಂಜುನಾಥ, ಕೆ.ಎಚ್. ಸುಬ್ರಮಣ್ಯ ಸೇರಿದಂತೆ ಇತರರು ಸಭೆಯಲ್ಲಿ ಮಾತನಾಡಿದರು.ಪಿ.ಎಸ್.ಐ. (ಅಪರಾಧ) ಬೀಬಿಮರೇಮ್, ಪಪಂ ಸದಸ್ಯರಾದ ಎಲ್. ವಸಂತ, ಜಿಪಂ ಮಾಜಿ ಸದಸ್ಯ ಎಲ್. ಮಂಜುನಾಥ, ಗ್ರಾಪಂ ಸದಸ್ಯರಾದ ಗೋಸಿ ಗಾಳೆಪ್ಪ, ನೀಲಮ್ಮ, ಮಲ್ಲೇಶ, ಹನುಮಂತ, ಯರಿಸ್ವಾಮಿ, ಸ್ಥಳಿಯ ಮುಖಂಡರಾದ ಬಿ.ಆನಂದ, ಡಿಎಸ್‌ಎಸ್ ಮಂಜುನಾಥ, ಎಚ್. ನಾಗಪ್ಪ, ರಾಮನಮಲಿ, ಲಕ್ಷ್ಮಪ್ಪ, ಹನುಮಂತಪ್ಪ, ಪರಶುರಾಮ, ರೋಗಣ್ಣವರ ಮಂಜುನಾಥ, ರುದ್ರನಾಯ್ಕ, ದೊಡ್ಡ ಭರ್ಮಪ್ಪ, ಮಾಳ್ಗಿ ಸ್ವಾಮಿ, ಬಿಸರಳ್ಳಿ ಹುಲುಪ್ಪ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು,
ಶಿಕ್ಷಕ ಎಲ್. ಸುರೇಶ್ ನಿರೂಪಿಸಿ, ವಂದಿಸಿದರು.ಇದೇ ಸಂದರ್ಭ ದ್ವಿತಿಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಮಾಜದ ಗ್ರಾಪಂ ಸದಸ್ಯರನ್ನು ಹಾಗೂ ಪಪಂ ಸದಸ್ಯರನ್ನು ಸನ್ಮಾನಿಸಲಾಯಿತು.