ಮಾಗಡಿ: ಚುನಾವಣೆ ಆಯೋಗ ಮತದಾರರ ಪಟ್ಟಿ ಪರಿಷ್ಕರಿಸುತ್ತಿದ್ದು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 30 ಸಾವಿರ ಮತ ರದ್ದಾಗುವ ಸಾಧ್ಯತೆಗಳಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು

ಮಾಗಡಿ: ಚುನಾವಣೆ ಆಯೋಗ ಮತದಾರರ ಪಟ್ಟಿ ಪರಿಷ್ಕರಿಸುತ್ತಿದ್ದು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 30 ಸಾವಿರ ಮತ ರದ್ದಾಗುವ ಸಾಧ್ಯತೆಗಳಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್ಐಆರ್) ಅಂಗವಾಗಿ ಬೂತ್ ಮಟ್ಟದ ಏಜೆಂಟರು, ಮುಖಂಡರು, ಕಾರ್ಯಕರ್ತರ ಸಭೆ ಹಾಗೂ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಗಡಿ ವಿಧಾನಸಭಾ ಕ್ಷೇತ್ರದ 301 ಬೂತ್‌ಗಳ ಬಿಎಲ್ಎಗಳನ್ನೂ ಈಗಾಗಲೇ ನೇಮಿಸಿದ್ದೇವೆ. ಸಭೆಗೆ ಬರದವರನ್ನು ತೆಗೆಯಲಾಗುತ್ತದೆ. ಈಗ ಚುನಾವಣೆ ಆಯೋಗ ಮತದಾನ ಪರಿಷ್ಕರಿಸುತ್ತಿದೆ. ಪ್ರತಿ ಮನೆಗೂ ಹೋಗಿ ಮತದಾರರ ಪಟ್ಟಿಯಲ್ಲಿಲ್ಲದಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ತಿಳಿಸಿದರೆ ಮುಂದಿನ ಗ್ರಾಪಂ ಚುನಾವಣೆಯಲ್ಲಿ ಅನುಕೂಲವಾಗುತ್ತದೆ. ಇನ್ನು 15 ದಿನ ಆಯಾ ಬೂತ್‌ಗಳಲ್ಲಿ ನಿಜವಾದ ಮತದಾರರನ್ನು ಉಳಿಸಬೇಕು. ಮದುವೆಯಾಗಿ ಬಂದ ಸೊಸೆಯರನ್ನು ಮತಪಟ್ಟಿಯಲ್ಲಿ ಸೇರಿಸಬೇಕು. ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಕಾರ್ಯಕರ್ತರಿಗೆ ಕಾರ್ಯಾಗಾರ ಮಾಡುತ್ತಿದ್ದು, ಈ ಮಾಹಿತಿಯನ್ನು ಪ್ರತಿಯೊಬ್ಬ ಕಾರ್ಯಕರ್ತರಿಗೂ ತಿಳಿಸುತ್ತಿದೆ. 15 ದಿನದಲ್ಲಿ ಚುನಾವಣೆ ಆಯೋಗದ ತಂಡ ಬಂದು ಮತದಾರರ ಹೊಸ ಪಟ್ಟಿ ಸಿದ್ಧ ಮಾಡಲಿದೆ ಎಂದು ತಿಳಿಸಿದರು.

ಈ ವೇಳೆ ಜೆಡಿಎಸ್ ವೀಕ್ಷಕರು ಹಾಗೂ ವಕ್ತಾರ ದೇವರಾಜ್, ಹಿರಿಯ ಮುಖಂಡರಾದ ಶೇಷಪ್ಪ, ತಗೀಕುಪ್ಪೆ ಪಂಚೆ ರಾಮಣ್ಣ, ಕೆಂಪೇಗೌಡ, ರಂಗಣಿ, ವಿಜಯಕುಮಾರ್, ಕುಮಾರ್, ಎಂ.ಎನ್.ಮಂಜು, ಕೆ.ವಿ.ಬಾಲು, ಸಾಗರ್, ಬೆಳಗವಾಡಿ ರಂಗಸ್ವಾಮಿ, ವೆಂಕಟೇಶ್ ಇತರರಿದ್ದರು.