10 ಜನ ಸಾಧಕರಿಗೆ ಅಂಬೇಡ್ಕರ್‌ ರತ್ನ ಪ್ರಶಸ್ತಿ

KannadaprabhaNewsNetwork |  
Published : Apr 11, 2024, 12:48 AM IST
ಷಷಷಷ | Kannada Prabha

ಸಾರಾಂಶ

ಕರ್ನಾಟಕ ಭೀಮ್ ಸೇನೆಯ ವಿಜಯಪುರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿ ಮತ್ತು ಮಹಿಳಾ ಘಟಕ ಉದ್ಘಾಟನಾ ಹಾಗೂ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 10 ಸಾಧಕರಿಗೆ ಮಹಾನ್ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಭೀಮ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರ ರಾದ ಯಲ್ಲಪ್ಪ ಚಲವಾದಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕರ್ನಾಟಕ ಭೀಮ್ ಸೇನೆಯ ವಿಜಯಪುರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ಭಾಗ-2 ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿ ಮತ್ತು ಮಹಿಳಾ ಘಟಕ ಉದ್ಘಾಟನಾ ಹಾಗೂ ಅಂಬೇಡ್ಕರ್‌ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 10 ಸಾಧಕರಿಗೆ ಮಹಾನ್‌ ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಭೀಮ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರ ರಾದ ಯಲ್ಲಪ್ಪ ಚಲವಾದಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಭೀಮ್ ಸೇನೆಯ ಸಮಿತಿಯ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರ್ತಿಸಿ ಪ್ರಶಸ್ತಿ ನೀಡಿ ಅವರಿಗೆ ಸ್ಪೂರ್ತಿ ತುಂಬಲಾಗುತ್ತಿದೆ ಎಂದರು.

ಈ ವೇಳೆ ಚಿಕ್ಕೋಡಿ ತಾಲೂಕಿನ ಅಂಬೇಡ್ಕರ್‌ ವಿಚಾರಧಾರೆಯ ಅಗಾಧವಾದ ಪಂಡಿತ ಜ್ಞಾನವನ್ನು ಹೊಂದಿದ ಸಂತೋಷ ದೊಡಮನಿ, ಭೀಮ ಆರ್ಮಿ ಭಾರತ್ ಮಿಷನ್ ಮಾನವ ಹಕ್ಕುಗಳ ಹೋರಾಟ ಸಮೀತಿಯ ಸಾಮಾಜಿಕ ಕಾರ್ಯಕರ್ತ ಅಧ್ಯಕ್ಷ ಮುತ್ತುರಾಜ ಹು. ಬಾಗೇವಾಡಿ, ದಲಿತ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಮಲ್ಲು ಎಸ್. ತಳವಾರ, ಕರ್ನಾಟಕ ಭೀಮ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಮತಿನಕುಮಾರ, ದಲಿತ ಹಿರಿಯ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಹರೀಶ ನಾಟಿಕಾರ, ಹಿರಿಯ ದಲಿತ ಸಾಹಿತಿ ಪತ್ರಕರ್ತ ಪರುಶುರಾಮ ಕೊಣ್ಣೂರ, ಪತ್ರಕರ್ತ ಶಕ್ತಿಕುಮಾರ ಉಕುಮನಾಳ, ಅಥರ್ಗಾದ ಕ್ರಾಂತಿ ಗೀತೆ ಹಾಗೂ ಹಿರಿಯ ದಲಿತ ಸಾಹಿತಿ ಪರಶುರಾಮ ದೊಡಮನಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ ಜೆ ವಿಜಯಕರ, ಶಿವಕುಮಾರ ವಿ ಸೇರಿದಂತೆ ಇನ್ನು ಹಲವರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದ ಎಂದು ಮಾಹಿತಿ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ