ಅಂಬೇಡ್ಕರ್ ಬದುಕು ಎಲ್ಲರಿಗೂ ಆದರ್ಶ: ಡಾ.ಪ್ರಭುರಾಜ

KannadaprabhaNewsNetwork |  
Published : Apr 16, 2026, 02:15 AM IST
15ಕೆಪಿಎಲ್26 ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಕಡ್ಡಾಯ ಶಿಕ್ಷಣ ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ ಇಲ್ಲಿ ಬಡಮಕ್ಕಳು ಹಾಗೂ ಉಳ್ಳವರ ಮಕ್ಕಳು ಓದುವ ಶಾಲೆ ಬೇರೆ ಬೇರೆಯಾಗಿವೆ

ಕೊಪ್ಪಳ: ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಜಿಲ್ಲಾ ಘಟಕ ಕೊಪ್ಪಳ ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಅಂಬೇಡ್ಕರ್ ಗೀತೆಗಳನ್ನು ಶಂಕರ ಬಿನ್ನಾಳ ರಚನೆ ಸಂಗೀತ ಸಂಯೋಜನೆಯಲ್ಲಿ ಹಾಡಿದರು. ಬುದ್ಧ ಧ್ಯಾನ, ಸಂಗೀತ ಜುಗಲಬಂದಿ ಜರುಗಿತು. ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ಶಿಕ್ಷಣ, ಸಂಘಟನೆ, ಹೋರಾಟ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಡಾ. ಪ್ರಭುರಾಜ ನಾಯಕ ಮಾತನಾಡಿ, ಕಡ್ಡಾಯ ಶಿಕ್ಷಣ ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ ಇಲ್ಲಿ ಬಡಮಕ್ಕಳು ಹಾಗೂ ಉಳ್ಳವರ ಮಕ್ಕಳು ಓದುವ ಶಾಲೆ ಬೇರೆ ಬೇರೆಯಾಗಿವೆ.ಈ ವ್ಯವಸ್ಥೆ ವ್ಯದ್ಯಕೀಯ ಆಸ್ಪತ್ರೆಗಳಲ್ಲೂ ಮುಂದುವರೆದಿದೆ. ಇದರಿಂದ ಸಮಾನ ಅವಕಾಶಗಳು ದೊರೆಯುವುದಾದರೂ ಹೇಗೆ. ಸ್ವತಹ ಡಾ. ಬಿ.ಆರ್,ಅಂಬೇಡ್ಕರ್ ಜೀವಿತಾವಧಿಯಲ್ಲಿ ಗರ್ಭಿಣಿಗೆ ಚಿಕಿತ್ಸೆ ಕೊಡಿಸಲು ವೈದ್ಯರು ಬಾರದೆ ಇರುವಾಗ ಅಂಬೇಡ್ಕರ್ ಪರಿಚಿತ ವೈದ್ಯರನ್ನು ತಮ್ಮ ಮನೆಗೆ ಕರೆದುಕೊಂಡು ಬಂದಾಗಲೂ ಅವರನ್ನು ಸ್ಪರ್ಶಿಸಿ ಚಿಕಿತ್ಸೆ ನೀಡಲು ವೈದ್ಯರು ಮುಂದಾಗದೆ ಇರುವ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಮಹಿಳೆ ಕೊನೆಯುಸಿರೆಳೆದರು.

ಬಂಡಾಯ ಸಾಹಿತಿ ಹೋರಾಟಗಾರ ಪ್ರೊ. ಅಲ್ಲಮಪ್ರಭು ಬೆಟ್ಟದೂರ, ಸರ್ಕಾರಿ ನೌಕರರ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಪ.ಜಾತಿ,ಪ.ಪಂ ನೌಕರರ ಒಕ್ಕೂಟದ ರಾಜ್ಯ ಸಂಚಾಲಕ ಹನುಮಮಂತಪ್ಪ ಚಲವಾದಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಂದಾರ, ವಾರ್ತಾಧಿಕಾರಿ ಗವಿಸಿದ್ಧಪ್ಪ ಹೊಸಮನಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮವೇ ಪ್ರಪಂಚಕ್ಕೆ ಆಧಾರ ನಮ್ಮದು ಮಾತ್ರ ಧರ್ಮ ಉಳಿದವು ಮತಗಳು: ವಿಧುಶೇಖರ ಶ್ರೀಗಳು
ಲ್ಯಾಂಡ್ ಜಿಹಾದ್: ಪ್ರಮೋದ್ ಮುತಾಲಿಕ್ ಆಕ್ರೋಶ