ಅಂಬೇಡ್ಕರ್ ಕೊಡುಗೆ ಭಾರತದ ಬೆಳವಣಿಗೆಗೆ ಭದ್ರ ಬುನಾದಿ

KannadaprabhaNewsNetwork |  
Published : Apr 23, 2025, 12:34 AM IST
ಅರಸೀಕೆರೆಯ ಜಾಜೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಬ್ರಿಟೀಷರ ಆಕ್ರಮಣ ನೀತಿ, ರಾಜ ಮಹಾರಾಜರ ಪ್ರಾಂತ್ಯವಾರು ಆಡಳಿತವಿದ್ದ ವಿಭಿನ್ನ ಸನ್ನಿವೇಶದಲ್ಲಿ ರೂಪುಗೊಂಡ ಹಾಗೂ ಸ್ವಾತಂತ್ರ್ಯ ಭಾರತ ಹೇಗೆ ಮುನ್ನಡೆಯಲಿದೆ ಎಂದು ವಿಶ್ವ ಸಮುದಾಯವೇ ಕುತೂಹಲದಿಂದ ನೋಡುತ್ತಿದ್ದ ಕಾಲಘಟ್ಟದಲ್ಲಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು. ಸ್ವಾತಂತ್ರ್ಯ ನಂತರ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಕೊಡುಗೆ ಭವ್ಯ ಭಾರತದ ಬೆಳವಣಿಗೆಗೆ ಭದ್ರ ಬುನಾದಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಜೈ ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ಅರಸೀಕೆರೆ ತಾಲೂಕು ಘಟಕ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಜಾಜೂರು ಗ್ರಾಮದ ಶ್ರೀ ಹೊನ್ನಾಲದಮ್ಮ ದೇವಿ ದೇವಾಲಯದ ಆವರಣದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಬ್ರಿಟೀಷರ ಆಕ್ರಮಣ ನೀತಿ, ರಾಜ ಮಹಾರಾಜರ ಪ್ರಾಂತ್ಯವಾರು ಆಡಳಿತವಿದ್ದ ವಿಭಿನ್ನ ಸನ್ನಿವೇಶದಲ್ಲಿ ರೂಪುಗೊಂಡ ಹಾಗೂ ಸ್ವಾತಂತ್ರ್ಯ ಭಾರತ ಹೇಗೆ ಮುನ್ನಡೆಯಲಿದೆ ಎಂದು ವಿಶ್ವ ಸಮುದಾಯವೇ ಕುತೂಹಲದಿಂದ ನೋಡುತ್ತಿದ್ದ ಕಾಲಘಟ್ಟದಲ್ಲಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನ, ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಪ್ರಜೆವರೆಗೂ ಸಾಮಾಜಿಕ ನ್ಯಾಯ ಒಂದೇ ಎಂಬುದನ್ನು ಸಮಾನವಾಗಿ ಸಾರಿದೆ. ಇಂತಹ ಯುಗ ಪುರುಷರು ಅಂಬೇಡ್ಕರ್ ಎಂದು ಬಣ್ಣಿಸಿದರು. ೧೨ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಬಸವಣ್ಣ ಕ್ರಾಂತಿ ಮಾಡಿದರೆ, ಸ್ವಾತಂತ್ರ್ಯ ನಂತರ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಕೊಡುಗೆ ಭವ್ಯ ಭಾರತದ ಬೆಳವಣಿಗೆಗೆ ಭದ್ರ ಬುನಾದಿಯಾಗಿದೆ ಎಂದರು.

ಮಾಡಾಳು ನಿರಂಜನ ಪೀಠದ ರುದ್ರಮುನಿ ಮಹಾಸ್ವಾಮಿ, ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೀಲಾಬಾಯಿ ಚಂದ್ರಶೇಖರ್, ಜೈ ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ರಾಜ್ಯಾಧ್ಯಕ್ಷ ಡಿ ಎಸ್ ರಾಜಗೋಪಾಲ್, ಜಾಜೂರು ಗ್ರಾಮ ಪಂಚಾಯಿತಿ ಪಿಡಿಒ ಬಾಲಕೃಷ್ಣ ನಾಯ್ಕ, ಜೈ ಭೀಮ ಆರ್ಮಿ ಭಾರತ್ ಏಕತ್ ಮಿಷನ್ ತಾಲೂಕು ಅಧ್ಯಕ್ಷ ಸ್ವಾಮಿ, ಉಪಾಧ್ಯಕ್ಷ ರಘು, ಕಾರ್ಯದರ್ಶಿ ನಿಂಗರಾಜ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಿವಮೂರ್ತಿ, ಮಾಜಿ ಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ತಾಲೂಕು ಗ್ಯಾರಂಟಿ ಯೋಜನೆ ಸದಸ್ಯ ಸಿದ್ದೇಶ್, ಹಿರಿಯ ಪತ್ರಕರ್ತ ನಾಗರಾಜು ಹೆತ್ತೂರು, ಎ ಪಿ ಚಂದ್ರಯ್ಯ, ಬಾಣಾವರ ವೆಂಕಟೇಶ್, ಆನಂದ್, ವೆಂಕಟೇಶ್, ದಲಿತಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಇನ್ನಿತರ ಮುಖಂಡರು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ