ಹರಪನಹಳ್ಳಿ: ನಿಜ ಶರಣ ಅಂಬಿಗರ ಚೌಡಯ್ಯನವರು ತಮ್ಮ ಕಠೋರ ಸಾಹಿತ್ಯದ ಮೂಲಕ ಮೌಢ್ಯ ಹಾಗೂ ಡಂಬಾಚಾರಗಳನ್ನು ಖಂಡಿಸಿ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದು ನ್ಯಾಯವಾದಿ ಕಣವಿಹಳ್ಳಿ ಮಂಜುನಾಥ ತಿಳಿಸಿದ್ದಾರೆ.
ಮಹಾ ಯೋಗಿ ವೇಮನ ಕುರಿತು ಮಾತನಾಡಿದ ಜಿಪಂ ಮಾಜಿ ಸದಸ್ಯ ಗಿರಿರಾಜರೆಡ್ಡಿ ಅವರು ವೇಮನ ಅವರು ಆಂಧ್ರ ಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರರಾಗಿದ್ದು, ಕವಿ, ಸಮಾಜ ಚಿಂತಕ, ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು ಎಂದರು.
ಬಸವಣ್ಣನವರ ಕಾಯಕ ದಾಸೋಹದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ ಜನರಲ್ಲಿ ಅರಿವಿನ ಬೀಜ ಬಿತ್ತಿದರು ಎಂದು ಹೇಳಿದರು.ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಅಂಬಿಗರ ಚೌಡಯ್ಯ ಹಾಗೂ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಈ ಇಬ್ಬರೂ ದರ್ಶನಿಕರು ಸಮ ಸಮಾಜದ ನಿರ್ಮಾಣಕ್ಕೆ ತಮ್ಮ ವಚನಗಳ ಮೂಲಕ ಶ್ರಮಿಸಿದರು. ಅವರ ತತ್ವ ಸಿದ್ಧಾಂತಗಳನ್ನು ಸ್ವಲ್ಪವಾದರೂ ಅಳವಡಿಸಿಕೊಂಡರೆ ಜೀವನ ಸಾರ್ಥಕ ಎಂದು ತಿಳಿಸಿದರು.
ವೇದ ವ್ಯಾಸ ಟ್ರಸ್ಟ್ ಅಧ್ಯಕ್ಷ ಕೆ.ಸಿ. ಗಂಗಾಧರ, ಜಿಪಂ ಮಾಜಿ ಸದಸ್ಯ ಗಿರಿರಾಜರೆಡ್ಡಿ, ಗಂಗಾಮತ ಸಮಾಜದ ಮುಖಂಡರಾದ ಬಿ. ಮಂಜುನಾಥ, ಶಿಕ್ಷಕ ಬಿ. ರಾಜಶೇಖರ, ಶಿವಾನಂದಪ್ಪ, ಚಿಗಟೇರಿ ಸುರೇಶ ಬಾರ್ಕಿ, ಜಾಲಗಾರ ಕೊಟ್ರೇಶ, ಪವಾಡಿ ದೇವೇಂದ್ರಪ್ಪ, ಬಾವಿಹಳ್ಳಿ ಚಂದ್ರಪ್ಪ, ಮತ್ತಿಹಳ್ಳಿ ಸಣ್ಣ ನಿಂಗಪ್ಪ, ಶಿವಾನಂದಪ್ಪ, ಕೊಂಗನಹೊಸೂರು ಮಾಲತೇಶ, ಪವಾಡಿ ಬಸವರಾಜ, ಬಿಜೆಪಿ ಯುವ ಮುಖಂಡ ರವಿ, ಅರಸನಾಳು ಜಿ.ಬಸವರಾಜ, ವಿಜಯಲಕ್ಷ್ಮೀ, ಸುಧಾ, ಪ್ರಶಾಂತ, ಇಸ್ಮಾಯಿಲ್ ಎಲಿಗಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.