ಅಂಬಿಕಾ ವಿದ್ಯಾಲಯ: ಶ್ಲೋಕಭಾರತೀ ಸ್ಪರ್ಧೆ ಉದ್ಘಾಟನೆ

KannadaprabhaNewsNetwork |  
Published : Nov 19, 2025, 01:45 AM IST
ಫೋಟೋ: ೧೫ಪಿಟಿಆರ್-ಫೆಲಿಸಿಟೇಶನ್ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವತಿಯಿಂದ ಶನಿವಾರ ಮೂರು, ನಾಲ್ಕು ಹಾಗೂ ಐದು ವರ್ಷದ ಪುಟಾಣಿಗಳಿಗಾಗಿ ಶ್ಲೋಕ ಭಾರತೀ ಎಂಬ ಶ್ಲೋಕ ಕಂಠಪಾಠ ಸ್ಪರ್ಧೆ ನೆರವೇರಿತು.

ಪುತ್ತೂರು: ವಿದ್ಯಾರ್ಜನೆ ಎಂಬುದು ಹಣ ಗಳಿಸುವುದಕ್ಕೆ ಇರುವ ವ್ಯವಸ್ಥೆ ಎಂದು ಭಾವಿಸಬಾರದು. ಜ್ಞಾನವನ್ನು ಹೊಂದಿ ಅದನ್ನು ದೇಶದ ಉನ್ನತಿಕೆಗಾಗಿ ಬಳಸುವ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಮೂಡಬೇಕಿದೆ. ಈ ಹಿನ್ನೆಲೆಯಲ್ಲಿ ಹೆತ್ತವರು ಮಕ್ಕಳ ಉತ್ಕೃಷ್ಟ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಬೇಕಾದ ಅಗತ್ಯವಿದೆ ಎಂದು ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವತಿಯಿಂದ ಶನಿವಾರ ಮೂರು, ನಾಲ್ಕು ಹಾಗೂ ಐದು ವರ್ಷದ ಪುಟಾಣಿಗಳಿಗಾಗಿ ಆಯೋಜಿಸಿದ ಶ್ಲೋಕ ಭಾರತೀ ಎಂಬ ಶ್ಲೋಕ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಿಲೆಯೊಂದು ಶಿಲ್ಪಿಯ ಕೈಚಳಕದಿಂದ ಮೂರ್ತಿಯಾಗಿ ಪರಿವರ್ತಿತವಾದರೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಆ ಶಿಲ್ಪದಲ್ಲಿ ಜೀವಕಳೆಯನ್ನು ತುಂಬಿದಾಗ ಪೂಜೆಗೆ ಅರ್ಹವೆನಿಸುತ್ತದೆ. ಹಾಗೆಯೇ ಮಕ್ಕಳಿಗೆ ಕೇವಲ ವಿದ್ಯೆ ಕೊಟ್ಟಾಗ ವ್ಯಕ್ತಿ ರೂಪುಗೊಂಡರೂ ವ್ಯಕ್ತಿತ್ವ ರೂಪುಗೊಳ್ಳುವಂತಹ ಸತ್ವವನ್ನು ಶಿಕ್ಷಣದೊಂದಿಗೆ ಒದಗಿಸಿಕೊಡಬೇಕಾಗಿದೆ. ಸನಾತನ ಸಂಸ್ಕೃತಿ, ಆಚಾರ ವಿಚಾರಗಳ ಬಗೆಗೆ ಮಕ್ಕಳಲ್ಲಿ ಅರಿವು ಮೂಡಿಸಿದಾಗ ಆ ಮಕ್ಕಳಲ್ಲಿ ಜೀವಕಳೆ ಮೂಡಿ ಗೌರವಾರ್ಹರೆನಿಸುತ್ತಾರೆ ಎಂದು ನುಡಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಅನಂತನಾರಾಯಣ ಭಟ್ ಪರಕ್ಕಜೆ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕಿ ಗೌರಿ ಸ್ವಾಗತಿಸಿದರು. ಶಿಕ್ಷಕ ಹೇಮಂತ್ ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ