ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಗರದ ಐಬಿಎಂಆರ್ ಕಾಲೇಜಿನ ಸಭಾಭವನದಲ್ಲಿ ಇತ್ತೀಚಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕ ಹಾಗೂ ಹೂಬಳ್ಳಿ ಲೇಖಕಿಯರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಬಂಧ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂಗ್ಲಿಷ್ ಮೂಲದ ಎಸ್ಸೆ ಕನ್ನಡದ ಸಾಹಿತ್ಯ ಪ್ರಕಾರದಲ್ಲಿ ತನ್ನದೇ ಆದ ಸ್ವಂತಿಕೆಯನ್ನು ರೂಪಿಸಿಕೊಂಡಿದೆ. ಪ್ರಬಂಧವೆಂಬುದು ಒಂದು ಜಿಜ್ಞಾಸೆ, ಬದುಕಿನ ಸಮಗ್ರತೆಯನ್ನು ನೋಡುವ ವಿಧಾನವೂ ಹೌದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಪ್ರಬಂಧ ಸಾಹಿತ್ಯಕ್ಕೆ 200 ವರ್ಷಗಳ ಇತಿಹಾಸವಿದೆ, ನವೋದಯದ ಎಲ್ಲ ಪ್ರಸಿದ್ಧ ಸಾಹಿತಿಗಳೂ ಈ ಪ್ರಕಾರದಲ್ಲಿ ತಮ್ಮ ಸಾಹಿತ್ಯ ಕೃಷಿ ಕೈಗೊಂಡಿದ್ದಾರೆ ಎಂದರು.
ವಿಷಯದ ಕೇಂದ್ರ ಬಿಂದುವಿನ ಸುತ್ತ ಸಾಗುವಾಗ ಒಂದು ವಿಧದ ಬಿಗಿತಗಳನ್ನು ಉಳಿಸಿಕೊಂಡಾಗ ಒಳ್ಳೆಯ ಪ್ರಬಂಧ ರಚನೆಯಾಗುತ್ತದೆ. ಈ ಪ್ರಬಂಧವೆಂಬುದು ವಿಷಯಗಳ ಗಟ್ಟಿ ಬಂಧದ ಜೊತೆಗೆ ಹಿತವಾದ ಲಾಲಿತ್ಯ ಮೈಗೂಡಿಸಿಕೊಂಡ ವಿಶಿಷ್ಠವಾದ ಸಾಹಿತ್ಯ ಪ್ರಕಾರ ಎಂದರು.
ಅಂಕಣಕಾರ ಪ್ರಶಾಂತ ಆಡೂರ ಅವರು, ತಮ್ಮ ಹರಟೆ ಮಾದರಿಯ ಪ್ರಬಂಧಗಳನ್ನು ಓದುವುದರ ಮೂಲಕ, ಪ್ರಬಂಧ ವಿಷಯ ವಸ್ತು ಮತ್ತೂ ರಚನಾ ಕೌಶಲ್ಯದ ಪರಿಚಯ ಮಾಡಿಕೊಟ್ಟರು. ನಂತರ ಕಮ್ಮಟದಲ್ಲಿ ಭಾಗವಹಿಸಿದ್ದವರ ಜೊತೆ ಸಂವಾದ ನಡೆಯಿತು. ಸಮಾಜ ಸೇವಕ ಗುರುರಾಜ ಕೌಜಲಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹುಬ್ಬಳ್ಳಿ ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಷ ಕಟ್ಟೀಮನಿ, ಕನ್ನಡ ಕಟ್ಟಾಳು ವೆಂಕಟೇಶ ಮರಗುದ್ದಿ, ಜೀವಿ ಕಲಾ ಬಳಗದ ಗದಿಗೆಯ್ಯ ಹಿರೇಮಠ, ರವಿ ಕಮಡೊಳ್ಳಿ, ಸಂಧ್ಯಾ ದೀಕ್ಷಿತ್, ಮಾಧವಿ ಕುಲಕರ್ಣಿ, ವೀಣಾ ಬರಗಿ, ಸುನಂದಾ ಶ್ಯಾಗೋಟಿ, ಲತಾ ಹೆಗಡೆ, ವಿರೂಪಾಕ್ಷ ಕಟ್ಟೀಮನಿ, ಆರ್.ಎಂ. ಗೋಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.