ಕನ್ನಡಪ್ರಭ ವಾರ್ತೆ ಇಳಕಲ್ಲ

ಬೆಳೆಯುತ್ತಿರುವ ಇಳಕಲ್ಲ ನಗರದಲ್ಲಿ ಬಸ್ ನಿಲ್ದಾಣ ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ. ಆದರೆ ಸರಿಯಾದ ಮೂಲ ಸೌಕರ್ಯಗಳು ಇಲ್ಲದೆಮ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಿಂದ ಪ್ರತಿನಿತ್ಯ ೩೦ ಸಾವಿರ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ ಎಂಬ ಅಂದಾಜಿದೆ. ಆದರೆ ಸರಿಯಾದ ಸಮಯಕ್ಕೆ ಬಸ್‌ಗಳು ಬರಲ್ಲ. ಕುಳಿತುಕೊಳ್ಳಲು ಸರಿಯಾದ ಆಸನಗಳಿಲ್ಲದೆ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳವಂತಾಗಿದೆ. ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದಿರುವುದರಿಂದ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೆ ಬಸ್‌ಗಾಗಿ ಕಾಯುತ್ತ ನಿಲ್ಲುವಂತಾಗಿದೆ.

ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಗಮನ ಕೊಡದೇ ಇರುವುದರಿಂದ ಬಸ್ ನಿಲ್ದಾಣ ಗಲೀಜಾಗಿದೆ. ಪ್ರತಿನಿತ್ಯ ಸಹಸ್ರಾರು ಪ್ರಯಾಣಿಕರು ಪ್ರಯಾಣಿಸುವ ಬಸ್‌ ನಿಲ್ದಾಣದಲ್ಲಿ ಕೇವಲ ಮೂತ್ರಿಗಳು ಇರುವುದರಿಂದ ಅಲ್ಲಿಯೂ ಸರದಿಯಲ್ಲಿ ನಿಲ್ಲಬೇಕಿದೆ. ಇವುಗಳಿಗೆ ಛಾವಣಿಯೂ ಇಲ್ಲದಿರುವುದರಿಂದ ಮಳೆ,ಬಿಸಿಲಲ್ಲಿ ಸರದಿ ನಿಂತು ಕಾಯುವಂತಾಗಿದೆ. ಇದ್ದರೆ ಸಹ ಪ್ರಯಾಣಿಕರು ಮಳೆ ಬಿಸಲಿನಲ್ಲಿ ನಿಂತು ಮೂತ್ರ ಮಾಡಬೇಕಿದೆ. ಮಹಿಳೆಯರು ಸಹ ಮೂತ್ರ ವಿಸರ್ಜನೆ ಮಾಡಲು ₹5 ಕೊಡಬೇಕಿದೆ.

ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸೂಚನೆ ನೀಡುವ ಬದಲು ನಿಲ್ದಾಣಕ್ಕೆ ಬಂದು ಖುದ್ದಾಗಿ ವ್ಯವಸ್ಥೆ ಪರಿಶೀಲಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಬಾಗಲಕೋಟೆಗೆ ಆಸ್ಪತ್ರೆಗೆ ಹೋಗಲು ಸರಿಯಾದ ಬಸ್ ಸೌಲಭ್ಯ ಇಲ್ಲ. ಬೆಳಗ್ಗೆ ಬಾಗಲಕೋಟೆಗೆ ೧೫ ನಿಮಿಷಕ್ಕೊಂದು ಬಸ್ಬಾ ಬಿಡಬೇಕು. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹೆಚ್ಚಿನ ಆಸನ ವ್ಯವಸ್ಥೆ ಮಾಡಬೇಕು.


- ಶಂಕರ ಮಡಿವಾಳರ ಪ್ರಯಾಣಿಕರು

ಇಳಕಲ್ಲ ಬಸ್ ನಿಲ್ದಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಬರುತಿದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಇಲ್ಲಿನ ಎಲ್ಲ ಸಮಸ್ಯೆ ಬಗ್ಗೆ ಪತ್ರ ಬರೆದು ಪರಿಹಾರ ಮಾಡಲು ವಿನಂತಿಸಿರುವೆ.

- ಬಿರಾದಾರ ಡಿಪೋ ಮ್ಯಾಜೇಜರ್‌