ಕಾಶ್ಮೀರ ಸ್ಥಿತಿ ನೆನಪಿಸುವಂಥ ಭೀತಿ ವಾತಾವರಣ

KannadaprabhaNewsNetwork |  
Published : Sep 27, 2025, 12:00 AM IST
26ಕೆಡಿವಿಜಿ5, 6-ದಾವಣಗೆರೆಯಲ್ಲಿ ಗುರುವಾರ ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕ್ರಿಮಿನಲ್ ಹಿನ್ನೆಲೆಯ, ಮತೀಯ ಗೂಂಡಾಗಳು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿ, ಮನೆಗಳಿಗೆ ನುಗ್ಗಿ ಮಕ್ಕಳು, ಮಹಿಳೆಯರು, ವೃದ್ಧರು, ಪುರುಷರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ಕಾಶ್ಮೀರ ಘಟನೆಗಳ ಸಿನಿಮಾ ನೆನಸುವಂತಹ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗ ಸ್ವಾಮಿ ದಾವಣಗೆರೆಯಲ್ಲಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ಇಲ್ಲಿಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕ್ರಿಮಿನಲ್ ಹಿನ್ನೆಲೆಯ, ಮತೀಯ ಗೂಂಡಾಗಳು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿ, ಮನೆಗಳಿಗೆ ನುಗ್ಗಿ ಮಕ್ಕಳು, ಮಹಿಳೆಯರು, ವೃದ್ಧರು, ಪುರುಷರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ಕಾಶ್ಮೀರ ಘಟನೆಗಳ ಸಿನಿಮಾ ನೆನಸುವಂತಹ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗ ಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ತುಷ್ಟೀಕರಣ ಮಾತುಗಳಿಂದಾಗಿ ಹಿಂದೂಗಳು ಕಡಿಮೆ ಜನಸಂಖ್ಯೆ ಇರುವ ಕಡೆಗಳಲ್ಲಿ ಹಿಂದೂ ಕುಟುಂಬಗಳು ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ್ಯಾರೂ ಮತಗಳನ್ನೇ ಹಾಕಿಲ್ಲವೇ? ಯುವತಿಗೂ ಹಲ್ಲೆ ಮಾಡಿ, ಪೋಲ್ಸ್‌ಗಳಿಂದ ಹೊಡೆದು, ಕಾಲುಗಳಿಂದ ತುಳಿದಿದ್ದಾರೆ. ಕುಟುಂಬಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರು ಆಕೆಯ ಸಹೋದರನನ್ನೇ ಬಂಧಿಸಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲಾಡಳಿತ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಕೇಸ್ ಹಿಂಪಡೆದಿದ್ದೇ ನಗರ, ಜಿಲ್ಲೆ, ರಾಜ್ಯದಲ್ಲಿ ಮುಸ್ಲಿಂ ಗೂಂಡಾಗಳ ಅತಿರೇಕವಾಗಿ ವರ್ತಿಸಲು ಕಾರಣವಾಗಿದೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮತಾಂಧರ ಅಟ್ಟಹಾಸ ಖಂಡನೀಯ. ಐ ಲವ್ ಮಹಮ್ಮದ್ ಎಂಬ ಬ್ಯಾನರ್ ಹಾಕಿದಾಗ ಹಿಂದೆ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಇದು ಸ್ವತಃ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಅರಿವಿರುವ ವಿಚಾರ ಎಂದು ಹೇಳಿದರು.

ಹಿಂದೂಗಳ ರಕ್ಷಣೆಗೆ ನಿಲ್ಲದ್ದು ಇಲಾಖೆ ವೈಫಲ್ಯ ತೋರಿಸುತ್ತದೆ. ಸಂತ್ರಸ್ಥ ಹಿಂದೂಗಳಿಗೆ ಸಾಂತ್ವನ ಹೇಳಲು ಸ್ಥಳಕ್ಕೆ ತೆರಳಿದ್ದ ಹಿಂದೂ ಕಾರ್ಯಕರ್ತರಿಗೆ ಪೊಲೀಸರು ಬೆದರಿಸಿ ಕಳಿಸಿದ್ದಾರೆ. ಕಲ್ಲು ತೂರಾಟ ಮಾಡಿದವರ ಮುಂದೆ ಯಾಕೆ ಇಷ್ಟು ಧೈರ್ಯ ತೋರಲಿಲ್ಲ? ಹಿಂದೂಗಳ ಮನೆಗಳ ಮೇಲೆ ಕಲ್ಲುಗಳು ಬಿದ್ದಿದ್ದರೂ, ನೀವೇ ಸುಮ್ಮನೇ ಇದನ್ನೆಲ್ಲಾ ಸೃಷ್ಟಿ ಮಾಡುತ್ತಿದ್ದೀರಿ ಅಂತಾ ನಮ್ಮ ಕಾರ್ಯಕರ್ತರನ್ನೇ ಪೊಲೀಸ್ ಅಧಿಕಾರಿಗಳು ದಬಾಯಿಸಿದ್ದಾರೆ. ಘಟನೆ ಬಗ್ಗೆ ಮುಸ್ಲಿಂ ಸಮಾಜದ ಜವಾಬ್ದಾರಿ ಏನು? ಅಲ್ಲಿರುವ ಕೆಲವೇ ಹಿಂದೂಗಳನ್ನು ಒಕ್ಕಲೆಬ್ಬಿಸಿ, ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವುದಕ್ಕೆ ಈ ಘಟನೆ ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ವಿಚಾರಕ್ಕೆ ಜಿಲ್ಲಾ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹಿಂದೂ ಕಾರ್ಯಕರ್ತರಿಗೆ ಹೀಯಾಳಿಸಿದ್ದರು. ಈಗ ಕಾರ್ಲ್ ಮಾರ್ಕ್ಸ್ ನಗರದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಕೇಳಲು ಇಡೀ ಹಿಂದೂ ಸಮಾಜ ಕಾಯುತ್ತಿದೆ. ಹಿಂದೂ ಕಾರ್ಯಕರ್ತ ಸತೀಶ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಲು ತೋರಿಸುವ ಜಾಣ್ಮೆ, ಅವಸರ, ಪ್ರಾಮಾಣಿಕತೆ ಮುಸ್ಲಿಂ ರೌಡಿ ಲಾಂಗ್‌ ಹಿಡಿದು, ಆನೆಕೊಂಡ ಭಾಗದಲ್ಲಿ ಸುತ್ತಾಡಿದರೂ ಯಾಕೆ ಕ್ರಮ ಕೈಗೊಂಡಿಲ್ಲ? ಸತೀಶ ಪೂಜಾರಿಗೆ ಅವಹೇಳನಾಕಾರಿಯಾಗಿ ಮಾತನಾಡಿದ ಮುಸ್ಲಿಂ ಗೂಂಡಾ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದಲಿಂಗ ಸ್ವಾಮಿ ಪ್ರಶ್ನಿಸಿದರು.

ಸಮಿತಿ ಹಿರಿಯ ಮುಖಂಡ ವಿನಾಯಕ ರಾನಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಮೇಯರ್ ಗಳಾದ ಎಸ್.ಟಿ. ವೀರೇಶ, ಬಿ.ಜಿ.ಅಜಯಕುಮಾರ, ಧನಂಜಯ ಕಡ್ಲೇಬಾಳು, ಸಿ.ಅನಿಲಕುಮಾರ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ ಇತರರು ಇ್ದರು.

- - - -26ಕೆಡಿವಿಜಿ5, 6:

ದಾವಣಗೆರೆಯಲ್ಲಿ ಗುರುವಾರ ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ