ಮೊಬೈಲ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

KannadaprabhaNewsNetwork |  
Published : Feb 05, 2026, 04:30 AM IST
ಲೋಕಾಪುರ | Kannada Prabha

ಸಾರಾಂಶ

ಬಸ್‌ನಲ್ಲಿ ಬಿಟ್ಟು ಹೋದ ₹೫೦ ಸಾವಿರ ಮೌಲ್ಯದ ಮೊಬೈಲ್‌ನ್ನು ಬಸ್ ಚಾಲಕ ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಬಸ್‌ನಲ್ಲಿ ಬಿಟ್ಟು ಹೋದ ₹೫೦ ಸಾವಿರ ಮೌಲ್ಯದ ಮೊಬೈಲ್‌ನ್ನು ಬಸ್ ಚಾಲಕ ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಸರಕಾರಿ ಬಸ್ ಡಿಪೋದ ಕೆಎಸ್ಸಾರ್ಟಿಸಿ ಬಸ್‌ ಚಾಲಕ ಶರಣಯ್ಯ ಗಡ್ಡಿಮಠ ಪ್ರಾಮಾಣಿಕತೆ ಮೆರೆದ ಚಾಲಕ. ಬಾಗಲಕೋಟೆಯಿಂದ ಪೂನಾಗೆ ಹೋರಟಿದ್ದ ಬಸ್‌ನಲ್ಲಿ ಪ್ರಯಾಣಿಕ ಮಿರಜ್‌ನಲ್ಲಿ ಇಳಿಯುವ ಆತುರದಲ್ಲಿ ಮೊಬೈಲ್‌ನ್ನು ಬಸ್‌ನಲ್ಲೇ ಮರೆತು ಹೋಗಿದ್ದರು. ಬಸ್ ನಿಲುಗಡೆ ಮಾಡುವ ಸಮಯದಲ್ಲಿ ನಿರ್ವಾಹಕ ಶರಣಯ್ಯಮತ್ತು ಎಂ.ಎನ್. ಮುಜಾವರ ಅವರ ಕೈಗೆ ಈ ಮೊಬೈಲ್ ಸಿಕ್ಕಿದೆ. ತಕ್ಷಣ ಬಾಗಲಕೋಟೆ ಡಿಪೋ ಮ್ಯಾನೇಜರ್ ಗಮನಕ್ಕೆ ತಂದಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಮೊಬೈಲ್ ಕರೆ ಮಾಡಿ ಮೊಬೈಲ್ ಕಳೆದುಕೊಂಡ ಪಯಾಜ್‌ ಹಳ್ಳದಮನಿ ಅವರನ್ನು ಕರೆಸಿ ಬಾಗಲಕೋಟೆ ವಿಭಾಗದ ಘಟಕದಲ್ಲಿ ಮೊಬೈಲ್‌ ಹಸ್ತಾಂತರಿಸಿದರು. ಈ ವೇಳೆ ಬಾಗಲಕೋಟೆ ವಿಭಾಗದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಕೆ. ಆರ್. ಚವ್ಹಾಣ, ನೌಕರರಾದ ಶರಣಯ್ಯ ಗಡ್ಡಿಮಠ, ಎಂ.ಎನ್. ಮುಜಾವರ, ಆನಂದ ಭಜಂತ್ರಿ, ಶರಣು ಬಡ್ಡಿ, ವಿ.ಎಸ್. ಗುಗ್ಗರಿ ಮತ್ತು ಮೊಬೈಲ್ ವಾರಸ್ಥಾರ ಪಯಾಜ ಹಳ್ಳದಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ