ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ತಾಲೂಕು ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಮಹಾಸಭೆಯ ಅಧಿವೇಶನದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.
ನೌಕರರು ಸೇವೆಯಿಂದ ನಿವೃತ್ತರಾದ ನಂತರ ಸಹಜವಾಗಿ ಪರಸ್ಪರ ಅಪರಿಚಿತರಂತೆ ಇರುತ್ತಾರೆ. ನಿವೃತ್ತಿಯ ಅವಧಿಯಲ್ಲಿ ತಮ್ಮ ಮಾನಸಿಕ ನೋವುಗಳನ್ನು ಹಂಚಿಕೊಳ್ಳಲು ಒಬ್ಬರಿಗೆ ಮತ್ತೊಬ್ಬರು ಸಹಕಾರಿಯಾಗಲು ಸಂಘಟನೆಗಳ ಅವಶ್ಯಕತೆ ಇರುತ್ತವೆ. ನಿವೃತ್ತಿಯ ನಂತರ ಅನೇಕ ನೌಕರರು ತಮ್ಮ ವೈಯಕ್ತಿಕ ಜೀವನದಲ್ಲಿ ಕುಟುಂಬದ ಸದಸ್ಯರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವ ನಿದರ್ಶನಗಳು ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ ಬಿ ಮಾದಮಯ್ಯ ಅವರು ಸರ್ಕಾರ ನಿವೃತ್ತ ನೌಕರರಿಗೆ ಕೊಡಮಾಡುವ ಸೌಲಭ್ಯಗಳು ಮತ್ತು ಪಿಂಚಣಿಯಲ್ಲಿ ಆಗುವ ವ್ಯತ್ಯಾಸಗಳನ್ನು ಪಡೆದುಕೊಳ್ಳುವ ಬಗೆ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.ಸಂಘದ ಸ್ಥಾಪಕ ಸದಸ್ಯ ಹಾಗೂ ಸಲಹೆಗಾರ, ನಿವೃತ್ತ ಮುಖ್ಯ ಶಿಕ್ಷಕ ಎಂ.ಎಚ್. ನಜೀರ್ ಅಹ್ಮದ್ ಉದ್ಘಾಟಿಸಿದರು.ಸಂಘದ 2025-26 ಮೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಮೊಣ್ಣಪ್ಪ ವಹಿಸಿದ್ದರು.
ಮೃತ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 21 ನಿವೃತ್ತ ನೌಕರರನ್ನು ಗೌರವಿಸಲಾಯಿತು.ಹಿರಿಯ ಸದಸ್ಯರಾದ ಬಾಚರಣೆಯಂಡ ಅಪ್ಪಣ್ಣ, ನಿರ್ದೇಶಕರಾದ ಎಂ ಎಚ್ ಫಝುಲುಲ್ಲಾ, ಬಿ ಕೆ ಕಾಳಯ್ಯ, ಎಂ ಎಸ್ ಗಣೇಶ್, ಶಬ್ಬೀರ್ ಬಾಷಾ ಮತ್ತಿತರರು ಇದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ. ಶಾಂತ ಲಕ್ಷ್ಮಿ, ಸಂಘದ ಖಜಾಂಜಿ ವಿ. ಆರ್. ಹೆಗಡೆ ಮತ್ತು ನಿರ್ದೇಶಕರಾದ ಎಂ. ಎಸ್. ಗಣೇಶ್ ನಿರ್ವಹಿಸಿದರು.