ಪುರಾತನ ಸ್ಮಾರಕಗಳು ನಮ್ಮ ಸಂಸ್ಕೃತಿಯ ಪ್ರತೀಕ

KannadaprabhaNewsNetwork | Published : Dec 6, 2024 8:59 AM

ಸಾರಾಂಶ

ಪುರಾತನ ಸ್ಮಾರಕಗಳು ನಮ್ಮ ಹಿರಿಯರ ಸಾಧನೆಗಳ ಹೆಜ್ಜೆ ಗುರುತುಗಳು. ಪುರಾತನ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯಕ್ರಮವೇ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದ ಉದ್ದೇಶವಾಗಿದೆ

ಲಕ್ಷ್ಮೇಶ್ವರ: ಪುರಾತನ ಸ್ಮಾರಕಗಳು ನಮ್ಮ ಸಂಸ್ಕೃತಿ, ಇತಿಹಾಸ ಸಾರುವ ಹೆಗ್ಗುರುತುಗಳಾಗಿದ್ದು, ಅವುಗಳನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಅಭಿಮತ ವ್ಯಕ್ತಪಡಿಸಿದರು.

ಅವರು ಲಕ್ಷ್ಮೇಶ್ವರದ ಪುರಾತನ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪುರಾತನ ಸ್ಮಾರಕಗಳು ನಮ್ಮ ಹಿರಿಯರ ಸಾಧನೆಗಳ ಹೆಜ್ಜೆ ಗುರುತುಗಳು. ಪುರಾತನ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯಕ್ರಮವೇ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದ ಉದ್ದೇಶವಾಗಿದೆ, ಡಾ. ಸುಧಾಮೂರ್ತಿ ಪಟ್ಟಣದ ಈ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ ಜೀರ್ಣೊದ್ಧಾರಗೊಳಿಸಿರುವುದರಿಂದ ಅನೇಕ ಮಹತ್ವದ ವಿಷಯಗಳು ತಿಳಿಯುವಂತಾಯಿತು, ಪುರಾತನ ಸ್ಮಾರಕಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿವೆ. ಅವುಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದು ಕರೆ ನೀಡಿದರು.

ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಕೋಶಾಧ್ಯಕ್ಷ ಚೆನ್ನಪ್ಪ ಜಗಲಿ ಮಾತನಾಡಿ, ನಮ್ಮ ಹಿರಿಯರ ಸಂಸ್ಕೃತಿ ಸಂಪ್ರದಾಯ ಆಧುನಿಕತೆಯ ನೆಪದಲ್ಲಿ ದೂರ ಇಡುತ್ತಿದ್ದೇವೆ. ಇದು ಸೂಕ್ತವಲ್ಲ. ನಮ್ಮ ಸಂಸ್ಕೃತಿಗಳನ್ನು ನಾವು ಮರೆಯಬಾರದು. ಸೋಮೇಶ್ವರ ದೇವಸ್ಥಾನ ಸಹಸ್ರ ವರ್ಷಗಳಿಂದ ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆಗೆ ಸಾಕ್ಷಿಯಾಗಿ ನಿಂತಿದೆ ಎಂದರು.

ಪುರಸಭಾ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು. ಸೋಮೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಮುಳಗುಂದ ಮಾತನಾಡಿದರು. ಪುರಸಭಾ ಸದಸ್ಯರಾದ ಶೋಭಾ ಮೆಣಸಿನಕಾಯಿ, ಪ್ರೌಢಶಾಲಾ ಮುಖ್ಯೋಪಾಧ್ಯಯ ವೈ.ಬಿ.ಜಿಗಳೂರ, ಬಿ.ಸಿ. ಪಟ್ಟೇದ, ಎಲ್.ಎ. ನಡುವಿನಮನಿ, ಸುರೇಶ ರಾಚನಾಯ್ಕರ, ಬಸವರಾಜ ಮೆಣಸಿನಕಾಯಿ, ಜಿ.ಎಸ್.ಗುಡಗೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ತಾಲೂಕು ನೋಡಲ್ ಅಧಿಕಾರಿ ಈಶ್ವರ ಮಡ್ಲೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಗೊಜನೂರಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಜಿ.ಎಸ್.ಗುಡಗೇರಿ ವಂದಿಸಿದರು.ಲಕ್ಷ್ಮೇಶ್ವರ ಉತ್ತರ ವಲಯದ ಸಿ.ಆರ್.ಪಿ ಉಮೇಶ ನೇಕಾರ ನಿರೂಪಿಸಿದರು.

ಶಿಕ್ಷಕ ಬಿ.ಎಸ್.ಕೊಪ್ಪದ, ಎಂ.ಜಿ.ಬಡಿಗೇರ, ನಾಗರಾಜ ಮಜ್ಜಿಗುಡ್ದ, ಉಮೇಶ ನೇಕಾರ, ಜಿ.ಎಸ್. ಗುಡಗೇರಿ, ವಿ.ಜಿ. ಜೋಗೋಜಿ ನಿರ್ಣಾಯಕರಾಗಿ ಭಾಗವಹಿಸಿದ್ದರು. ೨೩ ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಬಾಕ್ಸ್- ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳು.

ಪ್ರಬಂಧ ಸ್ಪರ್ಧೆ: ಲಕ್ಷ್ಮಿ ದೊಡ್ಡಗೌಡರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಗೊಜನೂರ (ಪ್ರಥಮ), ಸಮೀಕ್ಷಾ ಅಂಗಡಿ ಸರ್ಕಾರಿ ಪ್ರೌಢಶಾಲೆ ಯಲ್ಲಾಪುರ (ದ್ವಿತಿಯ), ಅಮೃತ ಹುಬ್ಬಳ್ಳಿ ಭೀಮರಡ್ಡಿ ಅಳವಂಡಿ ಕೆಪಿಎಸ್ ಬೆಳ್ಳಟ್ಟಿ (ತೃತೀಯ).

ಭಾಷಣ ಸ್ಪರ್ಧೆ: ರೇಖಾ ಬಾಕಳೆ ಸರ್ಕಾರಿ ಪ್ರೌಢಶಾಲೆ,ಲಕ್ಷ್ಮೇಶ್ವರ (ಪ್ರಥಮ), ವೀಣಾ ವಡ್ಡಟ್ಟಿ, ಭೀಮರಡ್ಡಿ ಅಳವಂಡಿ ಕೆಪಿಎಸ್ ಬೆಳ್ಳಟ್ಟಿ (ದ್ವಿತೀಯ), ಪೂರ್ಣಿಮಾ ಸೂರಣಗಿ, ಅನ್ನದಾನೇಶ್ವರ ಪ್ರೌಢಶಾಲೆ ಬನ್ನಿಕೊಪ್ಪ (ತೃತಿಯ)

ರಸಪ್ರಶ್ನೆ ಸ್ಪರ್ಧೆ: ಎನ್‌ಜಿಪಿ ಸರ್ಕಾರಿ ಪ್ರೌಢಶಾಲೆ,ಮಾಡಳ್ಳಿ (ಪ್ರಥಮ), ಭೀಮರಡ್ಡಿ ಅಳವಂಡಿ ಕೆಪಿಎಸ್ ಬೆಳ್ಳಟ್ಟಿ (ದ್ವಿತೀಯ), ಸರ್ಕಾರಿ ಪ್ರೌಢಶಾಲೆ ಗೊಜನೂರು(ತೃತೀಯ).

ಚಿತ್ರಕಲಾ ಸ್ಪರ್ಧೆ: ಉಮೇಶ ಪೂಜಾರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಒಡೆಯರ ಮಲ್ಲಾಪುರ(ಪ್ರಥಮ), ದೇವಿಪ್ರಸಾದ ಕುದುರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಗೊಜನೂರು(ದ್ವಿತೀಯ), ಯಶವಂತ ಬಡಿಗೇರ ಸರ್ಕಾರಿ ಪ್ರೌಢಶಾಲೆ ಮಾಡಳ್ಳಿ (ತೃತೀಯ)

Share this article