ಮಕ್ಕಳ ಭವಿಷ್ಯಕ್ಕೆ ಅಂಗನವಾಡಿ ಬುನಾದಿ: ಕರೆಮ್ಮ ನಾಯಕ

KannadaprabhaNewsNetwork |  
Published : Mar 11, 2024, 01:17 AM IST
09ಕೆಪಿಡಿವಿಡಿ01: | Kannada Prabha

ಸಾರಾಂಶ

ಅಂಗನವಾಡಿ ಕಾರ್ಯಕರ್ತೆಯರು ಎರಡನೇ ಆರೋಗ್ಯ ವೈದ್ಯರಂತೆ ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿಯ ಹಿಂದೆ ಕಾರ್ಯಕರ್ತರು ಎಲೆಮರೆಕಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ದೇವದುರ್ಗ ಪಟ್ಟಣದ ಪಾಟೀಲ್ ಓಣಿಯ ಶಾಲಾವರಣದಲ್ಲಿ ಅಂಗನವಾಡಿ ಕೇಂದ್ರವನ್ನು ಶಾಸಕಿ ಕರೆಮ್ಮ ಜಿ.ನಾಯಕ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದೇವದುರ್ಗಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿ ಪ್ರಾಥಮಿಕ ಮತ್ತು ಪೂರ್ವ ಶಿಕ್ಷಣ ಶೈಕ್ಷಣಿಕ ಜೀವನದ ಬುನಾದಿಯಾಗಿದ್ದು ಮಕ್ಕಳ ಭವ್ಯ ಭವಿಷ್ಯ ರೂಪಿಸುವ ಅಂಗನವಾಡಿ ಕಾರ್ಯಕರ್ತರ ಸೇವೆ ಅಮೂಲ್ಯವಾದದ್ದು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.

ಪಟ್ಟಣದ ಪಾಟೀಲ್ ಓಣಿಯ ಶಾಲಾವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೇಗ ಮ್ಯಾಕ್ರೋ ಯೋಜನೆಯಡಿ ನಿರ್ಮಿಸಿದ 36 ಲಕ್ಷ ವೆಚ್ಚದ 2 ಅಂಗನವಾಡಿ ಕೇಂದ್ರ ಉದ್ಘಾಟನೆ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಗುಣಾತ್ಮಕ ಸಂಸ್ಕಾರಗಳನ್ನು ಕಲಿಸುವ ಕೇಂದ್ರಗಳಾಗಿ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಜೊತೆಗೆ ಶಿಕ್ಷಣಕ್ಕೆ ಮೊದಲ ಬುನಾದಿ ಹಾಕುತ್ತಿವೆ. ಬಾಣಂತಿಯರು, ತಾಯಂದಿರು ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಅಂಗನವಾಡಿ ಕಾರ್ಯಕರ್ತೆಯರು ಎರಡನೇ ಆರೋಗ್ಯ ವೈದ್ಯರಂತೆ ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿಯ ಹಿಂದೆ ಕಾರ್ಯಕರ್ತರು ಎಲೆಮರೆಕಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇವರ ಪಾತ್ರವು ಪ್ರಮುಖವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಶರಣಪ್ಪ ಬಳೆ, ರಂಗಪ್ಪ ನಾಯಕ, ರಂಗಣ್ಣಗೌಡ ಅಳುಂಡಿ, ಗೋವಿಂದರಾಜ ನಾಯಕ, ಸಿದ್ದಣ್ಣ ದೊಂಡಂಬಳಿ, ಸಮಿನ ಉದ್ಧಾರ, ಶೇಕ್ ಮುನ್ನಾಭಾಯ್, ವೆಂಕಟೇಶ್ ಗೌಡ ಕೊತ್ತದೊಡ್ಡಿ, ಸೇರಿದಂತೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ಎರಡೂ ಬಣದಲ್ಲಿ ಖರ್ಗೆ ಮಾತಿಂದ ಸಂಚಲನ
‘ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ’ ಎಂದ ಮರುದಿನವೇ ಸ್ಪಷ್ಟನೆ