ಕಟ್ಟಡ ಕಾರ್ಮಿಕರ ಸಂಘದ ಕಚೇರಿಗೆ ನಿವೇಶನ

KannadaprabhaNewsNetwork | Published : Feb 5, 2024 1:52 AM

ಸಾರಾಂಶ

ತಿಯೋಬ್ಬರಿಗೂ ಮನೆಕಟ್ಟಿಕೊಡುವ ಕಟ್ಟಡ ಕಾರ್ಮಿಕರಿಗೆ ಸ್ವಂತ ಸೂರು ಇಲ್ಲದಿರುವುದು ವಿಷಾದನೀಯ. ಅನೇಕ ಕುಟುಂಬಗಳು ನಿವೇಶನ ಇಲ್ಲದೇ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕಾರ್ಮಿಕರಿಗಾಗಿ ಮನೆ ನಿರ್ಮಾಣಕ್ಕಾಗಿ 5 ಲಕ್ಷ ಸಹಾಯಧನ ನೀಡಿವ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ

- ಶಾಸಕ ಅನಿಲ್ ಚಿಕ್ಕಮಾದು ಭರವಸೆ

ಕನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದ ಸೋಮೇಶ್ವರ ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘದ ಕಚೇರಿಗೆ ನಿವೇಶನ ನೀಡುವುದಾಗಿ ಶಾಸಕ ಮತ್ತು ಜಂಗಲ್‌ ಲಾಡ್ಜಸ್‌ ರೆಸಾರ್ಟ್ ಅಧ್ಯಕ್ಷ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.

ಪಟ್ಟಣದ ಶಿವರಾತ್ರೀಶ್ವರ ಶಿವಾನುಭವ ಮಂದಿರದಲ್ಲಿ ಸೋಮೇಶ್ವರ ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘದ ವತಿಯಿಂದ ನಡೆದ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರತಿಯೋಬ್ಬರಿಗೂ ಮನೆಕಟ್ಟಿಕೊಡುವ ಕಟ್ಟಡ ಕಾರ್ಮಿಕರಿಗೆ ಸ್ವಂತ ಸೂರು ಇಲ್ಲದಿರುವುದು ವಿಷಾದನೀಯ. ಅನೇಕ ಕುಟುಂಬಗಳು ನಿವೇಶನ ಇಲ್ಲದೇ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕಾರ್ಮಿಕರಿಗಾಗಿ ಮನೆ ನಿರ್ಮಾಣಕ್ಕಾಗಿ 5 ಲಕ್ಷ ಸಹಾಯಧನ ನೀಡಿವ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದರು.

ಸರಗೂರು ಪಟ್ಟಣದಲ್ಲಿ ಹಲವಾರು ಇಲಾಖೆಗೆ ನಿವೇಶನದ ಸಮಸ್ಯೆ ಇದ್ದು ನಿವೇಶನ ಕಂಡು ಬಂದರೆ ಶ್ರೀಘ್ರವಾಗಿ ತಾಯಿ ಮಕ್ಕಳ ಅಸ್ಪತ್ರೆ, ಅಗ್ನಿಶಾಮಕ ದಳ, ಇನ್ನಿತರ ಇಲಾಖೆಗೆ ಕಾರ್ಯನಿರ್ವಹಿಸಲಿದೆ, ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘದ ಕುಟುಂಬದ ಸದಸ್ಯರು ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಮುಂದಾಗಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ. ಚಂದನಗೌಡ ಮಾತನಾಡಿ, ಕಷ್ಟಪಟ್ಟವರಿಗೆ ಮಾತ್ರ ಕಷ್ಟದ ಬೆಲೆ ಗೊತ್ತು. ಕಟ್ಟಡ ಕಾರ್ಮಿಕರ ಕುಟುಂಬದ ಸದಸ್ಯರು ಹಗಲು, ಇರುಳು ತಮ್ಮ ಜೀವನ ಸವೆಸಿದ ಹಿರಿಯರನ್ನು ಕರೆ ತಂದು ಅಭಿನಂದಿಸಿರುವುದು ಸಂಘದ ಸದಸ್ಯರಿಗೆ ಹಿರಿಮೆ ತರಲಿದೆ, ಪುಣ್ಯದ ಮಣ್ಣು ನಮ್ಮದೇಶ ಅದನ್ನು ಗೌರವಿಸುವುದು ಮನುಷ್ಯನಾದವರ ನಮ್ಮ ಕರ್ತವ್ಯ ಎಂದರು.

ಮೈಸೂರು ಮಹಾರಾಜರ ನೆಚ್ಚಿನ ತಾಣ ನೀವಿರುವ ಈಪುಣ್ಯ ಭೂಮಿ ಪ್ರತಿಯೋಬ್ಬರು ಮಣ್ಣನ್ನು ಉಳಿಸಿ ರಕ್ಷಿಸಿ ಸೋಮೇಶ್ವರ ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘವು ಹಿರಿಯರನ್ನು ಗೌರವಿಸಿ ಸಮಾಜಮುಖಿ ಕೆಲಸಮಾಡಲು ಮುಂದಾಗಿ ಸಂಘ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದರು,

ಕಾರ್ಮಿಕ ಇಲಾಖೆ ಅಧಿಕಾರಿ ರಾಜೇಶ್ ಕೆ. ಜಾಧವ್ ಮಾತನಾಡಿ, ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸುವುದರಿಂದ ಕಾರ್ಮಿಕರಿಗೆ ಆಸ್ಪತ್ರೆಗಾಗಿ ಸಹಾಯಧನ, ಅಗತ್ಯವಿರುವ ಕಿಟ್, ಕಾರ್ಮಿಕರ ಮಕ್ಕಳಿಗಾಗಿ ಸ್ಕೂಲ್ ಕಿಟ್ ಹಾಗೆ ಮಕ್ಕಳ ಸ್ಕಾಲರ್ಶಿಪ್, ಮಕ್ಕಳ ಮದುವೆಗಾಗಿ ಸಹಾಯಧನ, ಕಾರ್ಮಿಕರ ಕುಟುಂಬಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸಹಾಯಧನ, ಕಟ್ಟಡ ಕಾರ್ಮಿಕರ ಕೆಲಸದ ವೇಳೆ ಅಪಘಾತವಾದರೆ ಆಸ್ಪತ್ರೆಯ ಖರ್ಚು ಮತ್ತು ಸಹಾಯಧನ, ಕಾರ್ಮಿಕರ ಕುಟುಂಬದವರಿಗೂ ಚಿಕಿತ್ಸೆಗಾಗಿ ಸಹಾಯಧನ ಸಿಗುತ್ತದೆ. ಕಾರ್ಮಿಕರಿಗೆ ಸಾಲ ಸೌಲಭ್ಯ ಕೂಡ ಸಿಗಲಿದ್ದು, ಕಾರ್ಮಿಕರು ಇದರ ಸೌಲಭ್ಯ ಪಡೆಯಿರಿ ಎಂದರು,

ಸೋಮೇಶ್ವರ ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಚ್. ರಮೇಶ್ ಮಾತನಾಡಿ, ಸಂಘದ ಸದಸ್ಯರು ಕಡುಬಡತನದ ರೇಖೆಯಲ್ಲಿದ್ದಾರೆ, ಅವರಿಗೆ ನಿವೇಶನ ಹಾಗೂ ಸೂರು ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದು, ಸರ್ಕಾರ ಈ ಬಡ ಕಾರ್ಮಿಕರ ನೆರವಿಗೆ ದಾವಿಸಬೇಕು ಎಂದರು,

ಈ ವೇಳೆ ಹಿರಿಯ ಕಾರ್ಮಿಕರಾದ ನಂಜುಂಡಸ್ವಾಮಿ, ನಾಗಣ್ಣ, ವೆಂಕಟರಮಣ, ಪೈಂಟ್ ರಾಜಣ್ಣ, ಮುರುಳಿ ಅಣ್ಣ, ತಿರುಮಲ, ಹನುಮಂತ ಶೆಟ್ಟಿ, ನರಸಿಂಹೇಗೌಡ, ಮೀಸೆ ಚಂದ್ರಚಾರಿ ಅವರನ್ನು ಕಾರ್ಮಿಕರ ಮಕ್ಕಳಿಗೆ ಸಂಘದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು, ಕಾರ್ಮಿಕ ಇಲಾಖೆ ಅಧಿಕಾರಿ ರಾಜೇಶ್ ಕೆ. ಜಾಧವ್, ತಾಲ್ಲೂಕು ನಿರೀಕ್ಷಕ ಎಸ್. ಶಶಿಧರ್, ಜಿಪಂ ಮಾಜಿ ಸದಸ್ಯ ಪಿ. ರವಿ. ಚಿಕ್ಕವೀರನಾಯಕ, ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಬೀರ್ವಾಳ್ ಚಿಕ್ಕಣ್ಣ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾರಾಮು, ಸದಸ್ಯರಾದ ಶ್ರೀನಿವಾಸ್, ಎಸ್.ಎಲ್. ರಾಜಣ್ಣ, ನೂರಾಳ ಸ್ವಾಮಿ, ವಿರೇಶ್, ಚಲುವಕೃಷ್ಣ, ದಿವ್ಯಾ ನವೀನ್ ಕುಮಾರ್, ಚೈತ್ರಾಸ್ವಾಮಿ, ಪುಟ್ಟತಾಯಮ್ಮ, ಸೋಮೇಶ್ವರ ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಆರ್. ಮಣಿ, ಗೌರವಾಧ್ಯಕ್ಷ ತಗಡೂರ ನಾಯಕ, ಉಪಾಧ್ಯಕ್ಷ ಸೋಮನಾಯಕ, ಪ್ರಧಾನ ಕಾರ್ಯದರ್ಶಿ ಎಸ್.ಎಚ್. ರಮೇಶ್, ಖಜಾಂಚಿ ಸಿ. ನಾಗರಾಜು, ಸಂಘಟನಾ ಕಾರ್ಯದರ್ಶಿ ಆರ್. ರಾಜೇಶ್, ಸಹ ಕಾರ್ಯದರ್ಶಿ ಷರೀಫ್, ನಿರ್ದೇಶಕರಾದ ಎಸ್.ಜಿ. ಕುಮಾರ್, ಮಂಜುನಾಥ್, ಟೈಲರ್ ಸುರೇಶ್, ಪುಟ್ಟಸ್ವಾಮಾ ಚಾರ್, ಮುತ್ತುರಾಜ್, ಕಟ್ಟಡ ಮತ್ತು ಇನ್ನಿತರ ಕಾರ್ಮಿಕರ ಸಂಘದ ಸದಸ್ಯರು ಇದ್ದರು.

Share this article