ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

KannadaprabhaNewsNetwork |  
Published : Feb 12, 2025, 12:33 AM IST
ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಅಂಕೋಲಾ ಸಾಹಿತ್ಯದ ತವರೂರು. ಈ ಲಾಂಛನ ಅಂಕೋಲಾದ ಸಮಗ್ರತೆಯನ್ನು ಬಿಂಬಿಸುವ ಹಾಗೂ ಗೌರವ ತಂದುಕೊಟ್ಟ ಸಂಗತಿಗಳ ಸಮ್ಮಿಶ್ರಣವಾಗಿದ್ದು, ಅತ್ಯಂತ ಸುಂದರವಾಗಿ ರಚಿತವಾಗಿದೆ.

ಅಂಕೋಲಾ: ತಾಲೂಕಿನಲ್ಲಿ ಫೆ. 25ರಂದು ನಡೆಯುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ಪಟ್ಟಣದ ನಾಡವರ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ಭಟ್ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿ, ಅಂಕೋಲಾ ಸಾಹಿತ್ಯದ ತವರೂರು. ಈ ಲಾಂಛನ ಅಂಕೋಲಾದ ಸಮಗ್ರತೆಯನ್ನು ಬಿಂಬಿಸುವ ಹಾಗೂ ಗೌರವ ತಂದುಕೊಟ್ಟ ಸಂಗತಿಗಳ ಸಮ್ಮಿಶ್ರಣವಾಗಿದ್ದು, ಅತ್ಯಂತ ಸುಂದರವಾಗಿ ರಚಿತವಾಗಿದೆ. ಆದ್ದರಿಂದ ಸಮ್ಮೇಳನ ಸಹ ಸಮಗ್ರತೆಯಿಂದ ಕೂಡಿರಲಿದ್ದು, ಅದನ್ನು ನಾವೆಲ್ಲರೂ ಯಶಸ್ವಿಗೊಳಿಸಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ಜಗದೀಶ ನಾಯಕ ವಂದಿಸಿದರು.

ಈ ಸಂದರ್ಭದಲ್ಲಿ ವಿನಾಯಕ ಹೆಗಡೆ, ಮಂಜುನಾಥ ಇಟಗಿ, ಮಹಾಂತೇಶ ರೇವಡಿ, ಅರುಣ ಶೆಟ್ಟಿ, ಸುಜೀತ ನಾಯ್ಕ, ಪುಷ್ಪಾ ನಾಯ್ಕ, ಎಸ್.ವಿ. ವಸ್ತ್ರದ, ರಫೀಕ್‌ ಶೇಖ್, ಎನ್.ವಿ. ರಾಥೋಡ್, ಎಂ.ಬಿ. ಆಗೇರ, ತಿಮ್ಮಣ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.೨೦ರಿಂದ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್‌

ದಾಂಡೇಲಿ: ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ ಫೆ. ೨೦ರಿಂದ ಫೆ. ೨೩ರ ವರೆಗೆ ನಗರದ ಡಿಎಫ್‌ಎ ಮೈದಾನದಲ್ಲಿ ನಡೆಯಲಿದೆ ಎಂದು ದಾಂಡೇಲಿ ಪ್ರೀಮಿಯರ ಲೀಗ್‌ನ ಅಧ್ಯಕ್ಷ ವಿಷ್ಣುಮೂರ್ತಿ ರಾವ್ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಂಡೇಲಿ ಪ್ರೀಮಿಯರ್‌ ಲೀಗ್ ಕಳೆದ ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಕಳೆದ ವರ್ಷ ಮೊದಲು ಬಾರಿಗೆ ಹೊನಲು ಬೆಳಕಿನ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ವರ್ಷವೂ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದರು.

ಫೆ. ೨೦ರಂದು ಕ್ರಿಕೆಟ್ ಪಂದ್ಯಾವಳಿಯ ವಿಧ್ಯುಕ್ತ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯ ದಿನ ವಿಶೇಷ ಪ್ರದರ್ಶನ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಫೆ. ೨೧ರಿಂದ ಫೆ. ೨೩ರ ವರೆಗೆ ಒಟ್ಟು ೩ ದಿನ ಕ್ರಿಕೆಟ್ ಹಬ್ಬ ನಡೆಯಲಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹2 ಲಕ್ಷ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹1 ಲಕ್ಷದ ಬಹುಮಾನ ಹಾಗೂ ಫಲಕಗಳನ್ನು ನೀಡಲಾಗುವುದು ಎಂದರು.

ದಾಂಡೇಲಿ ಪ್ರೀಮಿಯರ್ ಲೀಗ್‌ನ ಉಪಾಧ್ಯಕ್ಷ ನಿಥಿನ್ ಕಾಮತ ಮಾತನಾಡಿದರು. ರಮೇಶ ನಾಯ್ಕ, ನರಸಿಂಗದಾಸ ರಾಟಿ, ಶಮನ ಅಬ್ದುಲ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಕ್ಕಲಿಗರು ಸಂಘಟಿತರಾಗುವುದು ಅಗತ್ಯ: ಶ್ರೀಗಳ ಕರೆ
ಆಹಾರ ಉತ್ಪನ್ನಗಳ ಆರೋಗ್ಯಕ್ಕೂ ಗಮನಹರಿಸಿ: ಡಾ.ಸಿಂಧೂರು ಗಣಪತಿ