ಕನಕಪುರ: ಬದಲಾದ ಸಮಾಜದ ಪರಿಸ್ಥಿತಿಯಲ್ಲಿ ಎಲ್ಲಾ ಸಮುದಾಯಗಳು ಒಗ್ಗೂಡುತ್ತಿದ್ದು, ಒಕ್ಕಲಿಗ ಸಮುದಾಯವೂ ಒಗ್ಗೂಡಬೇಕಿದೆ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು

ಕನಕಪುರ: ಬದಲಾದ ಸಮಾಜದ ಪರಿಸ್ಥಿತಿಯಲ್ಲಿ ಎಲ್ಲಾ ಸಮುದಾಯಗಳು ಒಗ್ಗೂಡುತ್ತಿದ್ದು, ಒಕ್ಕಲಿಗ ಸಮುದಾಯವೂ ಒಗ್ಗೂಡಬೇಕಿದೆ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.

ನಗರದ ರೂರಲ್ ಎಜುಕೇಶನ್ ಸೊಸೈಟಿ ಕಚೇರಿಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಒಕ್ಕಲಿಗರ ಪಾತ್ರ ಮಹತ್ವದ್ದು. ಒಕ್ಕಲಿಗ ಸಮುದಾಯಕ್ಕೆ ಕೃಷಿಯೇ ಪ್ರಧಾನ ಕಸುಬು. ಸಮುದಾಯಕ್ಕೆ ಅನ್ಯಾಯವಾದಾಗ ಅವರ ಪರ ಯಾರೂ ನಿಲ್ಲುವುದಿಲ್ಲ. ಸಮುದಾಯದ ಜನತೆ ಒಗ್ಗಟ್ಟಾಗಬೇಕು. ಇದರಲ್ಲಿ ರಾಜಕೀಯ ತರುವುದು ಬೇಡ, ನಿಮಗೆ ಇಷ್ಟ ಬಂದ ಪಕ್ಷ ಗಳಲ್ಲಿ ಕೆಲಸ ಮಾಡಿ, ಆದರೆ ರಾಜಕೀಯದಲ್ಲಿ ಅನಿವಾರ್ಯ ಪರಿಸ್ಥಿತಿ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಸಮುದಾಯದ ಪರವಾಗಿ ನಿಲ್ಲಬೇಕಿದೆ. ರಾಜಕೀಯ ಶಕ್ತಿ ಆಗಬೇಕಿದೆ ಎಂದರು.

ರೂರಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಹಾಗೂ ಸಮುದಾಯದ ಜನರನ್ನು ಸಂಘಟಿಸಲು ಸಂಘ ಸಂಸ್ಥೆಗಳ ಅನಿವಾರ್ಯತೆ ಇದೆ. ಒಕ್ಕಲಿಗ ಸಮುದಾಯ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಡಿಯಲ್ಲಿ ಸಂಘಟನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೆಗೌಡ, ಗೌರವಾಧ್ಯಕ್ಷ ಚಿಕ್ಕೆಂಪೇಗೌಡ, ಪದಾಧಿಕಾರಿಗಳಾದ ಹುಚ್ಚಪ್ಪ, ಕುಮಾರಸ್ವಾಮಿ, ಕೂಗಿ ಗಿರಿಯಪ್ಪ, ಎಲ್ಲೆಗೌಡ ಬೆಸಗರಹಳ್ಳಿ, ಯು ವಿ ಸ್ವಾಮಿಗೌಡ, ಚಿಕ್ಕ ರಂಗಯ್ಯ, ಟಿ.ಎಂ.ರಾಮಯ್ಯ, ಕಬ್ಬಾಳೇಗೌಡ, ಸಿದ್ದರಾಜು, ಬೊಮ್ಮನಹಳ್ಳಿ ಕುಮಾರ, ದೇವರಾಜು, ಅಂದಾನಿಗೌಡ, ಚೀಲೂರು ಮುನಿರಾಜು, ಅಂಗಡಿ ರಮೇಶ್, ಸತೀಶ್, ದೊಡ್ಡಿ ಬೀದಿ ನಾಗೇಶ್, ಬಸವರಾಜು, ಶಿವರಾಮೇಗೌಡ, ಬೈರೇಗೌಡ, ಓಂಕಾರೇಶ್ವರ, ಪ್ರಕಾಶ್ ಬನ್ನಿಕುಪ್ಪೆ, ಸಿ.ರಾಜು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದ ರೂರಲ್ ಎಜುಕೇಶನ್ ಸೊಸೈಟಿ ಕಚೇರಿಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕ್ಯಾಲೆಂಡರ್‌ ಅನ್ನು ದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.