ಮುಂಡರಗಿ ಭಾಗದಲ್ಲಿ ಅನ್ನದಾನೀಶ್ವರ ಸ್ವಾಮೀಜಿ ಶೈಕ್ಷಣಿಕ ಕ್ರಾಂತಿ-ಶಾಸಕ ಲಮಾಣಿ

KannadaprabhaNewsNetwork |  
Published : Aug 25, 2025, 01:00 AM IST
24ಎಂಡಿಜಿ1, ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗಿದ 12ನೇ ಶತಮಾನದ ಅಮರಗಣಾಧೀಶರ ಚರಿತ್ರೆ ಪ್ರವಚನದ ಮಂಗಲೋತ್ಸವದಲ್ಲಿ ಸಾನಿಧ್ಯವಹಿಸಿದ್ದ ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮಿಜಿಯವರಿಗೆ ಸನ್ಮಾನಿಸಿದರು. | Kannada Prabha

ಸಾರಾಂಶ

ಮುಂಡರಗಿ ಜ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಬರಗಾಲದ ಈ ನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆ ಹಾಗೂ ಸರಕಾರಿ ಕಚೇರಿಗಳಿಗೆ ಕೋಟ್ಯಾಂತರ ಬೆಲೆ ಬಾಳುವ ಶ್ರೀಮಠದ ಜಮೀನು ದಾನ ಮಾಡಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಮುಂಡರಗಿ: ಮುಂಡರಗಿ ಜ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಬರಗಾಲದ ಈ ನಾಡಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆ ಹಾಗೂ ಸರಕಾರಿ ಕಚೇರಿಗಳಿಗೆ ಕೋಟ್ಯಾಂತರ ಬೆಲೆ ಬಾಳುವ ಶ್ರೀಮಠದ ಜಮೀನು ದಾನ ಮಾಡಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಾಂತರ ಜರುಗಿದ 12ನೇ ಶತಮಾನದ ಅಮರಗಣಾಧೀಶರ ಚರಿತ್ರೆ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಾದಿ ಶಿವಶರಣರು ಆಗಿ ಹೋದ 12ನೇ ಶತಮಾನ ನಮಗೆಲ್ಲ ಆದರ್ಶಪ್ರಾಯವಾಗಿದೆ. ಜಗತ್ತು ಅನೇಕ ಕ್ಷೇತ್ರದಲ್ಲಿ ಮುಂದುವರೆದಿದ್ದರೂ ಶಿವಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ನಾವೂ ಇನ್ನೂ ಎಡವುತ್ತಿದ್ದೇವೆ. ಶರಣರ ಆದರ್ಶ ಮಾರ್ಗ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಈ ನಾಡು ಪರಿಪೂರ್ಣವಾಗುತ್ತದೆ ಎಂದರು.

ನೇತೃತ್ವ ವಹಿಸಿದ್ದ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ಇಲ್ಲಿಯ ಭಕ್ತರಿಗೆ ನೆತ್ತಿಯನ್ನು ತುಂಬಿಸುವುದರ ಜತೆಗೆ ಹೊಟ್ಟೆಯನ್ನೂ ತುಂಬಿಸುವ ಕಾರ್ಯ ಅನ್ನದಾನೀಶ್ವರ ಸ್ವಾಮೀಜಿ ಮಾಡಿದ್ದಾರೆ. 12ನೇ ಶತಮಾನದ 770 ಅಮರಗಣಾಧೀಶ್ವರರ ಜೀವನ ಚರಿತ್ರೆಯ ಜೊತೆಗೆ ಶರಣ ಪರಂಪರೆಯ ಮಾಹಿತಿಯನ್ನು ತಾವೆಲ್ಲ ಪಡೆದಿರುವಿರಿ. ಮುಂಡರಗಿ ಶ್ರೀಮಠ ಭಕ್ತರ ಬಗ್ಗೆ ಕಾಳಜಿಯುಳ್ಳ ಮಠವಾಗಿದೆ ಎಂದರು.

ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಭಕ್ತರ ಭಕ್ತಿಯೇ ಶ್ರೀಮಠದ ಶಕ್ತಿ. ಕಳೆದ 25 ದಿನಗಳಿಂದ ಅದ್ಧೂರಿಯಾಗಿ ಜರುಗಿದ ಪ್ರವಚನ ಕಾರ್ಯಕ್ರಮಕ್ಕೆ ಭಕ್ತರು ತನು, ಮನ, ಧನದಿಂದ ಸಹಾಯ ಸಹಕಾರ ಮಾಡುತ್ತಾ ಬಂದಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಪ್ರವಚನ ಸಮಿತಿ ಉತ್ಸಾಹದಿಂದ ಕಾರ್ಯನಿರ್ವಹಿಸಿದೆ ಎಂದರು.

ಪ್ರವಚನಕಾರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರವಚನ ಮಂಗಲಗೊಳಿಸಿದರು. ಮುಖ್ಯ ಅತಿಥಿ ಆರ್.ಎಫ್.ಓ ಮಂಜುನಾಥ ಮೇಗಲಮನಿ ಮಾತನಾಡಿ, ಪ್ರತಿಯೊಬ್ಬರು ಕಪ್ಪತಗುಡ್ಡದ ಸಂರಕ್ಷಣೆಗೆ ಮುಂದಾಗಬೇಕು. ಕಪ್ಪತ್ತಗುಡ್ಡ ಇರುವುದರಿಂದ ಗದಗ ಉತ್ತಮ ಗಾಳಿ ಬೀಸುವುದರಲ್ಲಿ ಪ್ರಸಿದ್ಧಿ ಪಡೆದಿದೆ. ನಮ್ಮ ಕಪ್ಪತ್ತಗುಡ್ಡ ಸದಾ ಪ್ರಾಣವಾಯು ದೊರೆಯುವ ಕೇಂದ್ರವಾಗಿದೆ ಎಂದರು.

ಭಕ್ತಿ ಸೇವೆಯನ್ನು ಕುಮಾರಸ್ವಾಮಿ ಹಿರೇಮಠ, ಕಲಾವತಿ ಪಾಟೀಲ, ಪ್ರತಿಭಾ ಗುಜ್ಜರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಾಕಾನಿಪ ಸಂಘದ ಅಧ್ಯಕ್ಷ ಶಿವು ಹೊಂಬಳಗಟ್ಟಿ ಮತ್ತು ಜಿಲ್ಲಾ ಶ್ರೇಷ್ಠವರ್ತಕ ಪ್ರಶಸ್ತಿ ಪುರಸ್ಕೃತ ಕಾಶೀನಾಥ ಅಳವಂಡಿ ಅವರನ್ನು ಪೂಜ್ಯರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಪ್ರವಚನ ಸಮಿತಿ ಅಧ್ಯಕ್ಷ ವಿ.ಜೆ. ಹಿರೇಮಠ, ಉಪಾಧ್ಯಕ್ಷ ಬಸವರಾಜ ಗೋಡಿ, ಅನ್ನದಾನೀಶ ಅಕ್ಕೂರ, ಕಾರ್ಯದರ್ಶಿ ವಿಶ್ವನಾಥ ಪಾಟೀಲ, ಸಹಕಾರ್ಯದರ್ಶಿ ದೇವಪ್ಪ ಇಟಗಿ, ಖಜಾಂಚಿ ವೀರಭದ್ರಪ್ಪ ಮೇಟಿ ಮುಂತಾದವರಿದ್ದರು.24ಎಂಡಿಜಿ1

ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಜರುಗಿದ 12ನೇ ಶತಮಾನದ ಅಮರಗಣಾಧೀಶರ ಚರಿತ್ರೆ ಪ್ರವಚನದ ಮಂಗಲೋತ್ಸವದಲ್ಲಿ ಸಾನಿಧ್ಯವಹಿಸಿದ್ದ ಜ.ನಾಡೋಜ ಡಾ. ಅನ್ನದಾನೀಶ್ವರ ಸ್ವಾಮಿಜಿಯವರಿಗೆ ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಿ: ಮಾಜಿ ಶಾಸಕ ಸುಧಾಕರ್ ಲಾಲ್
ದುಶ್ಚಟ ಬಿಟ್ಟರೆ ವಿವಾಹಕ್ಕೆ ಕನ್ಯೆಯರು ಸಿಕ್ಕಾರು: ಶಾಂತವೀರ ಶ್ರೀ