ಅಣ್ಣಾಸಾಹೇಬ ದೂರದೃಷ್ಟಿ ನಾಯಕ

KannadaprabhaNewsNetwork |  
Published : Oct 09, 2024, 01:34 AM IST
 ಚಿಕ್ಕೋಡಿ | Kannada Prabha

ಸಾರಾಂಶ

ಸಹಕಾರ, ಶಿಕ್ಷಣ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸಮಾಜಮುಖಿ ಕೆಲಸ ಮಾಡುವ ಮೂಲಕ ಜನರ ಅಭಿಮಾನ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ ಎಂದು ಕೊಲ್ಲಾಪೂರ ರಾಜ್ಯಸಭೆ ಸದಸ್ಯ ಧನಂಜಯ ಮಹಾಡಿಕ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸಹಕಾರ, ಶಿಕ್ಷಣ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಸಮಾಜಮುಖಿ ಕೆಲಸ ಮಾಡುವ ಮೂಲಕ ಜನರ ಅಭಿಮಾನ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ ಎಂದು ಕೊಲ್ಲಾಪೂರ ರಾಜ್ಯಸಭೆ ಸದಸ್ಯ ಧನಂಜಯ ಮಹಾಡಿಕ ಹೇಳಿದರು.

ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಂಗಳವಾರ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 62ನೇ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಅಣ್ಣಾಸಾಹೇಬ ಜೊಲ್ಲೆಯವರು ಸಹಕಾರಿ ಕ್ಷೇತ್ರದಲ್ಲಿ ಹೊಸ, ಹೊಸ ಬೆಳವಣಿಗೆಯನ್ನು ತಮ್ಮ ಸಂಸ್ಥೆಯಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿರುವ ಮೇಧಾವಿ. ದಿನಕ್ಕೊಂದು ಹೊಸ ಹೊಸ ಯೋಜನೆ ರೂಪಿಸುವ ಕಾರ್ಯಕ್ಷಮತೆ ಹೊಂದಿದ್ದು ಅವರೊಬ್ಬ ದೂರದೃಷ್ಟಿ ನಾಯಕ ಎಂದರು.ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಬಿರೇಶ್ವರ ಸೊಸೈಟಿ ಶಾಖೆಗಳನ್ನು ಸ್ಥಾಪಿಸಿ ಬಡ ಜನರಿಗೆ ಆರ್ಥಿಕ ಸೌಲಭ್ಯ ಒದಗಿಸಿರುವ ಕೀರ್ತಿ ಜೊಲ್ಲೆ ದಂಪತಿಗೆ ಸಲ್ಲುತ್ತದೆ. ಬೀರೇಶ್ವರ ಬ್ಯಾಂಕಿನ ವ್ಯವಸ್ಥೆ ಸಿಲಿಕಾನ್ ಸಿಟಿಯಲ್ಲಿರುವ ವ್ಯವಸ್ಥೆ ಗ್ರಾಮೀಣ ಭಾಗದ ಶಾಖೆಗಳಲ್ಲಿ ಅಳವಡಿಸಿ ಬೀರೇಶ್ವರ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಅಳಿವಿನಂಚಿನಲ್ಲಿದ್ದ ನಿಪ್ಪಾಣಿ ಹಾಲ ಶುಗರ್‌ ಕಾರ್ಖಾನೆಯನ್ನು ಸಹ ಇಂದು ಹೆಮ್ಮರವಾಗಿ ಬೆಳೆಸಿದ್ದಾರೆ. ಮುಂದೆಯು ಸಹ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ರೈತರು ಅವರಿಗೆ ಸಹಕಾರ ಕೊಡಬೇಕು ಎಂದರು.ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕಳೆದ 40 ವರ್ಷದಿಂದ ಸಮಾಜಮುಖಿ ಸೇವೆ ಮಾಡುತ್ತಿರುವ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ನಾಡಿನ ಜನರ ಆಶೀರ್ವಾದವೇ ಶ್ರೀರಕ್ಷೆಯಾಗಿದೆ. ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ಸಿಗಬೇಕೆಂದು ಸಹಕಾರಿ ರಂಗದ ಮೂಲಕ ಬೀರೇಶ್ವರ ಸೊಸೈಯಿಟಿ ಸ್ಥಾಪಿಸಿ ಇಂದು ಹೆಮ್ಮರವಾಗಿ ಬೆಳೆಸಿದ್ದಾರೆ. ಗಡಿ ಭಾಗದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಗಡಿ ಭಾಗದ ಜನರ ಹೃದಯ ಗೆದ್ದಿದ್ದಾರೆ ಎಂದರು.ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಪ್ಪಾಣಿಯಲ್ಲಿ ರೈತ ಹುತಾತ್ಮ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಅಚ್ಯುತ್ ಮಾನೆ ಅವರ ಬೇಡಿಕೆಗೆ ಜೊಲ್ಲೆ ಗ್ರುಪ್, ಕಾರ್ಖಾನೆ ಮತ್ತು ಶಾಸಕರ ಅನುದಾನದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ನನ್ನ ಜನ್ಮದಿನಕ್ಕೆ ನನಗೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಕಿತ್ತೂರ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ ಅವರು ಅಣ್ಣಾಸಾಹೇಬ ಜೊಲ್ಲೆ ಅವರ ಸಮಾಜಮುಖಿ ಕೆಲಸಗಳನ್ನು ಗುಣಗಾನ ಮಾಡಿದರು.ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ್ ಸ್ವಾಮೀಜಿ, ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಇದೇ ಸಂದರ್ಭದಲ್ಲಿ 62ನೇ ಜನ್ಮದಿನದ ನಿಮಿತ್ತ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಹುಟ್ಟು ಹಬ್ಬ ಆಚರಣ ಸಮಿತಿ ಮತ್ತು ವಿವಿಧ ಗಣ್ಯರು ಸನ್ಮಾನಿಸಿ ಗೌರವಿಸಿದರು.ವೇದಿಕೆ ಮೇಲೆ ನಿಪ್ಪಾಣಿಯ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಖಡಕಲಾಟದ ಶಿವಬಸವ ಸ್ವಾಮೀಜಿ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗೂಡೆ, ಪಂಚನಗೌಡ ದ್ಯಾಮನಗೌಡರ, ಜ್ಯೋತಿಪ್ರಸಾದ ಜೊಲ್ಲೆ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡಾ ಪಾಟೀಲ, ಸುಕುಮಾರ ಪಾಟೀಲ, ಸುಮಿತ ಸಾಸನೆ, ಜಯಕುಮಾರ ಖೋತ, ಪ್ರಕಾಶ ಶಿಂಧೆ, ಜಯವಂತ ಬಾಟಲೆ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ ಜಂಗಟೆ, ವಿನಾಯಕ ಪಾಟೀಲ, ಸುಹಾಸ ಗುಗೆ, ಗೀತಾ ಪಾಟೀಲ, ವೈಶಾಲಿ ನಿಕಾಡೆ, ಶ್ರೀಕಾಂತ ಬನ್ನೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾಂವೆ ಉಪಸ್ಥಿತರಿದ್ದರು.ಬಸವಜ್ಯೋತಿ ಯುಥ್ ಫೌಂಡೇಶನ್‌ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.ನಿಪ್ಪಾಣಿಯಲ್ಲಿ ರೈತ ಹುತಾತ್ಮ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಅಚ್ಯುತ್ ಮಾನೆ ಅವರ ಬೇಡಿಕೆಗೆ ಜೊಲ್ಲೆ ಗ್ರುಪ್, ಕಾರ್ಖಾನೆ ಮತ್ತು ಶಾಸಕರ ಅನುದಾನದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ನನ್ನ ಜನ್ಮದಿನಕ್ಕೆ ನನಗೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

-ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ