ಕೊಣಾಜೆ ಮಂಗಳಗಂಗೋತ್ರಿ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ
ಅವರು ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಸಾಧನೆ ಮಾಡಿದಾಗ ಪಾಲಕರು ಮಾತ್ರವಲ್ಲ ಶಿಕ್ಷಕರೂ ಸಂತಸಪಡುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಗೌರವ ನೀಡುವ ಮನೋಭಾವನೆ, ನಾಯಕತ್ವ ಗುಣವನ್ನು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಜವಬ್ಧಾರಿ ಶಿಕ್ಷಕರದ್ದಾಗಿದೆ ಎಂದರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದು ಎಷ್ಟೋ ಜನರು ಶಿಕ್ಷಣಕ್ಕೆ ಸೀಮಿತವಾಗಿ ಹೋಗುತ್ತಿರುವುದನ್ನು ಕಾಣುತ್ತೇವೆ. ಸಮಾನತೆ, ಸಾಮರಸ್ಯ, ಮಾನವೀಯತೆಯ ಮನೋಭಾವಗಳು ಶಿಕ್ಷಣದ ಮೂಲಕ ಸಿಗುವಂತಾಗಲಿ ಎಂದರು.ವಿಶ್ವಮಂಗಳ ಆಡಳಿತ ಅಧ್ಯಕ್ಷರಾದ ಪ್ರೊ.ಜಗದೀಶ್ ಪ್ರಸಾದ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಜೊತಗೆ ನಾರಾಯಣ ಗುರು, ಬಸವಣ್ಣ , ಗಾಂಧೀಜಿ ಯವರಂತಹ ಮಹಾತ್ಮರ ಆದರ್ಶ ತತ್ವಗಳನ್ನು ತಿಳಿಯಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು.ಹಳೆ ವಿದ್ಯಾರ್ಥಿಗಳಾದ ಚಿತ್ರನಟಿ ವಂಶಿ ರತ್ನಕುಮಾರ್, ತೃಷಾ ಹಾಗೂ ಫಾತಿಮತ್ ನಿಶಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶೋಭಾವತಿ ಬಿ, ಪ್ರಿಯಾ ಎನ್, ಹಂಸಗೀತ ಅವರು ವಾರ್ಷಿಕ ವರದಿ ಮಂಡಿಸಿದರು. ಸಿಂಡಿಕೇಟ್ ಸದಸ್ಯರಾದ ಅಚ್ಯುತ ಗಟ್ಟಿ, ಕಾರ್ಯದರ್ಶಿ ಡಾ. ಗೋವಿಂದ ರಾಜು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೀವ್ ನಾಯ್ಜ್ ಮೊದಲಾದವರು ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ ಶೆಟ್ಟಿ ಸ್ಬಾಗತಿಸಿದರು. ಕೋಶಾಧಿಕಾರಿ ಸುಬ್ಬ ನಾಯ್ಕ್ ಅವರು ವಂದಿಸಿದರು. ಮಾನ್ವಿ ಎಸ್ ಹಾಗೂ ಮಹಮ್ಮದ್ ಝಹೀದ್ ನಿರೂಪಿಸಿದರು.