ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಈ ಸಂದರ್ಭ ಮಾತನಾಡಿದ ಸಹಾರ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ಮೋಸಿನ್, ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಶಕ್ತಿ ವೃದ್ದಾಶ್ರಮದ ಮೇಲ್ವಿಚಾರಕರಾದ ಹನುಮಂತುರವರು ಆಶ್ರಮಕ್ಕೆ ಊಟದ ತಟ್ಟೆ ಇನ್ನಿತರ ಸಲಕರಣೆಗಳು ಬೇಕು ಎಂದು ಮನವಿ ಮಾಡಿದ್ದರು. ಅದರಂತೆ ದಾನಿಗಳಾದ ಅಜ್ಮಲ್ ಮತ್ತು ಮಂಜಣ್ಣರವರ ಸಹಾಯದಿಂದ ವೃದ್ಧಾಶ್ರಮ ನಿವಾಸಿಗಳಿಗೆ ಊಟದ ಸಲಕರಣೆಗಳನ್ನು ನೀಡಲು ಸಾಧ್ಯವಾಯಿತು ಎಂದರು.
ಸಂಸ್ಥೆಯ ಸಂಸ್ಥಾಪಕ ರವುಪ್ ಮಾತನಾಡಿ ಸಹಾರ ಸಂಸ್ಥೆ ಕಳೆದ ಆರು ತಿಂಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಒಂದಿಲ್ಲೊಂದು ಕಾರ್ಯವನ್ನು ದಾನಿಗಳ ಸಹಾಯದಿಂದ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದೇವೆ. ದಾನಿಗಳ ಸಹಕಾರ ಇದೆ ರೀತಿ ಇನ್ನು ಮುಂದೆಯು ಸಿಗುವಂತಾಗಲಿ ಎಂದರು.ಬೇಟೋಳಿ ಗ್ರಾಮ ಪಂಚಾಯತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಆಯಿಷಾ ಮಾತನಾಡಿ, ಸಹಾರ ಫ್ರೆಂಡ್ಸ್ ಸಂಸ್ಥೆ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇವರ ಸಮಾಜ ಸೇವೆ ಇನ್ನೂ ಹೆಚ್ಚಿನ ಜನರಿಗೆ ತಲುಪುವಂತಾಗಲಿ ಎಂದರು.
ಸಹಾರ ಫ್ರೆಂಡ್ಸ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಅಪ್ಪು, ಸದಸ್ಯರಾದ ಕೆ. ಬಿ.ಸುಮೇಶ್ , ಇ. ಮಂಜುನಾಥ್, ಲವೀಸ್, ಸಮಿಉಲ್ಲಾ, ಸಂಶು, ಲೋಕೇಶ್, ದಾನಿಗಳಾದ ಅಜ್ಮಲ್ ಮತ್ತು ಶಿವರಾಂ ಹಾಜರಿದ್ದರು.