ಮಡಿಕೇರಿ ಬಿಳಿಗೇರಿಯ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ

KannadaprabhaNewsNetwork |  
Published : Mar 18, 2026, 02:45 AM IST
ಚಿತ್ರ :  17ಎಂಡಿಕೆ1 : ಮಡಿಕೇರಿ ಬಿಳಿಗೇರಿಯ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ ನಡೆಯಿತು.  | Kannada Prabha

ಸಾರಾಂಶ

ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಮಾ. 22ರಿಂದ 26ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಮಡಿಕೇರಿ: ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಮಾ. 22ರಿಂದ 26ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಮಾ. 22ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಗಣಪತಿ ಹೋಮ, ಮಹಾಪೂಜೆ, ಸಂಜೆ 6.30ಕ್ಕೆ ಪ್ರಾರ್ಥನೆ, ಭಂಡಾರ ತರುವುದು, ಅಂದಿ ಬೆಳಕು, ಮಹಾಪೂಜೆ, ಪ್ರಸಾದ ವಿತರಣೆ, ಮಾ.23ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಭಗವತಿ ದೇವರು ಬಲಿ ಬರುವುದು, ಮಹಾಪೂಜೆ, ಸಂಜೆ 6.30 ಗಂಟೆಗೆ ಬೆಳಕು, ದೇವರು ಬಲಿ ಬರುವುದು, ಅಂದಿಬೆಳಕು, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ಪರದೇವರ ಕೊಟ್ಟದಲ್ಲಿ ಕೊಟ್ಟಿಪಾಡುವ ಕಾರ್ಯಕ್ರಮ ನಡೆಯಲಿವೆ. ಮಾ. 24ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ದೇವರು ಬಲಿ ಬರುವುದು, ಅಯ್ಯಪ್ಪ ದೇವರ ಪೂಜೆ, ಮಹಾಪೂಜೆ, ಸಂಜೆ ಬೆಳಕು, ಶ್ರೀ ದೇವರ ಬಲಿ, ಅಂದಿಬೆಳಕು ಮಹಾಪೂಜೆ ಪ್ರಸಾದ ವಿತರಣೆ, ಮಾ.25ರಂದು ಬೆಳಗ್ಗೆ 6 ಗಂಟೆಯಿಂದ ಶ್ರೀ ದೇವರ ನೃತ್ಯ ಬಲಿ, ಶ್ರೀ ಪರದೇವರ ಕೊಟ್ಟದಿಂದ ದೇವರು ಮಲಿಯಪಟ್ಟಿಗೆ ಬರುವುದು, ತಕ್ಕರ ಮನೆಯಿಂದ ಅಯ್ಯಪ್ಪ ದೇವರ ಭಂಡಾರ ಹಾಗೂ ಚೋಮಪೋರು ಬರುವುದು, ನುರ್ಚಟೆ ಬಾರಣೆ, ಎತ್ತು ಪೋರಾಟ, ತೆಂಗೆಪೋರು, ಬೆಳಕು, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಶ್ರೀ ದೇವರ ನೃತ್ಯ ಬಲಿ, ಶ್ರೀ ಪರದೇವರ, ಎಡೆಕೊಲ್ಲಿ ಅಯ್ಯಪ್ಪ ದೇವರ, ಕುಟ್ಟಿಚಾತ ದೇವರುಗಳ ಕೋಲ ಹಾಗೂ ದೇವರ ಬೇಟೆ ಕಾರ್ಯಕ್ರಮಗಳು ನಡೆಯಲಿದೆ.ಮಾ. 26ರಂದು ಮಧ್ಯಾಹ್ನ ಮಹಾಪೂಜೆ ಸಂಜೆ 4 ಗಂಟೆಗೆ ಬೆಳಕು, ಶ್ರೀ ದೇವರ ಬಲಿ ನಂತರ ಜಳಕ ಕಾರ್ಯ, ನೃತ್ಯ ಬಲಿ, ಅನ್ನಸಂತರ್ಪಣೆ, ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ: ಗೌರಿಕೆರೆ ಶ್ರೀ ರಾಮ ಮಂದಿರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಎಸ್ಸೆಸ್ಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 14151 ವಿದ್ಯಾರ್ಥಿಗಳು ಹಾಜರು