ಮಗುಚಿಬಿದ್ದ ಅಡುಗೆ ಅನಿಲ ಗ್ಯಾಸ್‌ ಟ್ಯಾಂಕರ್‌ ತೆರವು

KannadaprabhaNewsNetwork |  
Published : Mar 18, 2026, 02:45 AM IST
ಸಸಸ | Kannada Prabha

ಸಾರಾಂಶ

ಇಲ್ಲಿನ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಮಗುಚಿಬಿದ್ದ ಅಡುಗೆ ಅನಿಲ ತುಂಬಿದ್ದ ಟ್ಯಾಂಕರನ್ನು ಸುಮಾರು 16 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೋಮವಾರ ಮಧ್ಯರಾತ್ರಿ ತೆರವುಗೊಳಿಸಲಾಗಿದೆ

ಉಡುಪಿ: ಇಲ್ಲಿನ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಮಗುಚಿಬಿದ್ದ ಅಡುಗೆ ಅನಿಲ ತುಂಬಿದ್ದ ಟ್ಯಾಂಕರನ್ನು ಸುಮಾರು 16 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೋಮವಾರ ಮಧ್ಯರಾತ್ರಿ ತೆರವುಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಈ ಟ್ಯಾಂಕರು ಹೆದ್ದಾರಿ ಮಧ್ಯೆ ಅಡ್ಡಲಾಗಿ ಉರುಳಿಬಿದ್ದಿತ್ತು. ಇದರಿಂದ ಸಣ್ಣ ಪ್ರಮಾಣದಲ್ಲಿ ಅಡುಗೆ ಅನಿಲ ಸೋರಿಕಯಾಗತೊಡಗಿತ್ತು. ತಕ್ಷಣ ಅಗ್ನಿಶಾಮಕ ದಳದ 3 ವಾಹನಗಳನ್ನು ತರಿಸಿ ಟ್ಯಾಂಕರ್ ಮೇಲೆ ಸತತವಾಗಿ ನೀರು ಸಿಂಪರಣೆ ಮಾಡಿ ಸೋರಿಕೆಯನ್ನು ನಿಯಂತ್ರಿಸಲಾಯಿತು.

ನಂತರ ಮಂಗಳ‍ೂರಿನಿಂದ ಖಾಲಿ ಟ್ಯಾಂಕರ್‌ಗಳನ್ನು ತರಿಸಿ ಬಿದ್ದಿದ್ದ ಟ್ಯಾಂಕರಿನಿಂದ ಅಡುಗೆ ಅನಿಲವನ್ನು ವರ್ಗಾಯಿಸಲಾಯಿತು. ಅತ್ಯಂತ ಸೂಕ್ಷ್ಮವಾಗಿ ನಡೆಸಲಾದ ಈ ಕಾರ್ಯಾಚರಣೆ ಮುಗಿಯುವಾಗ ಮಧ್ಯರಾತ್ರಿ ಕಳೆದಿತ್ತು.

ಈ ಸಂದರ್ಭ ಪೊಲೀಸರು ಅತ್ಯಂತ ನಿಭಿಡವಾಗಿರುವ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಅಕ್ಕ ಪಕ್ಕದ ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಿದರು. ಇದರಿಂದ ಈ ಪರ್ಯಾಯ ಮಾರ್ಗಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿ ಇನ್ನೊಂದು ಸಮಸ್ಯೆ ಉಂಟಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ: ಗೌರಿಕೆರೆ ಶ್ರೀ ರಾಮ ಮಂದಿರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಎಸ್ಸೆಸ್ಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 14151 ವಿದ್ಯಾರ್ಥಿಗಳು ಹಾಜರು