ದೇವರಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಿಂದಗಿ ಹಾಗೂ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ವಿಜಯಪುರ ಸಹಯೋಗದಲ್ಲಿ ಕೋರವಾರ ಅಂಗನವಾಡಿ ಕೇಂದ್ರದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಸಲಾಯಿತು.ವೈದ್ಯ ಡಾ.ಅಶೋಕ ಕುಳೇಕುಮಟಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ಅಂಗನವಾಡಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಮಾಡುತ್ತಿರುವುದು. ಇಲ್ಲಿಯ ಮಕ್ಕಳ ಚಟುವಟಿಕೆಗಳು, ನೃತ್ಯ, ಹಾಡು, ರಸಪ್ರಶ್ನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಖುಷಿ ತಂದಿದೆ. ಇದು ಯಾವ ಸರಕಾರೇತರ ಶಾಲೆಗಳಿಗೆ ಕಡಿಮೆ ಇಲ್ಲ. ಇಲ್ಲಿಯ ಅಂಗನವಾಡಿಯ ಕಾರ್ಯಕರ್ತೆ ಮತ್ತು ಸಹಾಯಕಿ ಪಾತ್ರ ಬಹಳ ಮಹತ್ವದ್ದಾಗಿದ್ದು, ಅವರಿಗೆ ಅಭಿನಂದನೆಗಳು ಎಂದರು.ಉಜ್ವಲ ಸಂಸ್ಥೆಯ ತಾಲೂಕ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಗುಣಮಟ್ಟದಲ್ಲಿದ್ದು, ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿವೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಮಕ್ಕಳೊಂದಿಗೆ ಸರಿಸಮಾನವಾಗಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಮಕ್ಕಳು ಉತ್ತಮ ಪ್ರತಿಭೆ ಹೊಂದಿದ್ದಾರೆ. ವೇಳಾಪಟ್ಟಿ ಪ್ರಕಾರ ಎಲ್ಲಾ ಚಟುವಟಿಕೆಗಳು ಮಕ್ಕಳಿಗೆ ಮಾಡಿಸುತ್ತಿದ್ದು, ಮಕ್ಕಳ ತಳಪಾಯ ಬಲಪಡಿಸಬೇಕಾಗಿದೆ ಎಂದರು.ಅಂಗನವಾಡಿ ಕ್ಷೇತ್ರ ಮೇಲ್ವಿಚಾರಕರಾದ ಶಹಜಾದ್ ಕಾಗಲ್ ಮಾತನಾಡಿದರು. ಈ ವೇಳೆ ಮಕ್ಕಳಿಗೆ ನೃತ್ಯ, ಹಾಡು ,ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. 6 ವರ್ಷ ತುಂಬಿದ ಆರು ಮಕ್ಕಳಿಗೆ ಅಂಗನವಾಡಿ ಗುರುಮಾತೆ ಮತ್ತು ಸಹಾಯಕಿ ಬ್ಯಾಗ್, ನೋಟ್ ಬುಕ್ ಪೆನ್, ಪೆನ್ಸಿಲ್ ವಿತರಣೆ ಮಾಡಿದರು. ಇದೇ ವೇಳೆ ಆರು ಮಕ್ಕಳ ಪಾಲಕರು ಸೇರಿಕೊಂಡು ಅಂಗನವಾಡಿಗೆ ದೇಣಿಗೆಯಾಗಿ ಧ್ವನಿವರ್ಧಕ ನೀಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರು, ತಾಯಂದಿರು, ಪಾಲಕರು ಮತ್ತು ಮಕ್ಕಳು ಭಾಗವಹಿಸಿದ್ದರು. ಉಜ್ವಲ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶಶಿಕಾಂತ್ ಸುಂಗಠಾಣ ಸ್ವಾಗಸಿದರು. ಪ್ರೇಮಾ ಬಿರಾದಾರ, ಗೀತಾ ಘಾಟಗೆ ವಂದಿಸಿದರು