ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮಹಿಳಾ ಸಮಾಜದ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಸೇವೆಯನ್ನು ನಿವೃತ್ತರಿಗೂ ವಿಸ್ತರಿಸಬೇಕು ಎಂದು ಹೇಳಿದರು.ಸಂಘದಲ್ಲಿ 150 ಜನ ಸದಸ್ಯರಿದ್ದಾರೆ. ಪ್ರಸಕ್ತ ಸಾಲಿನಲ್ಲಿ 20 ಮಂದಿ ಹೊಸ ಸದಸ್ಯತ್ವ ಪಡೆದಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಕೆ.ಟಿ.ಚೆಲುವೆ ಗೌಡ, ಎ.ಬಿ. ಶಿವದೇವಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಅವರು ಬರೆದ ನಾಡಹನಿ. ಕಥಸಂಕಲನ ವನ್ನು ಗೌರವ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ ಬಿಡುಗಡೆ ಮಾಡಿದರು ಸಹ ಕಾರ್ಯದರ್ಶಿ ಎಸ್.ಬಿ. ರಾಜಪ್ಪ ವರದಿ ಮಂಡಿಸಿದರು. ಕಾರ್ಯದರ್ಶಿ ಬಿ.ಎಂ ಆನಂದ ಸ್ವಾಗತಿಸಿ, ಖಜಾಂಜಿ ಎಸ್. ಆರ್. ಕೆಂಚೇಗೌಡ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಎಚ್.ಎನ್. ತಂಗಮ್ಮ ಕಳೆದ ಸಾಲಿನ ಮಹಾಸಭೆ ವರದಿಯನ್ನು ನೀಡಿದರು. ಟಿ.ಕೆ.ಮಾಚಯ್ಯ ನಿರೂಪಿಸಿದರು. ಎಚ್.ಜಿ.ಕುಟ್ಟಪ್ಪ ವಂದಿಸಿದರು.