ಪಟ್ಟಣಕ್ಕೆ ಸಮೀಪದ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ೩ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಉತ್ಸವ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣಕ್ಕೆ ಸಮೀಪದ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ೩ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಉತ್ಸವ ನಡೆಯಿತು.ಬೆಳಗ್ಗೆ ೯ ಗಂಟೆಗೆ ಸ್ವಾಮಿಗೆ ಕಲಾತತ್ವಾಧಿಶ ಹೋಮ, ನವಕಪ್ರಧಾನ, ಕಲಾ ಕಳಶ ಪ್ರತಿಷ್ಠೆ, ಕಲಾಭಿಷೇಕ, ಮಧ್ಯಾಹ್ನ ೧ ಗಂಟೆಗೆ ಮಹಾ ಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ೫ ಗಂಟೆಗೆ ಸ್ವಾಮಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ. ಸುಬ್ರಮಣ್ಯ, ಗೌರವಾಧ್ಯಕ್ಷ ಬಿ.ಡಿ. ಗೋವಿಂದ, ಉಪಾಧ್ಯಕ್ಷರಾದ ಸಿ.ಕೆ. ಮೋಹನ್, ಮಹೇಶ್ ತಿಮ್ಮಯ್ಯ, ಕಾರ್‍ಯದರ್ಶಿ ಟಿ.ಎ. ಪ್ರಕಾಶ್, ಸಹ ಕಾರ್‍ಯದರ್ಶಿ ಎಂ.ಜಿ. ಪ್ರವೀಣ್, ಖಜಾಂಚಿ ಎಂ.ಬಿ. ಉಮೇಶ್ ಮತ್ತಿತರ ಪದಾಧಿಕಾರಿಗಳ ನೇತೃತ್ವದಲ್ಲಿ ಪೂಜಾ ಕಾರ್‍ಯಕ್ರಮಗಳು, ಅನ್ನದಾನ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.