12 ಸಾವಿರ ಎಕರೆಯಲ್ಲಿ ಮತ್ತೊಂದು ಸೋಲಾರ್‌ ಪಾರ್ಕ್‌

KannadaprabhaNewsNetwork | Published : Dec 8, 2024 1:16 AM

ಸಾರಾಂಶ

ತನ್ನ ದುಡಿಮೆಯ ಆದಾಯದಲ್ಲಿ ಶೇ 10ರಷ್ಟು ಬಡವರ ಕಲ್ಯಾಣಕ್ಕೆ ಮೀಸಲಿಟ್ಟ ಸಮಾಜ ಸೇವಕ ಹಾಗೂ ಜನಪರ ಹೋರಾಟಗಾರ ಬತ್ತಿನೇನಿ ನಾಗೇಂದ್ರರಾವ್‌ (ನಾನಿ) ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯವಾದುದ್ದು ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಮೆಚ್ಚಿಗೆ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಪಾವಗಡ ತನ್ನ ದುಡಿಮೆಯ ಆದಾಯದಲ್ಲಿ ಶೇ 10ರಷ್ಟು ಬಡವರ ಕಲ್ಯಾಣಕ್ಕೆ ಮೀಸಲಿಟ್ಟ ಸಮಾಜ ಸೇವಕ ಹಾಗೂ ಜನಪರ ಹೋರಾಟಗಾರ ಬತ್ತಿನೇನಿ ನಾಗೇಂದ್ರರಾವ್‌ (ನಾನಿ) ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯವಾದುದ್ದು ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಮೆಚ್ಚಿಗೆ ವ್ಯಕ್ತಪಡಿಸಿದರು.ಅವರು ಶನಿವಾರ ತಾಲೂಕಿನ ಬಳಸಮುದ್ರ ಗ್ರಾಮದಲ್ಲಿ ಬತ್ತಿನೇನಿ ನಾಗೇಂದ್ರರಾವ್‌ ಸಹಕಾರದ ಮೇರೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಗೇಂದ್ರರಾವ್ ಸಹಕಾರದ ಮೇರೆಗೆ 300ಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಹಾಗೂ ಉಪಹಾರ ಸೇವನೆಯ ಉಚಿತ ಡಿನರ್‌ ಸೆಟ್‌ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿಯ ಸಮಾಜ ಸೇವಕ ಬತ್ತಿನೇನಿ ನಾಗೇಂದ್ರರಾವ್‌ ಆರೋಗ್ಯ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಇತರೆ ಕಳೆದ ಮೂರು ವರ್ಷದಿಂದ ಇದೇ ರೀತಿ ಈ ಭಾಗದಲ್ಲಿ ಅನೇಕ ಕಾರ್ಯಕ್ರಮದೊಂದಿಗೆ ಜನಪರ ಸೇವೆ ಕೈಗೊಂಡಿರುವುದು ಮಾದರಿಯಾಗಿದೆ.ಅವರು ಹಾಗೂ ಅವರ ಕುಟುಂಬಕ್ಕೆ ಭಗವಂತ ಸದಾ ಒಳ್ಳೆಯದ್ದನ್ನು ದಯಪಾಲಿಸಲಿ ಇವರ ಸೇವೆ ಇದೇ ರೀತಿ ಮುಂದುವರಿಸುವ ಮೂಲಕ ಜನತೆಗೆ ಉತ್ತಮ ಸೇವೆ ಕಲ್ಪಿಸಲಿ ಎಂದು ಅಶಿಸಿದರು.ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ನಾಗಲಮಡಿಕೆ ಹೋಬಳಿಯ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ಈಗಾಗಲೇ 13ಸಾವಿರ ಎಕರೆ ರೈತರ ಜಮೀನುಗಳಲ್ಲಿ ಸೌರಶಕ್ತಿ ಘಟಕಗಳು ಕಾರ್ಯಾರಂಭದಲ್ಲಿದ್ದು ಅನೇಕ ಮಂದಿಗೆ ಸೋಲಾರ್‌ ಘಟಕಗಳಲ್ಲಿ ಉದ್ಯೋಗವಕಾಶ ಸಿಕ್ಕಿದೆ. ಆರ್ಥಿಕ , ಸಾಮಾಜಿಕ ಪ್ರಗತಿ ಕಾಣುತ್ತಿದ್ದು, ಈ ಭಾಗದ ರೈತ ಹಾಗೂ ಕೃಷಿ ಕಾರ್ಮಿಕರ ಪ್ರಗತಿಗೆ ಇನ್ನೂ 12ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಈ ಸಂಬಂಧ ಗುತ್ತಿಗೆ ಆಧಾರದ ಮೇಲೆ ರೈತರ ಜಮೀನುಗಳನ್ನು ‍ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಇನ್ನೂ 10ವರ್ಷಗಳ ಕಾಲ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿರಲಿದ್ದು ಬಿಜೆಪಿ ,ಜೆಡಿಎಸ್‌ ಕುತಂತ್ರ ಇಲ್ಲಿ ವರ್ಕ್‌ಟ್‌ ಆಗುವುದಿಲ್ಲ. ಸಿಎಂ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ರಾಜ್ಯ ಸರ್ಕಾರ ಬಡವರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ವಿಪಕ್ಷ ಟೀಕೆಗಳಿಗೆ ಕಿವಿಗೊಡಬೇಡಿ ಎಂದರು.ಸಮಾಜ ಸೇವಕ ಬತ್ತಿನೇನಿ ನಾಗೇಂದ್ರರಾವ್‌ ಮಾತನಾಡಿ, ಈ ಭಾಗದ ಪ್ರಗತಿಗೆ ಶಾಸಕರಾದ ಎಚ್‌.ವಿ.ವೆಂಕಟೇಶ್‌ ಅವರು ವಿಶೇಷ ಅದ್ಯತೆ ನೀಡಿ ಕೆಲಸ ಮಾಡುತ್ತಿದ್ದು ಸರ್ಕಾರದ ನಾನಾ ಯೋಜನೆ ಅಡಿಯಲ್ಲಿ ಗಡಿ ಪ್ರದೇಶಗಳ ರಸ್ತೆ ಪ್ರಗತಿ, ಶಾಲಾ ಕಾಲೇಜು,ಸಿಸಿರಸ್ತೆ ಚರಂಡಿ ಹಾಗೂ ಇತರೆ ಪ್ರಗತಿಗೆ ಸಹಕರಿಸುತ್ತಿದ್ದು,ಈ ಭಾಗದ ಜನತೆಯ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಇದೇ ವೇಳೆ ಮುಖಂಡರಾದ ಎ.ಶಂಕರರೆಡ್ಡಿ,ಪುರಸಭೆ ಅಧ್ಯಕ್ಷ ‍ಪಿ.ಎಚ್‌.ರಾಜೇಶ್‌,ಪುರಸಭೆ ಸದಸ್ಯ ತೆಂಗಿನಕಾಯಿ ರವಿ,ಮುಖಂಡ ಸಾಂಬಸದಾಶಿವರೆಡ್ಡಿ,ಮಾಜಿ ಗ್ರಾಪಂ ಅಧ್ಯಕ್ಷರುಗಳಾದ ಬಳಸಮುದ್ರ ಮುತ್ಯಾಲಪ್ಪ, ಆಶೋಕ್, ಇಂಟೂರಾಯನಹಳ್ಳಿ ಮುತ್ಯಾಲಪ್ಪ, ಗೋವಿಂದಪ್ಪ, ಚಕ್ರಪ್ಪ, ಮಾಜಿ ಗ್ರಾಪಂ ಸದಸ್ಯ ಕ್ಯಾತಗಾನಚೆರ್ಲು ಬಾಬುರೆಡ್ಡಿ, ಪರಿಟಾಲ ರವಿಕುಮಾರ್‌ ಹಾಗೂ ಇತರೆ ಅನೇಕ ಮಂದಿ ಗಣ್ಯರು ಹಾಗೂ ಸ್ಥಳೀಯ ಗ್ರಾಪಂ ಸದಸ್ಯರು ಮತ್ತು ಕಾರ್ಯಕರ್ತರು ಇದ್ದರು.

Share this article